Government Schemes

ಶೇ 90 ರಷ್ಟು ಸಬ್ಸಿಡಿಯಲ್ಲಿ ತಾಡಪತ್ರಿ ವಿತರಣೆ..ಈ ಜೆಲ್ಲೆಗಳ ರೈತರಿಂದ ಅರ್ಜಿ ಆಹ್ವಾನ

28 April, 2022 2:13 PM IST By: Maltesh

ಆತ್ಮೀಯ ರೈತ ಬಾಂಧವರೇ ಎಲ್ಲ ರೈತರಿಗೆ ತಾಡಪತ್ರಿ ಅವಶ್ಯಕತೆ ಇದ್ದೇ ಇರುತ್ತದೆ ಏಕೆಂದರೆ, ಆಧುನಿಕ ದಿನಗಳಲ್ಲಿ ರಾಶಿ ಸಮಯದಲ್ಲಾಗಲಿ,ಅಥವಾ ರೈತರು ಹೆಚ್ಚಾಗಿ ಬಳಸುವುದು ಕೃಷಿಹೊಂಡ ಗಳಿಗೆ, ತಡಪತ್ರಿ ಅತ್ಯಂತ ಅವಶ್ಯಕತೆ ಇದೆ ಹೀಗಾಗಿ ಮಾರುಕಟ್ಟೆಯಲ್ಲಿ ಅದರ ಬೆಲೆ ಕಡಿಮೆಯಂತೂ ಇರುವುದಿಲ್ಲ, ಹೀಗಾಗಿ ರೈತರಿಗೆ ಸಬ್ಸಿಡಿ ದರದಲ್ಲಿ ತಾಡಪತ್ರಿ ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ,ಅರ್ಜಿಯನ್ನು ಮೊದಲು ಸಲ್ಲಿಸಿದವರಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ.

ಸದ್ಯ ಕೃಷಿ ಇಲಾಖೆಯ ವಿವಿಧ ಯೋಜನೆಗಳಡಿ 2021-22ನೇ ಸಾಲಿನಲ್ಲಿ ರೈತರಿಗೆ ಸಹಾಯಧನದಲ್ಲಿ ತಾಡಪತ್ರಿ ವಿತರಿಸಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.ಈಗಾಗಲೇ ಕರ್ನಾಟಕದಲ್ಲಿ ಹಲವಾರು ಜಿಲ್ಲೆಗಳಲ್ಲಿ ತಾಡಪತ್ರಿ ಯನ್ನು ರೈತರಿಗೆ ವಿತರಣೆ ಮಾಡಲಾಗಿದೆ, ಆದರೆ ಕೆಲವೊಂದು ಜಿಲ್ಲೆಗಳಲ್ಲಿ ಇನ್ನೂ ಮಾಡಿಲ್ಲ ಮುಂದಿನ ದಿನಗಳಲ್ಲಿ ಅವುಗಳಲ್ಲಿಯೂ ರೈತರಿಗೆ ತಾಡಪತ್ರಿ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ರೈತರು ಅರ್ಜಿಯನ್ನು ಸಲ್ಲಿಸುವ ಮೂಲಕ ಸಹಾಯಧನದಲ್ಲಿ ತಾಡಪತ್ರಿ ಯನ್ನು ಖರೀದಿಸಬಹುದು. ಈ ಕುರಿತು ಅಗತ್ಯ ದಾಖಲೆ ಸಲ್ಲಿಸಿ ಸಹಾಯಧನದಲ್ಲಿ ತಾಡಪತ್ರಿಗಳನ್ನು ಪಡೆದುಕೊಳ್ಳಬೇಕೆಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಬನಾ ಎಂ. ಷೇಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಷ್ಯಾದಿಂದ ಅಪಾರ ಬೇಡಿಕೆಯಿದ್ದರೂ 200 ರೂ. ಕುಸಿತ ಕಂಡ ಗೋಧಿ..ಕಾರಣವೇನು..?

Big Announce! ರೈತರ income ಹೆಚ್ಚಿಸಲು 100 ಕೋಟಿ ಮೀಸಲು CM ಬೊಮ್ಮಾಯಿ ಅವರಿಂದ Big GIft, ಬಜೆಟ್‌ನಲ್ಲಿ ಘೋಷಣೆ

ಟಾರ್ಪಲಿನ್ ಒಟ್ಟು ಮೊತ್ತ 2142 ರೂಪಾಯಿಆಗಿದ್ದು, ಇದರಲ್ಲಿ ಸಾಮಾನ್ಯ ವರ್ಗದ ರೈತರಿಗೆ ಶೇ. 50 ರಷ್ಟು ಸಹಾಯಧನ ಸಿಗಲಿದೆ. ಅಂದರೆ ರೈತರು 1071 ರೂಪಾಯಿ ವಂತಿಕೆ ಕಟ್ಟಿ ತಾಡಪತ್ರಿ ಪಡೆಯಬಹುದು. ಅದೇ ರೀತಿ ಪರಿಶಿಷ್ಚ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ. 90 ರಷ್ಟು ಸಹಾಯಧನ ಸಿಗಲಿದೆ. ಅಂದರೆ ಎಸ್.ಸಿ ಎಸ್.ಟಿ ರೈತರು ಕೇವಲ 214 ರೂಪಾಯಿ ಪಾವತಿಸಿ ತಾಡಪತ್ರಿ ಪಡೆಯಬಹುದು.

ಮಡಿಕೇರಿ ತಾಲೂಕು ಕಸಬಾ, ನಾಪ್ಲೋಕ್ಲು, ಭಾಗಮಂಡಲ, ಸೋಮವಾರಪೇಟಿ ತಾಲೂಕು ಕಸಬಾ, ಕುಶಾಲನಗರ, ಸಂಟಿಕೊಪ್ಪ, ಶನಿವಾರಸಂತೆ, ಶಾಂತಳ್ಳಿ, ವಿರಾಜಪೇಟೆ ತಾಲೂಕು ಕಸಬಾ, ಪೊನ್ನಂಪೇಟೆ, ಅಮ್ಮತ್ತಿ, ಬಾಳೆಲೆ, ಹುದಿಕೇರಿ ಹಾಗೂ ಶ್ರೀಮಂಗಲ ರೈತ ಸಂಪರ್ಕ ವ್ಯಾಪ್ತಿಯ ರೈತರು ಅರ್ಜಿ ಸಲ್ಲಿಸಿ ಸಹಾಯಧನದಲ್ಲಿ ತಾಡಪತ್ರಿ ಪಡೆಯಬಹುದು.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ರೈತರಿಂದಲೂ ಅರ್ಜಿ ಆಹ್ವಾನ

ಮುದ್ದೇಬಿಹಾಳ ತಾಲೂಕಿನ ಮುದ್ದೇಬಿಹಾಳ ಹೋಬಳಿ, ನಾಲತವಾಡ ಹೋಬಳಿ, ಢವಳಗಿ ಹೋಬಳಿ ಮತ್ತು ತಾಳಿಕೋಟೆ ತಾಲೂಕಿನಲ್ಲಿ 2021-22ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ತಾಡಪತ್ರಿಗಾಗಿ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಪಿಎಂ ಕಿಸಾನ್: 11ನೇ ಕಂತು ಶೀಘ್ರದಲ್ಲೆ ಬಿಡುಗಡೆ! ಫಲಾನುಭವಿಗಳ ಪಟ್ಟಿಯಲ್ಲಿ ಈಗಲೇ ನಿಮ್ಮ ಹೆಸರು ಪರಿಶೀಲಿಸಿ

7th Pay Commision: ಈ ತಿಂಗಳ ಅಂತ್ಯದೊಳಗೆ ಹೆಚ್ಚುತ್ತಾ ಕೇಂದ್ರ ಸರ್ಕಾರಿ ನೌಕರರ HRA..?

ಅರ್ಜಿ ಸಲ್ಲಿಸಲು ರೈತರು ಆಧಾರ್ ಕಾರ್ಡ್, ಪಹಣಿ ಮತ್ತು ಎಸ್ಸಿ,ಎಸ್ಟಿ ಪಂಗಡದವರು ಜಾತಿ ಮತ್ತು ಆದಾಯ ಪ್ರಮಾಣ  ಪತ್ರವನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು. ರೈತರು ಕಡ್ಡಾಯವಾಗಿ ಎಫ್ಐಡಿ ನಂಬರ್ ಹೊಂದಿರಬೇಕು. ಭರ್ತಿ ಮಾಡಿದ ಅರ್ಜಿಯನ್ನು ಮೇ 2 ರೊಳಗಾಗಿ ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬೇಕು. ಮೇ 11 ರಂದು ಆಯಾ ತಾಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಬಂದ ಅರ್ಜಿಗಳನ್ನು ಪರಿಶೀಲಿಸಿ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಕೃಷಿ ನಿರ್ದೇಶಕ ರೇವಣೇಪ್ಪ ಮನಗೂಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ರೈತರಿಂದಲೂ ಅರ್ಜಿ ಆಹ್ವಾನ

ಭಾಲ್ಕಿ ತಾಲೂಕಿನ  ಹಲಬರ್ಗಾ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯಲ್ಲಿ 2021-22ನೇ ಸಾಲಿನಲ್ಲಿ ತಾಡಪಲ್ ವಿತರಿಸಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ತಾಡಪಲ್ ವಿತರಿಸಲಾಗುತ್ತಿದ್ದು, ಮೇ 3 ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ರೈತರಿಗೇಕೆ ಸಬ್ಸಿಡಿಯಲ್ಲಿ ತಾಡಪತ್ರಿ ವಿತರಣೆ

ರೈತರ ಬೆಳಗಳಿಗೆ ಮಳೆ, ಗಾಳಿಯಿಂದ ಕಾಪಾಡಲು ತಾಡಪತ್ರಿ ಅವಶ್ಯಕತೆಯಿರುತ್ತದೆ. ಬೆಳೆಗಳ ರಾಶಿ ಸಮಯದಲ್ಲಿ ತಾಡಪತ್ರಿ ಬಳಕೆಯಾಗುತ್ತದೆ. ಬಿಸಿಲಿನಲ್ಲಿ ದವಸಧಾನ್ಯ ಒಣಗಿಸಲು ತಾಡಪತ್ರಿಯ ಬಳಕೆಯಾಗುತ್ತದೆ. ಹೀಗಾಗಿ ರೈತ ಬೆಳೆ, ದವಸಧಾನ್ಯಗಳ ಕಾಪಾಡಲು ಸರ್ಕಾರದ ವತಿಯಿಂದ ಸಬ್ಸಿಡಿಯಲ್ಲಿ ತಾಡಪತ್ರಿ ವಿತರಿಸಲಾಗುವುದು.ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿ ತಾಡಪತ್ರಿ ಪಡೆಯಬಹುದು.

ಪಿಎಂ ಕಿಸಾನ್: 11ನೇ ಕಂತು ಶೀಘ್ರದಲ್ಲೆ ಬಿಡುಗಡೆ! ಫಲಾನುಭವಿಗಳ ಪಟ್ಟಿಯಲ್ಲಿ ಈಗಲೇ ನಿಮ್ಮ ಹೆಸರು ಪರಿಶೀಲಿಸಿ

7th Pay Commision: ಈ ತಿಂಗಳ ಅಂತ್ಯದೊಳಗೆ ಹೆಚ್ಚುತ್ತಾ ಕೇಂದ್ರ ಸರ್ಕಾರಿ ನೌಕರರ HRA..?