ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಕಿರುಸಾಲ ಯೋಜನೆಯಡಿ ಸ್ತ್ರೀಶಕ್ತಿ ಗುಂಪುಗಳಿಗೆ ಬಡ್ಡಿರಹಿತ ನೇರ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಸ್ತ್ರೀಶಕ್ತಿ ಗುಂಪುಗಳು ವಿವಿಧ ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ತೊಡಗಿ ಆರ್ಥಿಕವಾಗಿ ಸಬಲರನ್ನಾಗಿಸುವ ನಿಟ್ಟಿನಲ್ಲಿ ಈ ಸಾಲ ಸೌಲಭ್ಯ ನೀಡಲಾಗುತ್ತಿದೆ.
ಸ್ತ್ರೀ ಶಕ್ತಿ ಒಕ್ಕೂಟದಲ್ಲಿ ನೋಂದಣಿಯಾಗಿದ್ದು, ಗುಂಪು ಚಟುವಟಿಕೆ ಮಾಡಲು ಇಚ್ಚಿಸುವ ಸಂಘಗಳಿಗೆ 1 ಲಕ್ಷದಿಂದ 3 ಲಕ್ಷ ರೂಪಾಯಿಯವರೆಗೆ ಬಡ್ಡಿರಹಿತ ನೇರ ಸಾಲ ನೀಡಲಾಗುವುದು. ಆಯಾ ತಾಲೂಕಿನ ಶಿಸು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಫೆ. 12ರೊಳಗಾಗಿ ಸಂಬಂಧಪಟ್ಟ ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಗೆ ಸಲ್ಲಿಸಬೇಕು.
ಸದರಿ ಸಾಲ ಪಡೆದ ಸ್ತ್ರೀಶಕ್ತಿ ಸಂಘಗಳು ಸಾಲಕ್ಕೆ ತಕ್ಕಂತೆ ಪ್ರತಿ ತಿಂಗಳ ಸಮಾನ ಕಂತುಗಳಲ್ಲಿ ನಿಗಮಕ್ಕೆ ಹಿಂದಿರುಗಿಸಬೇಕಿರುತ್ತದೆ. ನಿಗದಿ ಪಡಿಸಿದ ಸಮಯಕ್ಕೆ ಸಾಲ ಮರುಪಾವತಿಸದೇ ಇದ್ದಲ್ಲಿ ಮಾತ್ರ ಶೇ. 1ರಷ್ಟು ಬಡ್ಡ ವಿಧಿಸಲಾಗುತ್ತದೆ.
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಸಮಾಜದಲ್ಲಿ ಸ್ತ್ರೀಶಕ್ತಿ ಗುಂಪುಗಳು ಆರ್ಥಿಕ ಚಟುವಟಿಕೆಗಳ ಘಟಕ/ಸಣ್ಣ ಉದ್ದಿಮೆಯನ್ನು ಸ್ಥಾಪಿಸಿ, ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸಲು ಅವಕಾಶ ಕಲ್ಪಿಸಲಾಗಿದೆ.