Horticulture

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿಗೆ ರೈತರಿಂದ ಅರ್ಜಿ ಅಹ್ವಾನ

25 December, 2020 7:04 AM IST By:
Drip Irriagation

ಧಾರವಾಡ -ತೋಟಗಾರಿಕೆ ಇಲಾಖೆಯು 2020-21ನೇ ಸಾಲಿನಲ್ಲಿ  ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಅರ್ಜಿ ಅಹ್ವಾನಿಸಿದೆ.

ಎಸ್ಸಿ-ಎಸ್ಟಿ ಪಂಗಡ ವರ್ಗದ ರೈತರಿಗೆ ಆದ್ಯತೆ ನೀಡಲಾಗುವುದು. ಸೂಕ್ಷ್ಮ ಹನಿ ನೀರಾವರಿ ಘಟಕಗಳನ್ನು ಅಳವಡಿಸಿದ ಪ್ರತಿ ರೈತ ಫಲಾನುಭವಿಗೆ ಮೊದಲ 2 ಹೆಕ್ಟೇರ್ ಪ್ರದೇಶದವರೆಗೆ ಶೇ. 90 ರಷ್ಟು ಮತ್ತು 2.00 ಹೆಕ್ಟೇರ್ ಮೇಲ್ಪಟ್ಟು 5 ಹೆಕ್ಟೇರ್ ವರೆಗೆ (ಒಟ್ಟು ಗರಿಷ್ಠ 5.00 ಹೆಕ್ಟೇರ್) ಮಾರ್ಗಸೂಚಿಯನ್ವಯ ಶೇಕಡಾವಾರು (ಶೇ. 45 ರಷ್ಟು) ಮಿತಿಯೊಳಗೆ ಸಹಾಯಧನದ ಸೌಲಭ್ಯವಿರುತ್ತದೆ.

ತರಕಾರಿ ಮತ್ತು ಹೂ ಬೆಳೆಗಳಿಗೆ 2.00 ಹೆಕ್ಟೇರ್ ಪ್ರದೇಶಕ್ಕೆ ಮಾತ್ರ ಸಹಾಯಧನ ನೀಡಲಾಗುವುದು. ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸುವ ಪೂರ್ವ ತಾಲೂಕಾ ತೋಟಗಾರಿಕೆ ಕಛೇರಿಯಲ್ಲಿ ಹೆಸರು ನೊಂದಾಯಿಸಿ ಕಾರ್ಯದೇಶ ಪಡೆಯತಕ್ಕದ್ದು, ಕಾರ್ಯದೇಶ ಪಡೆಯದೇ ಅಳವಡಿಸಿಕೊಂಡಲ್ಲಿ ಸಹಾಯ ಧನಕ್ಕೆ ಪರಿಗಣಿಸಲಾಗುವುದಿಲ್ಲ.

 ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ರವರ ಕಚೇರಿಗೆ ಸಂಪರ್ಕಿಸಲು ಪ್ರಕಟಿಸಿದೆ.