Government Schemes

ರಾಜ್ಯದ 50 ಲಕ್ಷಕ್ಕೂ ಹೆಚ್ಚು PM ಕಿಸಾನ್‌ ಫಲಾನುಭವಿ ರೈತರಿಗೆ ಕೇಂದ್ರದಿಂದ ಸಿಕ್ತು ಬಂಪರ್‌ ನ್ಯೂಸ್‌

16 July, 2022 11:00 AM IST By: Maltesh
PM Kisan good news for karnataka farmers

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌’ ಯೋಜನೆಯ ವೆಬ್‌ಸೈಟ್‌ನಲ್ಲಿ  ಗುಜರಾತಿ, ಹಿಂದಿ, ತೆಲುಗು, ತಮಿಳು, ಸೇರಿದಂತೆ ಹಲವು ಭಾರತೀಯ ಭಾಷೆಗಳು ಇದ್ದರೂ ಕನ್ನಡವನ್ನು ಮಾತ್ರ ಪಿಎಂ ಕಿಸಾನ್‌ ಪೋರ್ಟಲ್‌ನಲ್ಲಿ ಕಡೆಗಣಿಸಲಾಗಿತ್ತು.  ಇದರಿಂದ ರಾಜ್ಯದಲ್ಲಿರುವ 50 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ತೊಂದರೆ ಉಂಟಾಗುತ್ತಿದೆ.

ಕೇಂದ್ರ ಸರ್ಕಾರ ತಕ್ಷಣ ಸರಿಪಡಿಸಬೇಕು ಎಂದು ತೀವ್ರ ಆಕ್ಷೇಪಣೆಗಳು ಕೂಡ ಕೇಳಿ ಬಂದಿತ್ತು.

ಸದ್ಯ ಈ ಒತ್ತಾಯಕ್ಕೆ ಫಲ ಸಿಕ್ಕಿದ್ದು ಪಿಎಂ ಕಿಸಾನ್‌ ಪೋರ್ಟಲ್‌ನಲ್ಲಿ ಕನ್ನಡ ಭಾಷೆಯನ್ನು ಅಳವಡಿಸಲಾಗಿದೆ. ಇನ್ನು ರಾಜ್ಯದ ಲಕ್ಷಾಂತರ ರೈತರು ಪಿಎಂ ಕಿಸಾನ್‌ ಕುರಿತು ತಮಗೆ ಬೇಕಾದ ಮಾಹಿತಿಯನ್ನು ಕನ್ನಡ ಭಾಷೆಯಲ್ಲಿಯೇ ನೋಡಬಹುದಾಗಿದೆ.

ಯೋಜನೆಯಿಂದ ಹೊರಗಿಡುವಿಕೆ

ಕೆಳಗಿನ ಉನ್ನತ ಆರ್ಥಿಕ ಸ್ಥಿತಿಯ ಫಲಾನುಭವಿಗಳ ವರ್ಗಗಳು ಯೋಜನೆಯ ಅಡಿಯಲ್ಲಿ ಪ್ರಯೋಜನಕ್ಕೆ ಅರ್ಹರಾಗಿರುವುದಿಲ್ಲ.

1.ಎಲ್ಲಾ ಸಾಂಸ್ಥಿಕ ಭೂಮಿ ಹೊಂದಿರುವವರು.

2.ಕೆಳಗಿನ ಒಂದು ಅಥವಾ ಹೆಚ್ಚಿನ ವರ್ಗಗಳಿಗೆ ಸೇರಿದ ರೈತ ಕುಟುಂಬಗಳು:

i)ಮಾಜಿ ಮತ್ತು ಪ್ರಸ್ತುತ ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವವರು

ii)ಮಾಜಿ ಮತ್ತು ಪ್ರಸ್ತುತ ಸಚಿವರು/ ರಾಜ್ಯ ಸಚಿವರು ಮತ್ತು ಮಾಜಿ/ಈಗಿನ ಲೋಕಸಭೆ/ ರಾಜ್ಯಸಭೆ/ ರಾಜ್ಯ ವಿಧಾನಸಭೆ/ ರಾಜ್ಯ ವಿಧಾನ ಪರಿಷತ್ತಿನ ಸದಸ್ಯರು, ಮಹಾನಗರ ಪಾಲಿಕೆಯ ಮಾಜಿ ಮತ್ತು ಪ್ರಸ್ತುತ ಮೇಯರ್, ಜಿಲ್ಲಾ ಪಂಚಾಯಿತಿ ಮಾಜಿ ಮತ್ತು ಪ್ರಸ್ತುತ ಅಧ್ಯಕ್ಷರು.

ನೀವು ತಿಳಿದಿರಲೇಬೇಕಾದ ಭಾರತದ ಟಾಪ್ ಮೆಣಸಿನಕಾಯಿ ತಳಿಗಳು ಯಾವು ಗೊತ್ತಾ..?

iii)ನಿವೃತ್ತಿ/ ಹಾಲಿ ಸೇವೆಯಲ್ಲಿರುವ ಕೇಂದ್ರ / ರಾಜ್ಯಸರ್ಕಾರಗಳ / ಸಚಿವಾಲಯ ಕಛೇರಿ/ ಇಲಾಖೆ/ ಕ್ಷೇತ್ರ ಕಛೇರಿಗಳು/ ಕೇಂದ್ರ/ ರಾಜ್ಯ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು/ ಅಂಗ ಸಂಸ್ಥೆಗಳು/ ಸ್ವಾಯತ್ತ ಸಂಸ್ಥೆಗಳ ಅಧಿಕಾರಿಗಳು ಹಾಗೂ ನೌಕರರು/ ಸ್ಥಳೀಯ ಸಂಸ್ಥೆಗಳ ಖಾಯಂ ನೌಕರರು (ಗ್ರೂಪ್ ಡಿ /4ನೇ ವರ್ಗ/ ಬಹು ಕಾರ್ಯ ನಿರ್ವಹಿಸುವ ಸಿಬ್ಬಂದಿ ಹೊರಡುಪಡಿಸಿ),

ಮೇಲಿನ ವರ್ಗದ (ಬಹು ಕಾರ್ಯನಿರ್ವಹಿಸುವಸಿಬ್ಬಂದಿ / ಕ್ಲಾಸ್ IV/ಗ್ರೂಪ್ ಡಿ ಉದ್ಯೋಗಿಗಳನ್ನು ಹೊರತುಪಡಿಸಿ)

vi)ಮಾಸಿಕ ಪಿಂಚಣಿ ರೂ. 10,000/- ಅಥವಾ ಅದಕ್ಕಿಂತ ಹೆಚ್ಚಿರುವ ಎಲ್ಲಾ ನಿವೃತ್ತ/ನಿವೃತ್ತ ಪಿಂಚಣಿದಾರರು

ಮೇಲಿನ ವರ್ಗದ (ಬಹು ಕಾರ್ಯನಿರ್ವಹಿಸುವಸಿಬ್ಬಂದಿ / ಕ್ಲಾಸ್ IV/ಗ್ರೂಪ್ ಡಿ ಉದ್ಯೋಗಿಗಳನ್ನು ಹೊರತುಪಡಿಸಿ)

v)ಕಳೆದ ಮೌಲ್ಯಮಾಪನ ವರ್ಷದಲ್ಲಿ ಆದಾಯ ತೆರಿಗೆ ಪಾವತಿಸಿದ ಎಲ್ಲಾ ವ್ಯಕ್ತಿಗಳು

vi)ವೈದ್ಯರು, ಎಂಜಿನಿಯರ್‌ಗಳು, ವಕೀಲರು, ಚಾರ್ಟರ್ಡ್ ಅಕೌಂಟೆಂಟ್‌ಗಳು ಮತ್ತು ವಾಸ್ತುಶಿಲ್ಪಿಗಳಂತಹ ವೃತ್ತಿಪರರು ವೃತ್ತಿಪರ ಸಂಸ್ಥೆಗಳಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ವೃತ್ತಿಯನ್ನು ನಿರ್ವಹಿಸುತ್ತಾರೆ.