Horticulture

ಲಿಂಬೆ ಬೆಳೆಗಾರರಿಗೆ ಕೊಯ್ಲು ಸಾಮಗ್ರಿ ಹಾಗೂ ತಾಡಪಾಲು ವಿತರಿಸಲು ಅರ್ಜಿ ಆಹ್ವಾನ

18 March, 2021 10:13 PM IST By:

ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿಯಿಂದ ವಿಜಯಪುರ ಜಿಲ್ಲೆ ಲಿಂಬೆ ಬೆಳೆಗಾರರಿಗೆ ಉಪಯುಕ್ತ ಪರಿಕರಗಳಾದ ಸಿಟ್ರಸ್‌ ಸ್ಪೆಷಲ್, ಪ್ಲಾಸ್ಟಿಕ್ಸ್ ಕ್ರೇಟ್ಸ್‌, ಗೋಣಿಚೀಲ, ಕೊಯ್ಲು ಸಾಮಗ್ರಿ ಹಾಗೂ ತಾಡಪಾಲು ವಿತರಿಸಲಾಗುತ್ತಿದೆ ಎಂದು ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

 ಈ ಸಾಮಗ್ರಿಗಳನ್ನು ಪಡೆಯಲು ಲಿಂಬೆ ಬೆಳೆಗಾರರು ನಿಗದಿತ ಅರ್ಜಿಯೊಂದಿಗೆ ಭಾವಚಿತ್ರ, ಆಧಾರ್, ಮತದಾರರ ಗುರುತಿನ ಚೀಟಿ, ಖಾತೆ ಉತಾರ್‌, ಲಿಂಬೆ ಬೆಳೆ ದೃಢೀಕರಣ ಪ್ರಮಾಣ ಪತ್ರ, ಚಾಲ್ತಿ ವರ್ಷದ ಪಹಣಿ (ಉತಾರೆ) ನೀಡಬೇಕು. ನಿಗದಿತ ಅರ್ಜಿಯನ್ನು www.limeboard.karnatak.gov.inನಿಂದ ಅಥವಾ ಮಂಡಳಿಯ ಕಚೇರಿಯಿಂದ ಪಡೆಯಬಹುದು.

ಸಹಾಯಧನಕ್ಕೆ ಅರ್ಜಿ ಆಹ್ವಾನ

 ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಕಾರ್ಯಕ್ರಮ ಯೋಜನೆಗಳಡಿ ಶಿಕ್ಷಣಕ್ಕಾಗಿ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಿದೆ.

ಅವಳಿ ನಗರದಲ್ಲಿ ವಾಸಿಸುತ್ತಿರುವ ಐಐಟಿ/ಡಿಪ್ಲೊಮಾ ಅಥವಾ ವೃತ್ತಿಪರ ಕೋರ್ಸ್‌ ಅನ್ನು ಖಾಸಗಿ ವಿದ್ಯಾ ಸಂಸ್ಥೆಗಳಲ್ಲಿರುವ ವಿದ್ಯಾರ್ಥಿಗಳಿಗೆ 20 ಸಾವಿರ, ಟೂಲ್ ಕಿಟ್ ಖರೀದಿ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನಕ್ಕೆ ತರಬೇತಿ ಪಡೆಯವ ವಿದ್ಯಾರ್ಥಿಗಳಿಗೆ 30 ಸಾವಿರ, ಶೌಚಾಲಯ ನಿರ್ಮಾಣಕ್ಕೆ 20 ಸಾವಿರ, ಬಿಪಿಎಲ್ ಕಾರ್ಡ್ ಹೊಂದಿರುವ ಎಸ್‌ಸಿ  ಹೆಣ್ಣು ಮಕ್ಕಳಿಗೆ ಬ್ಯೂಟಿಷನ್‌ ಕಿಟ್ ಖರೀದಿಗೆ 25 ಸಾವಿರ, ವಾಹನ ತರಬೇತಿ ಹಾಗೂ ಚಾಲನಾ ಪರವಾನಗಿ ಹೊಂದಿದ ನಿರುದ್ಯೋಗಿ ಯುವಕರಿಗೆ ರಿಕ್ಷಾ ಖರೀದಿಗೆ 50 ಸಾವಿರ, ಬಿಪಿಎಲ್ ಕಾರ್ಡ್ ಹೊಂದಿರುವ ಎಸ್‌ಸಿ ಫಲಾನುಭವಿಗಳಿಗೆ ಮನೆ ದುರಸ್ತಿಗೆ 50 ಸಾವಿರ ಹಾಗೂ ಬಿ.ಇ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಖರೀದಿಗೆ 50 ಸಾವಿರ ಸಹಾಯಧನ ನೀಡಲಾಗುವುದು.

ಪಾಲಿಕೆ ವಲಯ ಕಚೇರಿಗಳಿಂದ ಅರ್ಜಿ ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ದಾಖಲೆಗಳೊಂದಿಗೆ ದ್ವಿಪ್ರತಿಯಲ್ಲಿ ಮೇ 3ರ ಸಂಜೆ 5ರೊಳಗೆ ವಲಯ ಕಚೇರಿಗಳಿಗೆ ಸಲ್ಲಿಸಬೇಕು ಎಂದು ಆಯುಕ್ತ ಡಾ. ಸುರೇಶ ಇಟ್ನಾಳ್ ತಿಳಿಸಿದ್ದಾರೆ.