Government Schemes

PM Kisan: ಪಿಎಂ ಕಿಸಾನ್ 14 ನೇ ಕಂತಿನ ಮಹತ್ವದ ಅಪ್‌ಡೇಟ್‌..14 ಕೋಟಿ ರೈತರಲ್ಲಿ ಹೊಸ ನೀರಿಕ್ಷೆ!

25 April, 2023 10:28 AM IST By: Maltesh

PM Kisan Samman Nidhi 14th Installment : ದೇಶದ 14 ಕೋಟಿ ರೈತರು ಪಿಎಂ ಕಿಸಾನ್ ಸಮ್ಮಾನ್ ನಿಧಿಯ 14 ನೇ ಕಂತುಗಾಗಿ ಕಾಯುತ್ತಿದ್ದಾರೆ. ಈ ಹಿಂದೆ  13ನೇ ಕಂತು ಫೆಬ್ರವರಿ 27ರಂದು ರೈತರ ಖಾತೆಗೆ ಸರಕಾರ ಹಣ ಜಮಾ ಮಾಡಿತ್ತು. ಕೇಂದ್ರ ಸರ್ಕಾರ ನೀಡಿರುವ ಮಾಹಿತಿಯಂತೆ ಆಗ  ದೇಶದ 8. ಕೋಟಿ ಅರ್ಹ ರೈತ ಫಲಾನುಭವಿಗಳಿಗೆ 13ನೇ ಕಂತಿನ ಹಣ ನೀಡಲಾಗಿತ್ತು. ಈ ಕಂತು ಮುಗಿದ ಸುಮಾರು ಎರಡು ತಿಂಗಳ ನಂತರ 14 ನೇ ಕಂತಿನ ಕುರಿತಂತೆ ರೈತರು ಸಾಕಷ್ಟು ನೀರಿಕ್ಷೆಯಲ್ಲಿ ಇದ್ದಾರೆ. ಇನ್ನು ಈ ಕಂತನ್ನು ಪಡೆಯಲು ದಾಖಲಾತಿಗಳಲ್ಲಿ ಮಾರ್ಪಾಡು ಮಾಡಲಾಗಿದ್ದು ಅರ್ಹ ರೈತ ಫಲಾನುಭವಿಗಳು ಇವುಗಳನ್ನು ಬಹಳ ಜಾಗೃತೆಯಿಂದ ನೋಡಬೇಕಾಗಿದೆ.

PM Kisan Samman Nidhi ಈ ಯೋಜನೆಯಡಿ ರೈತರಿಗೆ 14ನೇ ಕಂತಿನಲ್ಲಿ ರೂ.2 ಸಾವಿರ ಹಾಗೂ ವಾರ್ಷಿಕ ರೂ.6 ಸಾವಿರ ನೀಡಲಾಗುವುದು. 14 ನೇ ಕಂತು ಶೀಘ್ರದಲ್ಲೇ ಬರುವ ಸಾಧ್ಯತೆ.. ವೇಳಾಪಟ್ಟಿಯಂತೆ, PM ಕಿಸಾನ್ ಸಮ್ಮಾನ್ ನಿಧಿ 14 ನೇ ಕಂತು ಏಪ್ರಿಲ್ ಮತ್ತು ಜುಲೈ ನಡುವೆ ಬಿಡುಗಡೆಯಾಗಲಿದೆ.

ಮೇ ತಿಂಗಳಲ್ಲಿ 12 ದಿನ Bank ರಜೆ..ಈ ದಿನಗಳಲ್ಲಿ ಬ್ಯಾಂಕ್‌ ಸೇವೆ ಸಿಗಲ್ಲ

ಕಳೆದ ವರ್ಷ ಇದೇ ಅವಧಿಯಲ್ಲಿ ಸ್ವೀಕರಿಸಿದ 11 ನೇ ಕಂತನ್ನು 31 ಮೇ 2022 ಕ್ಕೆ ವರ್ಗಾಯಿಸಲಾಗಿದೆ. ಆದರೆ ಈ ಬಾರಿ ಶೀಘ್ರದಲ್ಲಿಯೇ 14ನೇ ಕಂತು ಖಾತೆಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ. ಈ ಬಾರಿ ಮೇ 15ರೊಳಗೆ ಸರ್ಕಾರ ರೈತರ ಖಾತೆಗೆ ಕಂತಿನ ಹಣ ರವಾನೆಯಾಗುವ ಸಾಧ್ಯತೆ ಇದೆ ಎಂದು ಸಂಬಂಧಪಟ್ಟ ಮೂಲಗಳು ತಿಳಿಸಿವೆ.

ಈ ಬಾರಿ ಅಕಾಲಿಕ ಮಳೆಯಿಂದ ರೈತರು ಸಾಕಷ್ಟು ನೊಂದಿದ್ದು, ಈ ಬಾರಿ ಕಂತು ಹಣ ಬೇಗ ಬರುವ ನಿರೀಕ್ಷೆ ಇದೆ. ಇಂತಹ ಸಂದರ್ಭಗಳಲ್ಲಿ ಸಕಾಲಕ್ಕೆ ಹಣ ಬಂದರೆ ರೈತರಿಗೆ ಆರ್ಥಿಕ ನೆರವು ದೊರೆಯುತ್ತದೆ. ಆದರೆ, ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇನ್ನು ನೀವು ಇಲ್ಲಿಯವರೆಗೆ ಪಿಎಂ ಕಿಸಾನ್‌ ಯೋಜನೆಯಲ್ಲಿ ಹಣ ಪಡೆಯುತ್ತಿಲ್ಲ ಎಂದರೆ ಇಲ್ಲಿ ನೀಡಲಾದ ಸುಲಭ ಹಂತಗಳಿಂದ ನೋಂದಾವಣೆ ಮಾಡಿಕೊಂಡು 14 ನೇ ಕಂತನ್ನು ಪಡೆಯುವ ಅರ್ಹ ರೈತರಾಗಿ.. ನೀವು ಈ ಯೋಜನೆಗೆ ಅರ್ಹರಾಗಿದ್ದರೆ ಮತ್ತು ನೀವು ನೋಂದಾಯಿಸಬೇಕಾದರೆ, ನೀವು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. 

WEATHER FORECAST: ರಾಜ್ಯದಲ್ಲಿ ಮುಂದಿನ 48 ಗಂಟೆಗಳ ಮಳೆಯ ಮುನ್ಸೂಚನೆ ಹೇಗಿರಲಿದೆ?

ಇದಕ್ಕಾಗಿ, ನೀವು ವಾಸಿಸುವ ಸ್ಥಳದ ವ್ಯಾಪ್ತಿಯ ತಹಸೀಲ್ದಾರ್ ಅಥವಾ ಪ್ರಧಾನ ಮಂತ್ರಿ ಕಿಸಾನ್ ಯೋಜನೆಗೆ ನೇಮಿಸಲಾದ ನೋಡಲ್ ಅಧಿಕಾರಿಯನ್ನು ಸಂಪರ್ಕಿಸಬೇಕು. ಇಲ್ಲಿ ಸಂಬಂಧಿತ ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ನಿಮ್ಮ ದಾಖಲೆಗಳನ್ನು ಸಲ್ಲಿಸಿ. ನಿಮ್ಮ ಹತ್ತಿರದ ಸಾರ್ವಜನಿಕ ಸೇವಾ ಕೇಂದ್ರವನ್ನು (CSC) ಸಹ ನೀವು ಸಂಪರ್ಕಿಸಬಹುದು.

Image Courtesy @ pmkisan.gov.in