Government Schemes

ಪರಂಪರಾಗತ ಕೃಷಿ ವಿಕಾಸ ಯೋಜನೆಯಡಿ ಸಾವಯವ ಕೃಷಿ ಮಾಡಲು ಪ್ರತಿ ಹೆಕ್ಟೆರಿಗೆ 50 ಸಾವಿರ ಪ್ರೋತ್ಸಾಹ ಧನ

20 January, 2021 7:08 AM IST By:
Paramparagat krishi vikas yojana

ಸಾವಯವ ಕೃಷಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ಕೇಂದ್ರ ಸರ್ಕಾರವು ಪರಂಪರಾಗತ ಕೃಷಿ ವಿಕಾಸ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿಯಲ್ಲಿ ಪ್ರತಿ ಹೆಕ್ಟೆರಿಗೆ ಸಾವಯವ ಕೃಷಿ ಮಾಡಲು 50 ಸಾವಿರ ರೂಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತದೆ.

ಹೌದು 2015 ರಲ್ಲಿ ಆರಂಭಿಸಲಾದ ಈ ಯೋಜನೆಯಡಿ ಪ್ರತಿ ರೈತರಿಗೆ 50 ಸಾವಿರ ರೂಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತದೆ. ಅದು ಹೇಗೆ ನೀಡಲಾಗುತ್ತದೆ, ಅರ್ಜಿ ಹೇಗೆ ಸಲ್ಲಿಸಬೇಕೆಂಬುದರ ಮಾಹಿತಿ ಇಲ್ಲಿದೆ..

PKVY ಎಂದರೇನು?

ಕೇಂದ್ರ ಸರ್ಕಾರವು ಸಾವಯವ ಕೃಷಿಗೆ ನಿರಂತರವಾಗಿ ಪ್ರೋತ್ಸಾಹ ನೀಡುವುದಕ್ಕಾಗಿ 2015ರಲ್ಲಿ ಈ ಯೋಜನೆ ಆರಂಭಿಸಿದೆ. ಇದು ಕೇಂದ್ರ ಪ್ರಾಯೋಜಿತ ಯೋಜನೆ (ಸಿಎಸ್ಎಸ್), ಕೃಷಿ ಪ್ರಮುಖ ರಾಷ್ಟ್ರೀಯ ಮಿಷನ್ ಮಣ್ಣು ಫಲವತ್ತತೆ ನಿರ್ವಹಣೆ ( SHM ) ನ್ಯಾಷನಲ್ ಮಿಷನ್ ಆಫ್ ಸಸ್ ಸ್ಟೇನಬಲ್ ಅಗ್ರಿಕಲ್ಚರ್  (NMSA) ನ ಒಂದು ಅತಿ ಮುಖ್ಯ ವಾದ ಯೋಜನೆಯಾಗಿದೆ.

ಈ ಯೋಜನೆಯಡಿ 50 ಜನ ರೈತರು ಅಥವಾ ಅದಕ್ಕಿಂತ ಹೆಚ್ಚು ರೈತರು 50 ಎಕರೆ ಜಮೀನು ಹೊಂದಿರುವ ಕ್ಲಸ್ಟರ್ ರಚಿಸಿ ಸಾವಯವ ಕೃಷಿ ಕೈಗೊಳ್ಳಲು ಅವಕಾಶ ಇದೆ.

ಈ ಯೋಜನೆಯಡಿ ಅನುದಾನ:

ಈ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರಕಾರ ಕ್ರಮವಾಗಿ 60:40 ಅನುಪಾತದಲ್ಲಿ ಅನುದಾನ ನೀಡುತ್ತಿದೆ. ಮತ್ತು ಈಶಾನ್ಯ ಮತ್ತು ಹಿಮಾಲಯ ರಾಜ್ಯಗಳಿಗೆ ಕ್ರಮವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ 90:10. ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 100 % ನೆರವು ನೀಡಲಿದೆ.

ಸಹಾಯಧನ 50 ಸಾವಿರ ರೂಪಾಯಿ:

ಈ ಯೋಜನೆಯಡಿ ಮೂರು ವರ್ಷಗಳ ಕಾಲ 50 ಸಾವಿರ ರೂಪಾಯಿ ಸಹಾಯಧನ ನೀಡಲಿದೆ. ಉದಾಹರಣೆಗೆ ಸಾವಯವ ಗೊಬ್ಬರ, ಸಾವಯವ ಕೀಟನಾಶಕ, ಎರೆಹುಳು ಗೊಬ್ಬರ ಇತ್ಯಾದಿ ಗಳನ್ನು ಕೊಳ್ಳಲು ಶೇ. 61 ರಷ್ಟು ರೈತರಿಗೆ 31000 ರೂಪಾಯಿ ಪ್ರೋತ್ಸಾಹ ಧನ ನೀಡಲಿದೆ.

ಸಾವಯವ ಕೃಷಿಗೆ ಪ್ರಮಾಣೀಕರಣ

ಸಾವಯವ ಕೃಷಿಗೆ ಪ್ರಮಾಣ ಪತ್ರ ಪಡೆಯಲು, ಇದಕ್ಕಾಗಿ ನೀವು ಏಜೆಂಟ್ ಮೂಲಕ ಅರ್ಜಿ ಸಲ್ಲಿಸಬೇಕು. ಪಿಕೆವಿವೈ ಅಡಿಯಲ್ಲಿ, ಸಾವಯವ ಗ್ರಾಮವನ್ನು ಕ್ಲಸ್ಟರ್ ವಿಧಾನ ಮತ್ತು ಪಿಜಿಎಸ್ ಪ್ರಮಾಣೀಕರಣದ ಮೂಲಕ ಸಾವಯವ ಕೃಷಿಯನ್ನು ಉತ್ತೇಜಿಸಲಾಗುತ್ತದೆ. PGS ಎಂಬುದು ಸಾವಯವ ಉತ್ಪನ್ನಗಳನ್ನು ಪ್ರಮಾಣೀಕರಣ ಮಾಡುವ ಪ್ರಕ್ರಿಯೆಯಾಗಿದ್ದು, ಗುಣಮಟ್ಟದರ್ಜೆಗೆ ಅನುಗುಣವಾಗಿ ಅವುಗಳ ಉತ್ಪಾದನೆಯು ನಡೆಯುತ್ತದೆ ಎಂಬುದನ್ನು ಖಚಿತಪಡಿಸುತ್ತದೆ.
ಸಾವಯವ ಕೃಷಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಈ ಮುಂದಿನ ಲಿಂಕ್ ಮೇಲೆ  www.jaivikkheti.in ಕ್ಲಿಕ್ ಮಾಡಬಹುದು.

ಹೆಚ್ಚಿನ ಮಾಹಿತಿಗೆ 033 2290 1004ಗೆ  ಕರೆಮಾಡಬಹುದು. ಅಥವಾ jaivikkheti@mstcindia.co.in ಗೆ ಮೇಲ್ ಮಾಡಬಹುದು. ಯೋಜನೆಯ ಕುರಿತು ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ - https://darpg.gov.in/sites/default/files/Paramparagat%20Krishi%20Vikas%20Yojana.pdf