ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಇಡೀ ದೇಶದ ರೈತರಿಗೆ ಸಹಾಯಧನ ಸಿಗುತ್ತಿದ್ದು,ರೈತರಿಗೆ ತಮ್ಮ ಬೆಳೆಯು ನೈಸರ್ಗಿಕ ವಿಪತ್ತು ಅಥವಾ ಯಾವುದಾದರೂ ಅಸಹಜ ಕಾರಣಗಳಿಂದ ಹಾಳಾದಾಗಮತ್ತು ತಮ್ಮ ಉತ್ಪನ್ನವನ್ನು ಮಾರಿಬಂದ ಹಣ ಸಂದಾಯವಾಗುವುದು ತಡವಾದಾಗ ಅವರಿಗೆ ಆರ್ಥಿಕವಾಗಿ ಬಲ ನೀಡುತ್ತಿತ್ತು. ಇದೇ ರೀತಿ ಗುಜರಾತ ಸರ್ಕಾರವೂ ಸಹ ಆಗಸ್ಟ್ 10, 2020 ರಂದು ಮುಖ್ಯಮಂತ್ರಿ ಕಿಸಾನ್ ಸಹಾಯ ಯೋಜನೆ ಜಾರಿಗೊಳಿಸಿದೆ.
ಏನಿದು ಮುಖ್ಯ ಮಂತ್ರಿ ಕಿಸಾನ್ ಸಹಾಯ ಯೋಜನೆ :
ಇದು ಗುಜರಾತ್ ರಾಜ್ಯ ಸರ್ಕಾರದಿಂದ ಜಾರಿಗೊಂಡ ಯೋಜನೆಯಾಗಿದೆ. ರೈತರ ಬೆಳೆಯು ಅತಿವೃಷ್ಟಿ,ಬರಗಾಲ, ಹಾಗೂ ಕಾಲಾಂತರ ಮಳೆಗಳಿಂದ ಶೇಕಡಾ 33 ರಷ್ಟು ನಷ್ಟವಾದರೆ ಅವರಿಗೆ ಸರ್ಕಾರದಿಂದ 4 ಹೆಕ್ಟೇರುಗಳವರೆಗೂ ಪರಿಹಾರಧನ ಸಿಗುತ್ತದೆ. ಹಾಗೂ ಬೆಳೆಯ ನಷ್ಟದಪ್ರಮಾಣ ಶೇಕಡಾ 33-66 ರಷ್ಟು ಆಗಿದ್ದರೆ , ಅಂತಹ ರೈತರಿಗೆ ಪ್ರತಿ ಹೆಕ್ಟೇರಿಗೆ 20,000 ನಂತೆ , ನಾಲ್ಕು ಹೆಕ್ಟೇರುಗಳವರೆಗೆ ಸಹಾಯ ಧನ ಸಿಗುತ್ತದೆ.
ಇದನ್ನೂ ಓದಿ:ಗಂಗಾ ಕಲ್ಯಾಣ ಯೋಜನೆಯಡಿ ಉಚಿತ ಬೋರ್ವೆಲ್ ಕೊರೆಸುವಿಕೆಗೆ 3 ಲಕ್ಷ ಸಹಾಯಧನ
ಬೆಳೆಯಲ್ಲಿ ನನಷ್ಟದ ಪ್ರಮಾಣ ಶೇಕಡಾ60 ಕ್ಕಿಂತ ಜಾಸ್ತಿ ಇದ್ದರೆ, ಪ್ರತಿ ಹೆಕ್ಟೇರಿಗೆ 25,000 ನಂತೆ , ನಾಲ್ಕು ಹೆಕ್ಟೇರುಗಳ ವರೆಗೂ ಪರಿಹಾರ ಸಿಗುವುದಲ್ಲದೆ , ರಾಜ್ಯ ವಿಪತ್ತು ನಿಧಿಯಡಿ ನೀಡುವ ಸಹಾಯ ಧನಸಹ ಸಿಗುತ್ತದೆ. ಈ ಒಂದು ಯೋಜನೆಯಿಂದ ಅನೇಕ ಸಣ್ಣ ಹಾಗೂ ಮಧ್ಯಮವರ್ಗದ ರೈತರಿಗೆ ಅನೂಕೂಲಕರವಾಗಿದೆ . ಹೆಚ್ಚಿನ ಮಾಹಿತಿಗಾಗಿಭೇಟಿ ನೀಡಿ : agri.gujarat.gov.in
ಲೇಖನ:ಆತ್ಮಾನಂದ ಹೈಗರ
ಇದನ್ನೂ ಓದಿ: ಯುವಕರಿಗೆ ಗುಡ್ ನ್ಯೂಸ್ -ದ್ವಿಚಕ್ರ ವಾಹನ ಖರೀದಿಗೆ 25 ಸಾವಿರ ರೂ. ಸಹಾಯಧನ, ಇಂದೇ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ