ಕೃಷಿಯೊಂದಿಗೆ ಸ್ವತಃ ಎರೆಹುಳು ಗೊಬ್ಬರವನ್ನು ತಯಾರಿಸಲು ಬಯಸುವ ರೈತರಿಗೆ ಸರ್ಕಾರದಿಂದ ದೊರೆಯಲಿದೆ ರೂ.27000 ಸಬ್ಸಿಡಿ. ಇಲ್ಲಿದೆ ಸಂಪೂರ್ಣ ಮಾಹಿತಿ.
ಇದನ್ನೂ ಓದಿರಿ: ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ನ್ಯೂಸ್: 300 ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಸಮ್ಮತಿ.. ಸಚಿವರ ಸ್ಪಷ್ಟನೆ..!
ಹೌದು, ಕೃಷಿಯೆಂಬುದು ನಾವೆಲ್ಲ ತಿಳಿದಷ್ಟು ಸಲೀಸಾದ ಕೆಲಸವಲ್ಲ. ಒಂದು ರೀತಿಯಲ್ಲಿ ನಿತ್ಯ ವಿಧಿಯೊಂದಿಗೆ ಗುದ್ದಾಡಿ ಯಶಸ್ವಿಯಾದಂತೆ. ಇದಕ್ಕಾಗಿಯೇ ರೈತ ಸದಾ ಅನ್ನದಾತ. ಆದರೆ, ಈಚೆಗೆ ಸಾಕಷ್ಟು ರಾಸಾಯನಿಕ ಗೊಬ್ಬರಗಳು ಮಾರುಕಟ್ಟೆ ಪ್ರವೇಶಸಿದ್ದರಿಂದ ಬಹುಪಾಲು ರೈತರು ಕೂಡ ಅವುಗಳನ್ನೆ ಬಳಸುತ್ತಿದ್ದಾರೆ.
ಆದ್ದರಿಂದ ಸರ್ಕಾರವು ರಾಸಾಯನಿಕ ಗೊಬ್ಬರದ ಬಳಕೆ ಕಡಿಮೆ ಮಾಡಿ ರೈತರು ಸಾವಯವ ವಿಧಾನದ ಗೊಬ್ಬರಗಳನ್ನು ಬಳುವಂತೆ ಮಾಡಲು ಸಹಾಯಧನವನ್ನು ನೀಡುತ್ತಿದೆ.
Recruitment: ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಯಲ್ಲಿ ನೇಮಕಾತಿ; ₹85000 ಸಂಬಳ!
ರಾಜ್ಯ ಸರ್ಕಾರಿ ನೌಕರರಿಗೆ Good News: ವರ್ಷಾಂತ್ಯಕ್ಕೆ ದೊರೆಯಲಿದೆ ಕೇಂದ್ರ ಮಾದರಿ ವೇತನ! ಯಾವಾಗ ದೊರೆಯಲಿದೆ ಗೊತ್ತೆ?
ರೈತರಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ. ಅದರಲ್ಲಿ ಈ ಎರೆಹುಳು ಗೊಬ್ಬರ ತಯಾರಿಸುವ ರೈತರಿಗೆ ಕೂಡ ಸಬ್ಸಿಡಿ ದೊರೆಯುವಂತೆ ಮಾಡಿದೆ.
ಎರೆಹುಳು ತೊಟ್ಟಿ ನಿರ್ಮಾಣಕ್ಕೆ ಸಹಾಯಧನ ಪಡೆಯಲು ಮಾಡಬೇಕಾದ ಕೆಲಸಗಳು:
1) ಎರೆಹುಳ ತೊಟ್ಟಿ ನಿರ್ಮಾಣ ಮಾಡುವ ರೈತರು 531 meters ನ ಅಳತೆಯ ತೊಟ್ಟಿಯನ್ನು ನಿರ್ಮಿಸಬೇಕು.
2) ಹೀಗೆ ರೈತರು ನಿರ್ಮಿಸಿದ ಎರೆಹುಳು ಗೊಬ್ಬರದ ತೊಟ್ಟಿಗೆ ಸರ್ಕಾರ ನೀಡುತ್ತಿದೆ ರೂ27000 ಸಹಾಯಧನ
ಗುಡ್ ನ್ಯೂಸ್: ಸಾವಯವ ಕೃಷಿಕರಿಗೆ ಇಲ್ಲಿದೆ ಬರೋಬ್ಬರಿ ರೂ.50,000 ಸಬ್ಸಿಡಿ!
ರೈತರಿಗೆ ರೂ.1,25,000 ಭರ್ಜರಿ ಸಹಾಯಧನ: ವಿವಿಧ ಕೃಷಿ ಚಟುವಟಿಕೆಗೆ ಈ ಸಬ್ಸಿಡಿ!
ಈ ಸಹಾಯಧನ ಪಡೆಯಲು ಬೇಕಾಗುವ ದಾಖಲೆಗಳು:
* ಪಹಣಿಯಲ್ಲಿ ಹೆಸರು ಇರುವ ಆಧಾರ್ ಕಾರ್ಡ್, ರೇಷನ್ ಕಾರ್ಡ್
* ಪಹಣಿ
* ಜಾಬ್ ಕಾರ್ಡ್
* ಸಣ್ಣ ರೈತರ ಪತ್ರ
50 ಲೀ. ವರೆಗೆ ಹಾಲು ನೀಡುವ ದೇಸಿ ತಳಿಯ ಹಸುಗಳು! ರೈತರಿಗೆ ಇಲ್ಲಿದೆ ಉಪಯುಕ್ತ ಮಾಹಿತಿ.
ಎರೆಹುಳ ಗೊಬ್ಬರ ತಯಾರಿಸುವ ವಿಧಾನ
ಎರೆಹುಳು ಗೊಬ್ಬರ ತಯಾರಿಕೆ ಘಟಕವನ್ನು ತಂಪಾದ, ತೇವಾಂಶಯುಳ್ಳ, ನೆರಳಿರುವ ಜಾಗದಲ್ಲಿ ನಿರ್ಮಿಸಬೇಕು. ಸೆಗಣಿ ಗೊಬ್ಬರ, ಕೃಷಿಯ (ಬೆಳೆ ಕಟಾವಿನ ನಂತರ ಉಳಿದ ಹುಲ್ಲು, ಹೊಟ್ಟು, ಹಸಿರು ಕಳೆ ಗಿಡಗಳು, ಕೆಟ್ಟ ತರಕಾರಿ, ಹಣ್ಣುಗಳ) ತ್ಯಾಜ್ಯಗಳನ್ನು ಚಿಕ್ಕದಾಗಿ ಕತ್ತರಿಸಿ 3:1 ಪ್ರಮಾಣದಲ್ಲಿ ಮಿಶ್ರಣಮಾಡಿ 15–20 ದಿನಗಳವರೆಗೆ ಮುಚ್ಚಿಡಬೇಕು. ಹಾಗೆ ಇಟ್ಟ ಮಿಶ್ರಣ ಅರೆಬರೆ ಕೊಳೆತಿರುತ್ತದೆ.
ಎರೆಹುಳು ಗೊಬ್ಬರದ ತೊಟ್ಟಿಯಲ್ಲಿ ಕಸ ಮತ್ತು ಕೊಟ್ಟಿಗೆ ಗೊಬ್ಬರ ಹಾಕಿ ಒಂದು ವಾರ ನೀರನ್ನು ಸಿಂಪಡಿಸಿ ನಂತರ 4ಕೆಜಿ ಎರೆ ಹುಳುಗಳನ್ನು ಬಿಡಬೇಕು.