Government Schemes

ಗುಡ್ನ್ಯೂಸ್: ರೈತರಿಗೆ ಡೀಸೆಲ್‌ ಕೊಳ್ಳಲು ಹಣ ನೀಡಲಿದೆ ಸರ್ಕಾರ! ಯಾರು ಅರ್ಹರು ಗೊತ್ತೆ?

10 June, 2022 2:14 PM IST By: Kalmesh T
Government is provide fuel for the farmers
ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆಯನ್ನು ಪ್ರೋತ್ಸಾಹಿಸಿ, ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ರೈತರಿಗೆ ಇಂಧನದ ವೆಚ್ಚ ನೀಡಲಿದೆ ಸರ್ಕಾರ. ಇಲ್ಲಿದೆ ಸಂಪೂರ್ಣ ಮಾಹಿತಿ.
ಇದನ್ನೂ ಓದಿರಿ: 

ಕೃಷಿ ಇಲಾಖೆಯ ವತಿಯಿಂದ ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆಯನ್ನು ಪ್ರೋತ್ಸಾಹಿಸಿ, ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ರೈತರಿಗೆ ಇಂಧನದ ವೆಚ್ಚದ ಮೇಲೆ ಸಹಾಯಧನವನ್ನು ನೀಡಲಾಗುತ್ತಿದೆ.

ಪ್ರತಿ ಎಕರೆಗೆ ರೂ. 250 ರಂತೆ ಗರಿಷ್ಠ 5 ಎಕರೆಯವರೆಗೆ ಡಿ.ಬಿ.ಟಿ (DBT) ಮೂಲಕ ಡೀಸೆಲ್‌ ಸಹಾಯಧನ ನೀಡುವ “ರೈತಶಕ್ತಿ” ಎಂಬ ಕಾರ್ಯಕ್ರಮವನ್ನು ಜಾರಿಗೊಳಿಸಿದೆ. ಈ ಯೋಜನೆಯಡಿ ರೈತರು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.

ರೈತರ ಹಿಡುವಳಿ ಆಧಾರದ ಮೇಲೆ ಗರಿಷ್ಕ 5 ಎಕರೆಯವರೆಗೆ ಡೀಸೆಲ್‌ ಸಹಾಯಧನ ಒದಗಿಸಲಿದ್ದು, ಫ್ರೂಟ್‌ ಪೋರ್ಟಲ್‌ನಲ್ಲಿ (FRUITS Portal) ನಮೂದಿಸಿರುವ ಹಿಡುವಳಿಯ ಆಧಾರದ ಮೇಲೆ ಸಹಾಯಧನ ವರ್ಗಾವಣೆಯಾಗಲಿದೆ.

ರೈತರಿಗೆ ಗುಡ್ ನ್ಯೂಸ್: ಸರ್ಕಾರಿ ಭೂಮಿಯಲ್ಲಿ ಕೃಷಿ: ಕೃಷಿ ಆಕಾಂಕ್ಷಿಗಳಿಗೆ ವರದಾನ ಈ ಯೋಜನೆ

ಹಸು ಸಾಕಾಣಿಕೆಗೆ ₹60,249, ಎಮ್ಮೆ ಸಾಕಾಣಿಕೆಗೆ ₹40,783 ಸಹಾಯಧನ! ಯಾವ ಪ್ರಾಣಿ ಸಾಕಾಣಿಕೆಗೆ ಎಷ್ಟು ಹಣ ಗೊತ್ತೆ?

ಜಿಲ್ಲೆಯ ರೈತರು ಈ ಯೋಜನೆಯ ಪ್ರಯೋಜನ ಪಡೆಯಲು ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ, ತಮ್ಮ ಜಮೀನಿನ ಎಲ್ಲಾ ಸರ್ವೇ ನಂಬರ್‌ಗಳ ವಿಸ್ತೀರ್ಣವನ್ನು ಫೂಟ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸಬೇಕು.

ಇದುವರೆಗೆ ಫೂಟ್ ತಂತ್ರಾಂಶದಲ್ಲಿ (FRUITS Portal) ನೋಂದಣಿ ಮಾಡಿಕೊಳ್ಳದ ರೈತರು ಕೂಡಲೇ ನೋಂದಣಿ ಮಾಡಿಸಿಕೊಳ್ಳುವಂತೆ ಕೃಷಿ ಇಲಾಖೆ ತಿಳಿಸುತ್ತದೆ.

FRUITS ಪೋರ್ಟಲ್ ನಲ್ಲಿ ನೊಂದಣಿಗೊಂಡ ರಾಜ್ಯದ ಎಲ್ಲಾ ರೈತರು ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ. ಯೋಜನೆಯು ಅರ್ಹತಾಧಾರಿತ ಯೋಜನೆಯಾಗಿರುವುದರಿಂದ ಯಾವುದೇ ರೈತರು ಪ್ರತ್ಯೇಕವಾಗಿ ವೈಯಕ್ತಿಕ ಅರ್ಜಿ ಸಲ್ಲಿಸುವ ಅವಶ್ಯಕತೆಯಿರುವುದಿಲ್ಲ.

ಗುಡ್‌ನ್ಯೂಸ್‌; ಡ್ರೋನ್ ಖರೀದಿಸುವ ರೈತರಿಗೆ ಸರ್ಕಾರ ನೀಡುತ್ತಿದೆ ₹5 ಲಕ್ಷ ಸಹಾಯಧನ!

Ration Card Update: ನೀವು ಪಡಿತರ ಚೀಟಿ ಹೊಂದಿದ್ದರೆ ಕೂಡಲೇ ಈ ಕೆಲಸ ಮಾಡಿ; ಇಲ್ಲದಿದ್ದರೆ ನಿಮಗೆ ತೊಂದರೆ ತಪ್ಪಿದ್ದಲ್ಲ!

ದಾಖಲೆಗಳ ಪರಿಶೀಲನೆಯನ್ನು ಸರ್ಕಾರದ FRUITS ಪೋರ್ಟಲ್ ನಲ್ಲಿ ಲಭ್ಯವಿರುವ ದತ್ತಾಂಶಗಳ ಆಧಾರದ ಮೇಲೆ ಮಾಡಲಾಗುವುದು. FRUITS ಪೋರ್ಟಲ್‌ನಲ್ಲಿ ನಮೂದಿಸಲಾದ ಹಿಡುವಳಿಯ ವಿಸ್ತೀರ್ಣದ ಆಧಾರದ ಮೇಲೆ ರೈತರಿಗೆ ಡೀಸೆಲ್ ಸಹಾಯಧನವನ್ನು ನೇರ ನಗದು ವರ್ಗಾವಣೆ (DBT) ಮೂಲಕ ರೈತರ ಖಾತೆಗೆ ವರ್ಗಾಯಿಸಲಾಗುವುದು.

FRUITS ತಂತ್ರಾಂಶದಲ್ಲಿ ನೋಂದಾವಣಿಗೊಂಡ ರೈತರು ಹೊಂದಿರುವ ಭೂ ಹಿಡುವಳಿಯ ಆಧಾರದ ಮೇಲೆ ಪ್ರತಿಯೊಬ್ಬ ರೈತರಿಗೆ ಪ್ರತಿ ಎಕರೆಗೆ ರೂ.250/- ರಂತೆ ಗರಿಷ್ಠ ಐದು ಎಕರೆಗೆ ರೂ.1250/- ರವರೆಗೆ ಡೀಸೆಲ್ ಸಹಾಯಧನವನ್ನು ಒದಗಿಸಲಾಗುವುದು.

ಅರ್ಹ ರೈತರಿಗೆ ಡೀಸೆಲ್‌ ಸಹಾಯಧನದ ಮೊತ್ತವನ್ನು ಸರ್ಕಾರದ DBT ಮೂಲಕ ಆಧಾರದ ಸೀಡೆಡ್ ಬ್ಯಾಂಕ್‌ / ಪೋಸ್ಟ್ ಆಫೀಸ್ ಖಾತೆಗೆ ವರ್ಗಾಯಿಸಲಾಗುವುದು.