Government Schemes

ಈ ರೈತರು ಇನ್ನು ಮುಂದೆ ಪಿಎಂ ಕಿಸಾನ್ ಯೋಜನೆಯ ಪ್ರಯೋಜನಗಳನ್ನು ಪಡೆಯುವುದಿಲ್ಲ!

16 September, 2023 3:27 PM IST By: Maltesh
These farmers will no longer get the benefits of PM Kisan scheme,

ಭಾರತ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಮತ್ತು ಅದು ರೈತರಿಗೆ ಹೇಗೆ ಪ್ರಯೋಜನಕಾರಿಯಾಗಿದೆ ಎಂಬುದರ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ. ದೇಶದ ಅನೇಕ ರೈತರು ಈ ಯೋಜನೆಗೆ ಸೇರ್ಪಡೆಗೊಳ್ಳುವ ಮೂಲಕ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. 

ಈ ಯೋಜನೆಯಡಿಯಲ್ಲಿ, ಪ್ರತಿ ವರ್ಷ 6000 ರೂಪಾಯಿಗಳನ್ನು ಕೇಂದ್ರ ಸರ್ಕಾರದಿಂದ ರೈತರ ಖಾತೆಗಳಿಗೆ ಮೂರು ಕಂತುಗಳಲ್ಲಿ ಕಳುಹಿಸಲಾಗುತ್ತದೆ. ಈ ಯೋಜನೆಯ 14ನೇ ಕಂತಿನ ದೇಶದ ರೈತರು ಈಗಾಗಲೇ ಪಡೆದಿದ್ದು, ಇದೀಗ 15ನೇ ಕಂತಿಗಾಗಿ ರೈತರು ಕಾಯುತ್ತಿದ್ದಾರೆ. ಇನ್ನು ಕೆಲವೇ ತಿಂಗಳಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 15ನೇ ಕಂತು ಕೂಡ ರೈತರ ಖಾತೆಗೆ ಬರಲಿದೆ ಎಂದು ಅಂದಾಜಿಸಲಾಗಿದೆ. ಆದರೆ ಕೆಲವು ರೈತರನ್ನು ಭಾರತ ಸರ್ಕಾರ ಈ ಯೋಜನೆಯಿಂದ ಹೊರಗಿಟ್ಟಿದೆ.

ವಾಸ್ತವವಾಗಿ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಿಂದ ಬಿಹಾರ ರಾಜ್ಯದ ಸುಮಾರು 81,000 ರೈತರನ್ನು ಈ ಯೋಜನೆಗೆ ಅನರ್ಹರೆಂದು ಪರಿಗಣಿಸಲಾಗಿದೆ.

ಕಾರಣಗಳೇನು?

ಸರ್ಕಾರಿ ಹುದ್ದೆಗಳಲ್ಲಿರುವ ನೌಕರರು.

ಸಾಂಸ್ಥಿಕ ಭೂಮಿ ಹೊಂದಿರುವವರು.

ರಾಜ್ಯ ಅಥವಾ ಕೇಂದ್ರ ಸರ್ಕಾರದ ಸೇವೆ ಸಲ್ಲಿಸುತ್ತಿರುವ ಅಥವಾ ನಿವೃತ್ತ ಅಧಿಕಾರಿಗಳು ಮತ್ತು ನೌಕರರು.

ಪಿಂಚಣಿದಾರರು, ಎಂಜಿನಿಯರ್‌ಗಳು, ವೈದ್ಯರು ಮತ್ತು ವಕೀಲರ ಕುಟುಂಬಗಳು ಇತ್ಯಾದಿ.

ಈ ರೈತರಿಗೆ ಮಾತ್ರ ಯೋಜನೆಯ ಲಾಭ ಸಿಗಲಿದೆ

ಸಣ್ಣ ಮತ್ತು ಆರ್ಥಿಕವಾಗಿ ದುರ್ಬಲ ರೈತರು

ಜಮೀನು ಹೊಂದಿರುವ ರೈತ ಕುಟುಂಬಗಳು ಇತ್ಯಾದಿ.

ಪಿಎಂ ಕಿಸಾನ್ ಸಹಾಯವಾಣಿ ಸಂಖ್ಯೆ

ಈ ಯೋಜನೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗೆ ನಮ್ಮ ರೈತ ಸಹೋದರರು ಇಮೇಲ್ ಐಡಿ pmkisan-ict@gov.in ಮತ್ತು ಸಹಾಯವಾಣಿ ಸಂಖ್ಯೆ- 155261 ಅಥವಾ 1800115526 ಅನ್ನು ಸಂಪರ್ಕಿಸಬಹುದು.