Government Schemes

ಮಹಿಳೆಯರಿಗೆ Good News! ಖರ್ಚಿಲ್ಲದೆ ಪಡೆಯಿರಿ Tailoring ಮಷಿನ್

23 March, 2022 3:56 PM IST By: Kalmesh T
Good news for women! Get it for free at Tailoring Machine

ಮನೆಯಲ್ಲೇ ಕುಳಿತು ಹಣ ಗಳಿಸಿ

ಮನೆಯಲ್ಲೇ ಕುಳಿತು ಏನಾದರೂ ಕೆಲಸ ಮಾಡಿ ಒಂದಷ್ಟು ಹಣ ಗಳಿಸಬಹುದು. ಅದಕ್ಕಾಗಿ ಕೇಂದ್ರ ಸರ್ಕಾರ ಮಹಿಳೆಯರಿಗೆ Good news ನೀಡಿದೆ. ಮಹಿಳೆಯರು ಸ್ವಾವಲಂಬಿಗಳಾಗೋಕೆ ಕೇಂದ್ರ ಸರ್ಕಾರ (Central Government)ವೇ ಸಾಥ್ ಕೊಡ್ತಿದೆ. ಮಹಿಳೆಯರಿಗಾಗಿಯೇ ಉಚಿತ ಹೊಲಿಗೆ ಯಂತ್ರ (Sewing Machine) ಯೋಜನೆ ಶುರು ಮಾಡಿದೆ.  ಏನಾದರೂ ಮಾಡಿ ಸ್ವಂತ ಕಾಲಿನ ಮೇಲೆ ನಿಲ್ಲಬೇಕೆಂಬ ಹಂಬಲ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ತಾವೂ ಆರ್ಥಿಕವಾಗಿ ಸದೃಢವಾಗಬೇಕೆಂಬ ಬಯಕೆ ಅನೇಕ ಮಹಿಳೆರಿಗೆ ಇರುತ್ತದೆ. ಕೆಲ ಮಹಿಳೆಯರು ಸ್ವಂತ ದುಡಿಮೆಗೆ ಮುಂದಾಗುತ್ತಾರೆ. ಮತ್ತೆ ಕೆಲ ಮಹಿಳೆಯರು ಇದರ ಕನಸು ಕಾಣುವುದರಲ್ಲಿಯೇ ಜೀವನ ಮುಗಿಸುತ್ತಾರೆ. ಬಹುತೇಕ ಮಹಿಳೆಯರು ಒಂದಲ್ಲ ಒಂದು ಸಮಯದಲ್ಲಿ ಹೊಲಿಗೆ ಕಲಿತಿರುತ್ತಾರೆ.

ಇದನ್ನು ಓದಿ:

ಭಾರತದ ಹೊಸ ಮೈಲಿಗಲ್ಲು! 400 Billion Dollar ಸಾಧನೆ

ಬೇಡಿಕೆ ಕಳೆದುಕೊಳ್ಳದ ಉದ್ಯೋಗ

ಹೊಲಿಗೆ ಎಂದೂ ಬೇಡಿಕೆ ಕಳೆದುಕೊಳ್ಳದ ಉದ್ಯೋಗ. ಎಲ್ಲ ಕಾಲದಲ್ಲೂ ಇದಕ್ಕೆ ಬೇಡಿಕೆಯಿದೆ. Blouse, Gounಗಳನ್ನು ಸುಂದರವಾಗಿ Switch ಮಾಡುವ ಕಲೆ ಗೊತ್ತಿದ್ದರೆ ಮಹಿಳೆಯರಿಗೆ ಹೇಳಿ ಮಾಡಿಸಿದ ಕೆಲಸ ಇದು. ಕೆಲ ಮಹಿಳೆಯರಿಗೆ ಸಂಪೂರ್ಣ ಹೊಲಿಗೆ ತಿಳಿದಿದ್ದರೂ ಮನೆಯಲ್ಲಿ Machine ಇರುವುದಿಲ್ಲ. ಅದಕ್ಕೆ ಹೂಡಿಕೆ ಮಾಡಿ ಉದ್ಯೋಗ ಶುರು ಮಾಡುವಷ್ಟು ಹಣವಿರುವುದಿಲ್ಲ. ನೀವೂ ಅಂಥವರಾಗಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ನೀವೂ ಕೂಡ ಹೊಲಿಗೆ ಮಶಿನ್ ಖರೀದಿ ಮಾಡಿ, ನಿಮ್ಮ ಸ್ವಂತ ಉದ್ಯೋಗ ಆರಂಭಿಸಬಹುದು. ಕೇಂದ್ರ ಸರ್ಕಾರ ಅದಕ್ಕೆ ನೆರವಾಗುತ್ತಿದೆ. ಪಿಎಂ ಉಚಿತ ಹೊಲಿಗೆ ಯಂತ್ರ ಯೋಜನೆ 2022” ಅಡಿಯಲ್ಲಿ ಮಹಿಳೆಯರು ಹೊಲಿಗೆ ಮಶಿನ್ ಪಡೆಯಬಹುದಾಗಿದೆ.

ಉಚಿತ ಹೊಲಿಗೆ ಯಂತ್ರ ಯೋಜನೆ

ಕೇಂದ್ರ ಸರ್ಕಾರ ಈ “ ಉಚಿತ ಹೊಲಿಗೆ ಯಂತ್ರ” ನೀಡುವ ಯೋಜನೆಯನ್ನು ಶುರು ಮಾಡಿದೆ. ಮಹಿಳೆಯರು ಈ ಯೋಜನೆಯಡಿ ಅರ್ಜಿ ಸಲ್ಲಿಸಿದರೆ ಸಾಕು.  ಪ್ರತಿ ರಾಜ್ಯದ 50,000 ಮಹಿಳೆಯರ ಅನುಕೂಲಕ್ಕಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಇನ್ನಷ್ಟು ಓದಿರಿ:

PM Awas Yojana new rule! ಸರ್ಕಾರ ಹೊಸ ನಿಯಮವನ್ನು ಜಾರಿಗೆ ತಂದಿದೆ!

ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗಲು ಅವಕಾಶ

ಪ್ರಧಾನಮಂತ್ರಿ ಉಚಿತ ಹೊಲಿಗೆ ಯಂತ್ರ ಯೋಜನೆಯು ದೇಶದ ಮಹಿಳೆಯರಿಗೆ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಅವಕಾಶವನ್ನು ನೀಡುತ್ತದೆ. ಇದು ಭಾರತದ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಉತ್ತಮ ಹೆಜ್ಜೆಯಾಗಿದೆ. ಪ್ರಧಾನ ಮಂತ್ರಿ ಉಚಿತ ಹೊಲಿಗೆ ಯಂತ್ರ ಯೋಜನೆ 2022 ರ ಅಡಿಯಲ್ಲಿ, 20ರಿಂದ 40 ವರ್ಷ ವಯಸ್ಸಿನ ಮಹಿಳೆಯರು ಹೊಲಿಗೆ ಯಂತ್ರವನ್ನು ಪಡೆಯಬಹುದು. ಇದಕ್ಕೆ ಮಹಿಳೆಯರು ಒಂದು ರೂಪಾಯಿ ಖರ್ಚು ಕೂಡ ಮಾಡಬೇಕಾಗಿಲ್ಲ.

Machine ಪಡೆಯಲು ಬೇಕಾದ ದಾಖಲೆ

ಗ್ರಾಮೀಣ ಪ್ರದೇಶದ ಹಾಗೂ ನಗರ ಪ್ರದೇಶದ ಮಹಿಳೆಯರೆಲ್ಲರೂ ಈ ಯೋಜನೆಯಡಿ ಉಚಿತ ಹೊಲಿಗೆ ಯಂತ್ರವನ್ನು ಪಡೆಯಬಹುದು. ಈ ಯೋಜನೆಯ ಲಾಭ ಪಡೆಯಲು ಆಧಾರ್ ಕಾರ್ಡ್, ಜನ್ಮ ದಿನಾಂಕ ದಾಖಲೆ, ಆದಾಯ ಪ್ರಮಾಣಪತ್ರ, ಮೊಬೈಲ್ ಸಂಖ್ಯೆ, ಪಾಸ್‌ಪೋರ್ಟ್ ಗಾತ್ರದ ಫೋಟೋ, ಅಂಗವಿಕಲರಿಗೆ ವಿಶಿಷ್ಟ ಅಂಗವಿಕಲ ಐಡಿ ಮತ್ತು ವಿಧವೆಯರಿಗೆ ವಿಧವೆ ಪ್ರಮಾಣಪತ್ರದ ಅಗತ್ಯವಿದೆ.

ಮತ್ತಷ್ಟು ಓದಿರಿ:

Non-veg ಪ್ರಿಯರಿಗೆ Shock! ದರ ಹೆಚ್ಚಿಸಿದ ಕುಕ್ಕುಟೋದ್ಯಮ

ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸುವುದು ಹೀಗೆ

ಕೇಂದ್ರ ಸರ್ಕಾರದ ಉಚಿತ ಹೊಲಿಗೆ ಯಂತ್ರ ಯೋಜನೆಗೆ ನೀವು ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಅಧಿಕೃತ ವೆಬ್‌ಸೈಟ್ www.india.gov.in  ಗೆ ಹೋಗಿ ಅರ್ಜಿ ಸಲ್ಲಿಸಬೇಕು.

ವೆಬ್‌ಸೈಟ್‌ನ ಮುಖಪುಟದಲ್ಲಿ ಉಚಿತ ಹೊಲಿಗೆ ಪೂರೈಕೆಗಾಗಿ ಅರ್ಜಿ ನಮೂನೆಯ ಲಿಂಕ್ ಕ್ಲಿಕ್ ಮಾಡಿ. ಅರ್ಜಿ ನಮೂನೆಯ PDFPrintout ತೆಗೆದುಕೊಳ್ಳಿ. ಅದರ ನಂತರ ನಿಮ್ಮ ವಿವರಗಳನ್ನು ಅದರಲ್ಲಿ ನಮೂದಿಸಿ. ಕೊನೆಯದಾಗಿ ನಿಮ್ಮ ದಾಖಲೆಗಳನ್ನು ಲಗತ್ತಿಸಿ. ಅರ್ಜಿ ಭರ್ತಿ ಮಾಡಿದ ನಂತರ ಮತ್ತೊಮ್ಮೆ ಪರಿಶೀಲನೆ ನಡೆಸಿ ಅದನ್ನು ಸಲ್ಲಿಸಬೇಕಾಗುತ್ತದೆ. ನಿಮ್ಮ ಅರ್ಜಿಯನ್ನು ಕಚೇರಿ ಅಧಿಕಾರಿಗಳು ಪರಿಶೀಲಿಸುತ್ತಾರೆ. ಪರಿಶೀಲಿಸಿದ ನಂತರ ಹೊಲಿಗೆ ಯಂತ್ರ ನೀಡುತ್ತಾರೆ. ಅದಕ್ಕೆ ನೀವು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ.

ಇದನ್ನೂ ಓದಿರಿ:

ಕನ್ನಡದ ನೆಲಕ್ಕಾಗಿ ಒಂದಾದ ಕಲಿಗಳು! ಮೇಕೆದಾಟುವಿಗಾಗಿ ತೊಡೆತಟ್ಟಿದ ನಾಯಕರು