Government Schemes

ರೈತ ಸಿರಿ ಯೋಜನೆ ಎಂದರೇನು? ಈ ಯೋಜನೆಯಡಿ ಸಿರಿಧಾನ್ಯ ಬೆಳೆಗಾರರಿಗೆ ಸಿಗುವ ಪ್ರೋತ್ಸಾಹ ಧನ ಎಷ್ಟು? ಇಲ್ಲಿದೆ ಮಾಹಿತಿ

20 June, 2023 1:43 PM IST By: Kalmesh T
What is raitha siri scheme? How much subsidy will the millets growers get under this scheme?

Raitha siri scheme: ಪೌಷ್ಟಿಕ ಆಹಾರ, ರೈತರ ಭದ್ರತೆ, ಸುಸ್ಥಿರ ಕೃಷಿ ಮತ್ತು ಪರಿಸರದ ಸಂರಕ್ಷಣೆಗೆ ಪೂರಕವಾಗಿರುವ ಹಿನ್ನೆಲೆಯಲ್ಲಿ ಸಿರಿಧಾನ್ಯಗಳ ಬೆಳೆಯನ್ನು ಬೆಳೆಯಲು ರೈತರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರೈತ ಸಿರಿ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಇಲ್ಲಿದೆ ಈ ಕುರಿತಾದ ಮಾಹಿತಿ

2022-23ನೇ ಸಾಲಿನ ರೈತಸಿರಿ ಯೋಜನೆಯ ಅನುಷ್ಠಾನಕ್ಕಾಗಿ ರಾಜ್ಯವಲಯದಡಿ ಒಟ್ಟು ರೂ.500.00ಲಕ್ಷಗಳ ಅನುದಾನವನ್ನು ಒದಗಿಸಲಾಗಿದ್ದು, ಈ ಅನುದಾನದಲ್ಲಿ ಹಿಂದಿನ ಸಾಲಿನ (2021-22ನೇ ಸಾಲಿನ) ರೈತಸಿರಿ ಯೋಜನೆಯಡಿ ಪ್ರೋತ್ಸಾಹಧನ ನೀಡಲು ಬಾಕಿ ಇರುವ ರೈತರಿಗೆ ಪ್ರೋತ್ಸಾಹಧನ ನೀಡಲು ಆದ್ಯತೆ ನೀಡುವುದು.

ನಂತರ 2021-22ನೇ ಸಾಲಿನ ಬೇಸಿಗೆ ಹಂಗಾಮಿನಲ್ಲಿ ಬೆಳ ಸಮೀಕ್ಷೆ ಆಧಾರದ ಮೇರೆಗೆ ಸಿರಿಧಾನ್ಯಗಳಾದ ಊದಲು, ನವಣೆ, ಹಾರಕ, ಕೊರಲೆ, ಸಾಮೆ ಹಾಗು ಬರಗು ಸಿರಿಧಾನ್ಯಗಳನ್ನು ಬೆಳೆದಿರುವ ರೈತರಿಗೆ ರಾಜ್ಯವಲಯದಡಿ ರೂ10,000 ಪ್ರತಿ ಹೆಕ್ಟೇರ್ ಗೆ (ಗರಿಷ್ಠ 2 ಹೆಕ್ಟೇರ್) ಪ್ರೋತ್ಸಾಹಧನ ನೀಡುವುದು.

ರೈತಸಿರಿ ಯೋಜನೆಯ ಮುಖ್ಯ ಉದ್ದೇಶಗಳು | Main objective of Raitha siri scheme

* ರಾಜ್ಯದಲ್ಲಿನ ಸಿರಿಧಾನ್ಯಗಳ ಪ್ರದೇಶ ವಿಸ್ತರಣೆ ಹಾಗೂ ಉತ್ಪಾದನೆಯನ್ನು ಹೆಚ್ಚಿಸುವುದು.

* ಸಿರಿಧಾನ್ಯಗಳು ಪೌಷ್ಟಿಕ ಆಹಾರ, ರೈತರ ಭದ್ರತೆ, ಸುಸ್ಥಿರ ಕೃಷಿ ಮತ್ತು ಪರಿಸರದ ಸಂರಕ್ಷಣೆಗೆ ಪೂರಕವಾಗಿರುವ ಹಿನ್ನೆಲೆಯಲ್ಲಿ ಸಿರಿಧಾನ್ಯಗಳ ಬೆಳೆಯನ್ನು ಬೆಳೆಯಲು ರೈತರಿಗೆ ಪ್ರೋತ್ಸಾಹಿಸುವುದು.

* ಅತೀ ಕಡಿಮೆ ಮಳೆ ಹಾಗೂ ಕಡಿಮೆ ಫಲವತ್ತತೆಯುಳ್ಳ ಜಮೀನಿನ ಸದ್ಬಳಕೆ ಮಾಡುವುದು.

* ಸಿರಿಧಾನ್ಯಗಳ ಬಗ್ಗೆ ಜಾಗೃತಿ ಮೂಡಿಸಿ, ಮಾರುಕಟ್ಟೆ, ಸಂಪರ್ಕ ಹೆಚ್ಚಿಸಿ ಕೃಷಿ ಮತ್ತು ಆಹಾರದ ಮುಖ್ಯ ವಾಹಿನಿಗೆ ತರುವುದು

ಮುಂದುವರೆದು, ಸಿರಿಧಾನ್ಯಗಳ ಸಂಸ್ಕರಣೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರೈತಸಿರಿ ಯೋಜನೆಯಡಿ ಸಿರಿಧಾನ್ಯ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ, ವರ್ಗೀಕರಣ, ಪ್ಯಾಕಿಂಗ್ ಮತ್ತು ಬ್ರಾಂಡಿಂಗ್ ಘಟಕಗಳಿಗೆ ಸಹಾಯಧನ ನೀಡಲು ಸಹ ಅವಕಾಶ ಕಲ್ಪಿಸಲಾಗಿರುತ್ತದೆ.

ಯೋಜನೆಯಡಿ ಪ್ರಸ್ತಾವನೆಯ ಯಂತ್ರೋಪಕರಣಗಳ ಒಟ್ಟು ವೆಚ್ಚದ ಮೇಲೆ ಸಹಾಯಧನವಾಗಿ ಶೇ. 50ರಷ್ಟು ಅಥವಾ ಗರಿಷ್ಠ ರೂ.10.00 ಲಕ್ಷಗಳವರೆಗೆ ಪಡೆಯಬಹುದಾಗಿದ್ದು, ಈ ಸಂಬಂಧ ಜಿಲ್ಲೆಗಳಲ್ಲಿ ಆಸಕ್ತ ಕೃಷಿಕರು/ಗುಂಪುಗಳಿಂದ ಪ್ರಸ್ತಾವನೆಗಳನ್ನು ಪಡೆದು ಪರಿಶೀಲಿಸಿ ಸೂಕ್ತ ದಾಖಲಾತಿಗಳೊಂದಿಗೆ ಕೇಂದ್ರ ಕಚೇರಿಯ ಅನುಮೋದನೆಗೆ ಸಲ್ಲಿಸುವುದು.

ಅದಲ್ಲದೇ, ಸಿರಿಧಾನ್ಯ ಉತ್ಪನ್ನಗಳಿಗೆ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಕಾರ್ಯಕ್ರಮಗಳು- ತಾಲ್ಲೂಕು/ ಜಿಲ್ಲೆ/ರಾಜ್ಯ/ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಾಗಾರ/ಮೇಳ/ವಸ್ತು ಪ್ರದರ್ಶನ/ ಇನ್ನಿತರೆ ಸಂಬಂಧಿತ ಕಾರ್ಯಕ್ರಮಗಳ ಆಯೋಜನೆ/ಭಾಗವಹಿಸುವಿಕೆ.

ಮುಂದುವರೆದು, 2022- 23ನೇ ಸಾಲನ್ನು ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಘೋಷಿಸಿರುವ ಹಿನ್ನಲೆಯಲ್ಲಿ ಇದರ ಪೂರಕವಾಗಿ ರಾಜ್ಯದಲ್ಲಿ ಸಿರಿಧಾನ್ಯ ಸಂಬಂಧಿತ ಕಾರ್ಯಕ್ರಮಗಳ ಅನುಷ್ಠಾನ. ಈ ಸಂಬಂಧದ ಸುತ್ತೋಲೆಯನ್ನು ನಂತರದ ದಿನಗಳಲ್ಲಿ ನೀಡಲಾಗುವುದು.

ಸಾಂದರ್ಭಿಕ ಚಿತ್ರ

"ಆರ್.ಕೆ.ವಿ.ವೈ ರೈತಸಿರಿ"ಯೋಜನೆಯ ಅನುಷ್ಠಾನ ಮಾರ್ಗಸೂಚಿ:

2022-23 ನೇ ಸಾಲಿನಲ್ಲಿ ಸಿರಿಧಾನ್ಯ ಬೆಳೆಯುವ ರೈತರಿಗೆ RKVY ಯೋಜನೆಯಡಿ ಪ್ರತಿ ಹೆಕ್ಟೇರ್ ಗೆ ರೂ.6000 ಪ್ರೋತ್ಸಾಹಧನ (ಗರಿಷ್ಠ 2 ಹೆಕ್ಟೇರ್) DBT ಮುಖಾಂತರ :

2022-23 ನೇ ಸಾಲಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪಮುಖ ಸಿರಿಧಾನ್ಯಗಳಾದ ಊದಲು, ನವಣೆ, ಹಾರಕ, ಕೊರಲೆ, ಸಾಮೆ ಮತ್ತು ಬರಗು ಸಿರಿಧಾನ್ಯಗಳನ್ನು (ರಾಗಿ, ಜೋಳ ಮತ್ತು ಸಜ್ಜೆ ಹೊರತುಪಡಿಸಿ) ಬೆಳೆದ ರೈತರಿಗೆ ಬೆಳೆ ಸಮೀಕ್ಷೆ ಆಧಾರದ ಮೇರೆಗೆ ಪ್ರತಿ ಹೆಕ್ಟೇರ್ ಗೆ 6000 ಸಾವಿರ ರೂ. ಮಾತ್ರ ನಗದು ಪ್ರೋತ್ಸಾಹಧನವನ್ನು ಆರ್.ಕೆ.ವಿ.ವೈ ರೈತಸಿರಿ ಯೋಜನೆ ಲೆಕ್ಕ ಶೀರ್ಷಿಕೆ: 2401-00-800-1-57 ರಡಿಯ ರೈತಸಿರಿ ಯೋಜನೆಯಡಿ ನೇರ ಸೌಲಭ್ಯ ವರ್ಗಾವಣೆ ಮೂಲಕ (Direct Benefit Transfer) ರೈತರ ಬ್ಯಾಂಕ್‌ ಖಾತೆಗೆ ಜಮೆ ಮಾಡುವ ಮೂಲಕ ಹೆಚ್ಚಿನ ರೈತರು ಸಿರಿಧಾನ್ಯಗಳನ್ನು ಬೆಳೆಯಲು ಪ್ರೋತ್ಸಾಹಿಸುವುದು.

ಫಲಾನುಭವಿಗಳ ಆಯ್ಕೆ:

  1. ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು ಬೆಳೆ ಸಮೀಕ್ಷೆ ಆಧಾರದ ಮೇರೆಗೆ ತಮ್ಮ ಜಿಲ್ಲೆಗೆ ತಾಲ್ಲೂಕುವಾರು ತಾತ್ಕಾಲಿಕವಾಗಿ ಗುರಿಯನ್ನು ನಿಗದಿಪಡಿಸಿಕೊಳ್ಳವುದು.
  2. ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು ಈ ಯೋಜನೆಯ ಬಗ್ಗೆ ಸ್ಥಳೀಯ ಪತ್ರಿಕೆಯಲ್ಲಿ ರೈತರಿಗೆ ಮಾಹಿತಿ ನೀಡಿ ರೈತರು ಸಂಬಂಧಿಸಿದ ರೈತ ಸಂಪರ್ಕ ಕೇಂದ್ರಗಳಲ್ಲಿ ತಮ್ಮ ಹೆಸರನ್ನು FRUITS ID ಯೊಂದಿಗೆ ನೋಂದಾಯಿಸಿಕೊಳ್ಳಲು ಗಡುವು ನೀಡುವುದು.
  3. ಜಂಟಿ ಖಾತೆಗೆ ಸಂಬಂಧಿಸಿದ ಸರ್ವೆ ನಂಬರ್ ಗಳಲ್ಲಿ ಸಿರಿಧಾನ್ಯ ಬೆಳೆ ಬೆಳೆಯುವ ರೈತನಿಗೆ FRUITS ID ಯೊಂದಿಗೆ ನೋಂದಾಯಿಸುವುದರ ಜೊತೆಗೆ ಇತರೆ ಖಾತೆದಾರರಿಂದ ಒಪ್ಪಿಗೆ ಪತ್ರ ಪಡೆಯುವುದು.
  4. ನೋಂದಾಯಿತ ಸಿರಿಧಾನ್ಯ ಬೆಳೆದ ರೈತರಿಗೆ ಬೆಳೆ ಸಮೀಕ್ಷೆಯಲ್ಲಿ ಬೆಳೆಯನ್ನು Upload ಮಾಡಲು ತಿಳಿಸುವುದು / PR ಗಳಿಂದ ಕಡ್ಡಾಯವಾಗಿ, ಬೆಳೆ ಸಮೀಕ್ಷೆಯಲ್ಲಿ ನೊಂದಾಯಿಸಿಕೊಳ್ಳಲು ರೈತರಿಗೆ ತಿಳಿಸುವುದು.
  5. ಕಾನೂನು ರೀತ್ಯ ಪಜಾ/ಪಪಂ/ಅಲ್ಪಸಂಖ್ಯಾತರು/ಮಹಿಳೆಯರು/ ಹಿಂದುಳಿದ ವರ್ಗದ
  6. ರೈತರಿಗೆ ಆದ್ಯತೆ ನೀಡುವುದು. ಪ್ರತಿ ಫಲಾನುಭವಿ ರೈತರಿಗೆ ಗರಿಷ್ಠ ಎರಡು ಹೆಕ್ಟೇರ್ ಗೆ ಮಾತ್ರ ಸೀಮಿತವಾಗುವಂತೆ ಪ್ರೋತ್ಸಾಹಧನ ನೀಡುವುದು. 6.
  7. ಫಲಾನುಭವಿಗಳು ಸಿರಿಧಾನ್ಯ ಬೆಳೆದಿರುವ ವಿಸ್ತೀರ್ಣಕ್ಕೆ ಸಮನಾಗಿ ಪ್ರೋತ್ಸಾಹಧನ ನೀಡುವುದು.
  8. 2022-23 ನೇ ಸಾಲಿನಲ್ಲಿ NFSM ಯೋಜನೆಯಡಿ ಸಿರಿಧಾನ ಪ್ರಾತ್ಯಕ್ಷಿಕೆಯ ಫಲಾನುಭವಿಗಳು ರೈತಸಿರಿ ಯೋಜನೆಯಡಿ ಪ್ರೋತ್ಸಾಹಧನ ಪಡೆಯಲು ಅರ್ಹವಿರುವುದಿಲ್ಲ.

ಮತ್ಸ್ಯ ಸಂಪದ ಸಹಾಯಧನಕ್ಕೆ ಅರ್ಜಿ ಆಹ್ವಾನ: ಅರ್ಜಿ ಸಲ್ಲಿಕೆಗೆ ಜುಲೈ 16 ಕೊನೆ ದಿನ