Government Schemes

ರೂ. 9250 ಪಿಂಚಣಿ ಪಡೆಯಬಹುದು! ಮಾಸಿಕ Pension Scheme ನಲ್ಲಿ ಏನೇನಿದೆ ತಿಳಿಯಿರಿ.

27 March, 2022 12:51 PM IST By: Kalmesh T
Rs. 9250 can get a pension! Learn what's in a monthly pension plan.

ವೃದ್ಧಾಪ್ಯದಲ್ಲಿ  ಯಾವುದೇ ಹಣಕಾಸಿನ ಚಿಂತೆಯಿಲ್ಲದೆ ನೆಮ್ಮದಿಯ ಜೀವನ ಸಾಗಿಸಲು ಇಲ್ಲಿದೆ ಒಂದು ಉತ್ತಮ ಅವಕಾಶ. ಇದಕ್ಕಾಗಿ ಹೂಡಿಕೆ ಮಾಡಬಯಸುವವರಿಗೆ PM ವಯೋ ವಂದನಾ ಯೋಜನೆ PMVVY  ಉತ್ತಮ ಆಯ್ಕೆಯಾಗಿದೆ.

ಈ ಯೋಜನೆಯಲ್ಲಿ Invest ಮಾಡಿದರೆ 10 ವರ್ಷಗಳ ಕಾಲ ಮಾಸಿಕ ನಿಗದಿತ Pension  ವಾರ್ಷಿಕ ಶೇ.7.40 ದರದಲ್ಲಿ ಲಭಿಸುತ್ತದೆ. ಅಂದರೆ ನಿಮ್ಮ ಹೂಡಿಕೆಯನ್ನು ಆಧರಿಸಿ ಮಾಸಿಕ  10,000ರೂ.ನಿಂದ  9,250 ರೂ.  Pension  ಪಡೆಯಬಹುದು.

ಇದನ್ನು ಓದಿ:

CSIR-IHBT ರೈತರಿಗೆ 10 ಲಕ್ಷ! ಲೆಮನ್‌ಗ್ರಾಸ್ ಸ್ಲಿಪ್‌, 75 ಕೆಜಿ ಮಾರಿಗೋಲ್ಡ್ ಬೀಜ ವಿತರಣೆಗೆ FPO ನಿರ್ಧಾರ

Pension ಪಡೆಯಲು ಎಷ್ಟು ವಯಸ್ಸಾಗಿರಬೇಕು?

ಪ್ರಧಾನಮಂತ್ರಿ ವಯೋ ವಂದನಾ ಯೋಜನೆಯಲ್ಲಿ ಮಾಡಿದ ಹೂಡಿಕೆಯಿಂದ ಮಾಸಿಕ ಪಿಂಚಣಿ Withdraw  ಮಾಡಲು ಕನಿಷ್ಠ 60 ವರ್ಷ ವಯಸ್ಸಾಗಿರಬೇಕು. ಈ ಯೋಜನೆಯಲ್ಲಿ 10 ವರ್ಷಗಳ ಅವಧಿಗೆ ಗರಿಷ್ಠ 15 ಲಕ್ಷ ರೂ. ಹೂಡಿಕೆ ಮಾಡಬಹುದು. ಇನ್ನು ಪಿಂಚಣಿ ಹಣವನ್ನು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಹಾಗೂ ವಾರ್ಷಿಕವಾಗಿ ಪಡೆಯಬಹುದು. LIC ಯೋಜನೆಯನ್ನು ನಿರ್ವಹಿಸುತ್ತದೆ.

ಎಷ್ಟು ದರ?

2021-22 ನೇ ಆರ್ಥಿಕ ಸಾಲಿಗೆ ಈ ಯೋಜನೆ ಮಾಸಿಕ ನಿಗದಿತ ಪಿಂಚಣಿಯನ್ನು ವಾರ್ಷಿಕ ಶೇ.7.40 ದರದಲ್ಲಿ ಒದಗಿಸುತ್ತದೆ. 2022ರ ಮಾರ್ಚ್ 31ರ ತನಕ ಖರೀದಿಸಿದ ಎಲ್ಲ ಪಾಲಿಸಿಗಳಿಗೆ 10 ವರ್ಷಗಳ ಪೂರ್ಣಾವಧಿ ಮುಕ್ತಾಯಗೊಂಡ ಬಳಿಕ ಈ ದರದಲ್ಲಿ ಪಿಂಚಣಿ ನೀಡಲಾಗುವುದು'.

ಇನ್ನಷ್ಟು ಓದಿರಿ:

Monthly Income, Investment Scheme in Post office! April 1 ರಿಂದ ಪ್ರಾರಂಭ!

ಪಾಲಿಸಿ ಮಾಡಿಸಿದವರು ಮೃತಪಟ್ಟರೇ?

ಈ ಪಾಲಿಸಿಯ 10 ವರ್ಷಗಳ ಅವಧಿಯಲ್ಲಿ ಪಿಂಚಣಿದಾರ ಮೃತಪಟ್ಟರೆ ಪಾಲಿಸಿಯ ಖರೀದಿ ಬೆಲೆಯನ್ನು ಸಂಬಂಧಪಟ್ಟವರಿಗೆ ಮರುಪಾವತಿಸಲಾಗುತ್ತದೆ. ಇನ್ನು ಪಾಲಿಸಿಯ 10 ವರ್ಷಗಳ ಅವಧಿಯನ್ನು ಪೂರ್ಣಗೊಳಿಸೋ ತನಕ ಪಿಂಚಣಿದಾರ ಜೀವಂತವಿದ್ದರೆ ಕೊನೆಯ ಪಿಂಚಣಿ ಕಂತುಗಳ ಜೊತೆಗೆ ಖರೀದಿ ಬೆಲೆಯನ್ನು ಕೂಡ ಪಾವತಿಸಲಾಗುತ್ತದೆ. 

ಇದನ್ನೂ ಓದಿರಿ:

PAN card Big Update! ನಿಮ್ಮ PAN card ನಕಲಿ ಇದೆಯಾ? ಹಾಗಾದರೆ ನಿಮಗೆ ದೊಡ್ಡ ನಷ್ಟ!

ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಮಾತ್ರ ಈ ಯೋಜನೆಯಿಂದ ಅವಧಿಗೂ ಮುನ್ನ ನಿರ್ಗಮಿಸಲು ಅವಕಾಶವಿದೆ. ಉದಾಹರಣೆಗೆ ಪಿಂಚಣಿದಾರನಿಗೆ ತನ್ನ ಅಥವಾ ತನ್ನ ಸಂಗತಿಯ ಯಾವುದೇ ಗಂಭೀರ ಕಾಯಿಲೆಯ ಚಿಕಿತ್ಸೆಗೆ ಹಣದ ಅವಶ್ಯಕತೆಯಿದ್ದರೆ ಅಂಥ ಸಂದರ್ಭದಲ್ಲಿ ಆತ ಈ ಯೋಜನೆಯಿಂದ ಅವಧಿಗೂ ಮುನ್ನ ನಿರ್ಗಮಿಸಬಹುದು.

ಇಂಥ ಸಂದರ್ಭಗಳಲ್ಲಿ ಖರೀದಿ ಬೆಲೆಯ ಶೇ.98ರಷ್ಟನ್ನು  ಸರೆಂಡರ್ ಮೌಲ್ಯ ವಾಗಿ ಪಾವತಿಸಲಾಗುತ್ತದೆ. ಪಾಲಿಸಿಯ ಮೂರು ವರ್ಷಗಳ ಅವಧಿ ಪೂರ್ಣಗೊಂಡ ಬಳಿಕ ಸಾಲ ಸೌಲಭ್ಯ ಲಭ್ಯವಿದೆ. ಗರಿಷ್ಠ ಸಾಲ ಸೌಲಭ್ಯ ಖರೀದಿ ಬೆಲೆಯ ಶೇ.75ರಷ್ಟಾಗಿರುತ್ತದೆ.  

RBI ನಿಂದ 294 ಹುದ್ದೆಗಳ ನೇಮಕಾತಿ, 83,254 ಸಂಬಳ!