ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 12ನೇ ಕಂತು (PM Kisan) ಬಹುತೇಕ ರೈತರ ಖಾತೆಗೆ ಬಂದಿದೆ. ಇದೀಗ 13ನೇ ಕಂತಿಗೆ ರೈತರು ಕಾಯುತ್ತಿದ್ದಾರೆ. ಈ ನಡುವೆ ಕಿಸಾನ್ ಸಮ್ಮಾನ್ ನಿಧಿ 13 ನೇ ಕಂತಿನ(13th Installment) ಮೊತ್ತದ ಬಗ್ಗೆ ಸರ್ಕಾರವು ದೊಡ್ಡ ಬದಲಾವಣೆಯನ್ನು ಮಾಡಿದೆ.
ಈ ನಿಯಮದಲ್ಲಿ ಹೊಸ ನಿಯಮ ಪಾಲಿಸುವ ರೈತರ ಖಾತೆಗೆ ಮಾತ್ರ ಹಣ ಜಮಾ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಹೀಗಾಗಿ ಸರ್ಕಾರ ಪಿಎಂ ಕಿಸಾನ್ 13ನೇ ಕಂತಿನಲ್ಲಿ ಮಾಡಿದ ಬದಲಾವಣೆ (Changes)ಏನು ಎಂಬುದನ್ನು ಈ ಲೇಖನದಲ್ಲಿ ತಿಳದುಕೊಳ್ಳೋಣ.
ಈ ಬಾರಿ ರೈತರು ತಮ್ಮ ಖಾತೆಗೆ 13ನೇ ಕಂತಿನ ಹಣ ತಲುಪಲು ನೋಂದಣಿ ಮಾಡಿಸಿಕೊಳ್ಳಬೇಕಿದ್ದು, ಇದಕ್ಕಾಗಿ ರೇಷನ್ ಕಾರ್ಡ್ ನಕಲು ಪ್ರತಿ ಸಲ್ಲಿಸುವುದು ಕಡ್ಡಾಯ. ರೈತರು ರೇಷನ್ ಕಾರ್ಡ್ (Ration Card) ಹಾರ್ಡ್ ಕಾಪಿಯನ್ನು ನೀಡಬೇಕಾಗಿಲ್ಲ, ಅವರು ಪಿಡಿಎಫ್ (PDF) ಫೈಲ್ ಮಾಡಿ ರೇಷನ್ ಕಾರ್ಡ್ ಸಾಫ್ಟ್ ಕಾಪಿಯನ್ನು (Soft Copy)ಅಪ್‌ಲೋಡ್ ಮಾಡಬೇಕು. ಇದಲ್ಲದೇ ಇದುವರೆಗೆ ಕೆವೈಸಿ ಮಾಡದ ರೈತರು ಆದಷ್ಟು ಬೇಗ ಕೆವೈಸಿ (eKyc) ಮಾಡಿಸಿಕೊಳ್ಳಬೇಕು. ಈ ಎರಡು ಕೆಲಸಗಳನ್ನು ಮಾಡದೆ ಇರುವ ಅನ್ನದಾತರಿಗೆ 13ನೇ ಕಂತಿನ ಹಣ ಖಾತೆಗೆ ಬರುವುದಿಲ್ಲ ಎಂದು ಸರ್ಕಾರ ತಿಳಿಸಿದೆ.
ರೈತರ ಕಬ್ಬು ಬಾಕಿ ಹಣ ಶೀಘ್ರ ಪಾವತಿ ಮಾಡುವಂತೆ ಸಕ್ಕರೆ ಕಾರ್ಖಾನೆಗಳಿಗೆ ಸರ್ಕಾರ ಸೂಚನೆ!
ಪಿಎಂ ಕಿಸಾನ್ 13ನೇ ಕಂತಿನ ಹಣ ಯಾವಾಗ ಬರುತ್ತದೆ..?
PM Kisan 13th Instalment: ಪಿಎಂ ಕಿಸಾನ್ 13ನೇ ಕಂತಿನ ಮೊದಲ ಕಂತಿನ ಹಣ ರೂ.2000 ರೈತರಿಗೆ ಏಪ್ರಿಲ್ 1 ಮತ್ತು ಜುಲೈ 31 ರ ನಡುವೆ ನೀಡಲಾಗುತ್ತದೆ.
ಎರಡನೇ ಕಂತನ್ನು ಆಗಸ್ಟ್ 1 ಮತ್ತು ನವೆಂಬರ್ 30 ರ ನಡುವೆ ಬಿಡುಗಡೆ ಮಾಡಲಾಗುತ್ತದೆ. ಹಾಗೆಯೇ ವರ್ಷದ ಮೂರನೇ ಕಂತನ್ನು ಡಿಸೆಂಬರ್ 1 ಮತ್ತು ಮಾರ್ಚ್ 31 ರ ನಡುವೆ ವರ್ಗಾಯಿಸಲಾಗುತ್ತದೆ.
ಕಳೆದ ವರ್ಷ ಮೂರನೇ ಕಂತನ್ನು ಜನವರಿ 1 ರಂದು ಬಿಡುಗಡೆ ಮಾಡಲಾಗಿದ್ದು, ಈ ಬಾರಿಯೂ ಸರ್ಕಾರವು ಜನವರಿಯಲ್ಲಿ ಹಣವನ್ನು ವರ್ಗಾಯಿಸುವ ಸಾಧ್ಯತೆಗಳಿವೆ ಎಂದು ಸುದ್ದಿ ಇದೆ. ಆದರೆ, ಈ ವಿಷಯದ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಪ್ರಕಟಣೆಯಾಗಲಿ ಅಥವಾ ಹೇಳಿಕೆಯಾಗಲಿ ಹೊರಬಿದ್ದಿಲ್ಲ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ನೋಂದಣಿ ಮಾಡದ ರೈತರು ಇದೀಗ ನೋಂದಣಿ ಮಾಡಬಹುದು ಇದರಿಂದ ಅವರು ಮುಂದಿನ ಕಂತನ್ನು ಪಡೆಯಬಹುದು.
ಪಿಎಂ ಕಿಸಾನ್‌ಗೆ ಯಾರು ಅರ್ಹರು?
ತಮ್ಮ ಹೆಸರಿನಲ್ಲಿ ಸಾಗುವಳಿ ಭೂಮಿ ಹೊಂದಿರುವ ರೈತರು ಈ ಯೋಜನೆಗೆ ಅರ್ಹರು
ನಗರ ಮತ್ತು ಗ್ರಾಮೀಣ ಪ್ರದೇಶಗಳ ರೈತರು
ಇನ್ನಷ್ಟು ಓದಿರಿ: ಗಮನಿಸಿ: ಕಳೆ ಅವಶೇಷ ಸುಡುವ ರೈತರಿಗೆ ಪಿಎಂ ಕಿಸಾನ್ ಸಬ್ಸಿಡಿ ರದ್ದು, ₹5000 ದಂಡ!
ಪಿಎಂ ಕಿಸಾನ್‌ಗೆ ಯಾರು ಅರ್ಹರಲ್ಲ?
ಸಾಂಸ್ಥಿಕ ಭೂಮಾಲೀಕರು
ಪ್ರಸ್ತುತ ಕೆಲಸ ಮಾಡುತ್ತಿರುವ ಅಥವಾ ನಿವೃತ್ತ ಅಧಿಕಾರಿಗಳು ಅಥವಾ ರಾಜ್ಯ/ಕೇಂದ್ರ ಸರ್ಕಾರ ಮತ್ತು PSUಗಳು/ ಸರ್ಕಾರಿ ಸ್ವಾಯತ್ತ ಸಂಸ್ಥೆಗಳ ಉದ್ಯೋಗಿಗಳು.
ಉನ್ನತ ಆರ್ಥಿಕ ಸ್ಥಿತಿಯನ್ನು ಹೊಂದಿರುವವರು ಯೋಜನೆಗೆ ಅರ್ಹರಲ್ಲ
ಆದಾಯ ತೆರಿಗೆ ಪಾವತಿಸುವ ರೈತರು
ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವವರು
ವಕೀಲರು, ವೈದ್ಯರು, ಎಂಜಿನಿಯರ್‌ಗಳು ಮುಂತಾದ ವೃತ್ತಿಪರರು.
10,000 ಕ್ಕಿಂತ ಹೆಚ್ಚು ಮಾಸಿಕ ಪಿಂಚಣಿ ಪಡೆಯುವವರು