Government Schemes

ರೈತರಿಗೆ ಸಂತಸದ ಸುದ್ದಿ ಆ.9 ರಂದು ಪಿಎಂ ಕಿಸಾನ್ ಯೋಜನೆಯ 9ನೇ ಕಂತಿನ ಹಣ ಬಿಡುಗಡೆ

06 August, 2021 8:36 AM IST By:

ರೈತ ಬಾಂಧವರಿಗೆ ಖುಷಿ ನೀಡುವ ಸುದ್ದಿ ಇಲ್ಲಿದೆ. ಪಿಎಂ ಕಿಸಾನ್ ಯೋಜನೆಯ 9ನೇ ಕಂತಿನ ಹಣ ದೇಶದ 10 ಕೋಟಿ ರೈತರ ಖಾತೆಗೆ ಇದೇ ತಿಂಗಳು ಆಗಸ್ಟ್ 9 ರಂದು ಮಧ್ಯಾಹ್ನ 12.30 ಗೆಂಗೆ  ಬಿಡುಗಡೆಯಾಗಲಿದೆ. ಅಂದು ಪ್ರಧಾನಿ ನರೇಂದ್ರ ಮೋದಿಯವರು ರೈತರೊಂದಿಗೆ ಸಂವಾದ ಕೂಡ ನಡೆಸಲಿದ್ದಾರೆ.ನಂತರ 9ನೇ ಕಂತಿನ ಹಣ ಬಿಡುಗಡೆ ಮಾಡಲಿದ್ದಾರೆ. ರೈತರು ಸಹ ಪ್ರಧಾನಿ ನರೇಂದ್ರ ಮೋದಿಯವರ ಸಂವಾದ ಕಾರ್ಯಕ್ರಮವನ್ನು ನೇರವಾಗಿ ಮೊಬೈಲ್ ನಲ್ಲಿಯೇ ವೀಕ್ಷಿಸಬಹುದು.

ಪಿಎಂ ಕಿಸಾನ್ ಯೋಜನೆ ಎಂದರೇನು?

PM- ಕಿಸಾನ್ ಅಡಿಯಲ್ಲಿ, ಸರ್ಕಾರವು ರೈತರಿಗೆ ವಾರ್ಷಿಕ 6000  ರೂಪಾಯಿ ನೀಡುತ್ತದೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ರೂಪಾಯಿ ಮೂರು ಕಂತುಗಳಲ್ಲಿ ವಾರ್ಷಿಕವಾಗಿ ರೈತರ ಖಾತೆಗೆ ಜಮೆ ಮಾಡಲಾಗುವುದು.. ಈ ಯೋಜನೆಯನ್ನು 24 ಫೆಬ್ರವರಿ 2019 ರಂದು ಆರಂಭಿಸಲಾಗಿದೆ. ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶದಿಂದ ರೈತರಿಗೆ  ಕೇಂದ್ರ ಸರ್ಕಾರವು ಈ ಪಿಎಂ ಕಿಸಾನ್ ಯೋಜನೆ ಹೆಚ್ಚು ಪ್ರಸಿದ್ಧಿಹೊಂದಿದೆ. ಈಗ ಆಗಸ್ಟ 9 ರಂದು  9ನೇ ಕಂತಿನ ಹಣ ಬಿಡುಗಡೆ ಮಾಡಲಾಗುವುದು. 9ನೇ ಕಂತಿನ ಲಿಸ್ಟ್ ಸಹ ಈಗಾಗಲೇ ಬಿಡುಗಡೆ ಮಾಡಲಾಗಿದೆ.  ನೀವು ಪಿಎಂ ಕಿಸಾನ್ ಯೋಜನೆಯಡಿ ಫಲಾನುಭವಿಯಾಗಲು ಅರ್ಜಿ ಸಲ್ಲಿಸಿದ್ದರೆ ಕೂಡಲೇ 9ನೇ ನೇ ಕಂತಿನ ಫಲಾನುಭವಿಗಳ ಹೆಸರು ಇಂದೇ ಪರಿಶೀಲಿಸಿಕೊಳ್ಳಿ.

ಲಿಸ್ಟ್ ನಲ್ಲಿ ಹೆಸರು ಚೆಕ್ ಮಾಡುವುದು ಹೇಗೆ?

https://pmkisan.gov.in/Rpt_BeneficiaryStatus_pub.aspx  ಕ್ಲಿಕ್ ಮಾಡಿದಾಗ ವೆಬ್ ಪೇಜ್ ಓಪನ್ ಆಗುತ್ತದೆ ಇಲ್ಲಿ ನಿಮ್ಮ ರಾಜ್ಯ ಜಿಲ್ಲೆ ತಾಲೂಕು ಹಾಗೂ ಗ್ರಾಮವನ್ನು ಆಯ್ಕೆ ಮಾಡಿಕೊಂಡು ನ ಹೊಸ beneficiary ಲಿಸ್ಟ್ ನಲ್ಲಿ ನಿಮ್ಮ ಹೆಸರು ಇರುವುದನ್ನು ಚೆಕ್ ಮಾಡಿ, ಇಲ್ಲಿ A to z ಕ್ರಮವಾಗಿ ಹೆಸರು ಇರುತ್ತದೆ. ನಿಮ್ಮ ಹೆಸರು ಯಾವ ಅಕ್ಷರದಿಂದ ಆರಂಭವಾಗುತ್ತದೆ ಎಂಬುದನ್ನು ನೋಡಿ ಕೆಳಗಡೆ ಕ್ಲಿಕಿ ಮಾಡಿದರೆ ಸಾಕು ಅಲ್ಲಿ ನಿಮ್ಮ ಹೆಸರು ಇರುವುದನ್ನು ನೋಡಿಕೊಳ್ಳಬಹುದು.

ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡಿಸಿಕೊಂಡ ರೈತರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಸಾಕು,  https://pmkisan.gov.in/beneficiarystatus.aspx  ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆಯ ವೆಬ್ ಪೇಜ್ ಓಪನ್ ಆಗುತ್ತದೆ.  ಇಲ್ಲಿ ನಿಮ್ಮ ಆಧಾರ್ ನಂಬರ್ ಅಥವಾ ಅಕೌಂಟ್ ನಂಬರ್ ಅಥವಾ ಮೊಬೈಲ್ ನಂಬರ್ ಈ ಮೂರರಲ್ಲಿ ಯಾವುದಾದರೊಂದನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು. ಒಂದು ವೇಳೆ ನೀವು ಮೊಬೈಲ್ ನಂಬರ್ ಸೆಲೆಕ್ಟ್ ಮಾಡಿಕೊಂಡರೆ ಅಲ್ಲಿ ನಿಮ್ಮ ಮೊಬೈಲ್ ನಂಬರ್ ನಮೂದಿಸಿ ಗೆಟ್ ಡಾಟಾ ಮೇಲೆ ಕ್ಲಿಕ್ ಮಾಡಬೇಕು. ಆಗ ಇಲ್ಲಿಯವರೆಗೆ ನಿಮ್ಮ ಯಾವ ಖಾತೆಗೆ ಎಷ್ಟು ಕಂತಿನ ಹಣ ಜಮೆಯಾಗಿದೆ ಎಂಬುದನ್ನು ನೋಡಬಹುದು..

ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು  pmindiawebcast.nic.in  ಲಿಂಕ್ ಮೇಲೆ ಕ್ಲಿಕ್ ಮಾಡಿ ಪಾಲ್ಗೊಳ್ಳಬಹುದು.