ಕೊರೋನಾ ಮಹಾಮಾರಿಯಿಂದ ತತ್ತರಿಸಿ ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಒಂದು ಅದ್ಭುತವಾದ ಯೋಜನೆಯಿದೆ. ಈ ಯೋಜನೆಯಲ್ಲಿ ಎಲ್ಲಾ ವರ್ಗದವರು ಅರ್ಹರಾಗಿರುತ್ತಾರೆ, ಅಟಲ್ ಪಿಂಚಣಿ ಯೋಜನೆಯಡಿಯಲ್ಲಿ ಪಿಂಚಣಿ ಮಾಡಿಸಿದರೆ ತಿಂಗಳಿಗೆ 5 ಸಾವಿರ ಪಿಂಚಣಿ ಪಡೆಯಬಹುದು.
ಹೌದು, ಅಟಲ್ ಪಿಂಚಣಿ ಯೋಜನೆ ಅಥವಾ ಎಪಿವೈ ಅನ್ನು ಜೂನ್ 2015 ರಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಪ್ರಾರಂಭಿಸದೆ.
ಅಟಲ್ ಪಿಂಚಣಿ ಯೋಜನೆಯನ್ನು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ಅಡಿಯಲ್ಲಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಅಥವಾ ಪಿಎಫ್‌ಆರ್‌ಡಿಎ ನಿರ್ವಹಿಸುತ್ತದೆ. ಅಟಲ್ ಪಿಂಚಣಿ ಯೋಜನೆಯಡಿ, ಫಲಾನುಭವಿಗಳು 60 ವರ್ಷ ದಾಟಿದ ನಂತರ ನಿಗದಿತ ಪಿಂಚಣಿ ಮೊತ್ತವನ್ನು ಪಡೆಯುತ್ತಾರೆ.
ಇದನ್ನೂ ಓದಿ: ಗಂಗಾ ಕಲ್ಯಾಣ ಯೋಜನೆಯಡಿ ಉಚಿತ ಬೋರ್ವೆಲ್ ಕೊರೆಸುವಿಕೆಗೆ 3 ಲಕ್ಷ ಸಹಾಯಧನ
ನೀವು ಅರ್ಜಿ ಸಲ್ಲಿಸಿ ನೀವು 60 ವರ್ಷವನ್ನು ಮುಗಿಸಿದ ನಂತರ ನಿಮಗೆ ಪ್ರತಿ ತಿಂಗಳು ಪೆನ್ಷನ್ ಹಣ ಬರುತ್ತಾ ಹೋಗುತ್ತದೆ ಇದು 1000 ಇಂದ ಐದು ಸಾವಿರ ರೂಪಾಯಿಗಳವರೆಗೂ ಆಗಿರಬಹುದು, ನೀವು 18ರಿಂದ 40 ನೇ ವಯಸ್ಸಿನ ಒಳಗಡೆ ಯಾಗಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕು.
ಎಪಿವೈ ಯೋಜನೆಯಡಿ ಪಿಂಚಣಿ ಪಡೆಯಲು ಅರ್ಹತೆ:
ಭಾರತೀಯ ನಾಗರಿಕರಾಗಿರಬೇಕು ವಯಸ್ಸಿನ ಮಿತಿ 18-40 ವರ್ಷದ ನಡುವೆ ಇರಬೇಕು ಮಾನ್ಯವಾದ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಬೇಕು ವ್ಯಕ್ತಿಗಳು ಮಾನ್ಯ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.
ಕನಿಷ್ಠ ಹೂಡಿಕೆ:
ಅಟಲ್ ಪಿಂಚಣಿ ಯೋಜನೆಯ ಕನಿಷ್ಠ ಹೂಡಿಕೆಯು ಪಿಂಚಣಿ ಯೋಜನೆಗಳು ಮತ್ತು ವಯಸ್ಸಿನ ಆಧಾರದ ಮೇಲೆ ಭಿನ್ನವಾಗಿರುತ್ತದೆ. ಉದಾಹರಣೆಗೆ, ಒಬ್ಬ ವ್ಯಕ್ತಿಯು ನಿವೃತ್ತಿಯ ನಂತರದ ಪಿಂಚಣಿ ಮೊತ್ತವಾಗಿ 1,000 ರೂಪಾಯಿಗಳನ್ನು ಗಳಿಸಲು ಬಯಸಿದರೆ ಮತ್ತು 18 ವರ್ಷಗಳು ಆಗಿದ್ದರೆ ಅದರ ಕೊಡುಗೆ 42 ರೂಪಾಯಿಗಳಾಗಿರುತ್ತದೆ. ಆದಾಗ್ಯೂ, ಅದೇ ವ್ಯಕ್ತಿಯು ನಿವೃತ್ತಿಯ ನಂತರದ ನಿವೃತ್ತಿಯಂತೆ 5,000 ರೂಪಾಯಿಗಳನ್ನು ಗಳಿಸಲು ಬಯಸಿದರೆ ಕೊಡುಗೆ ಮೊತ್ತ 210 ರೂ..
ಇದನ್ನೂ ಓದಿ: ಯುವಕರಿಗೆ ಗುಡ್ ನ್ಯೂಸ್ -ದ್ವಿಚಕ್ರ ವಾಹನ ಖರೀದಿಗೆ 25 ಸಾವಿರ ರೂ. ಸಹಾಯಧನ, ಇಂದೇ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ
ನೀವು ಯೋಜನೆಯನ್ನು ಅರ್ಜಿ ಸಲ್ಲಿಸಲು ಬ್ಯಾಂಕ್ ಅಥವಾ ಅಂಚೆ ಕಚೇರಿ ಅಥವಾ ಆನ್ಲೈನ್ ಮೂಲಕ ಕೂಡ ಸಲ್ಲಿಸಬಹುದು. ಯೋಜನೆಯಡಿಯಲ್ಲಿ ಅರ್ಜಿಯನ್ನು ಸಲ್ಲಿಸುವಾಗ ನೀವು ನಾಮಿನಿ ಡಿಟೇಲ್ ಅನ್ನು ಕೊಡಬೇಕಾಗುತ್ತದೆ. ನೀವು ಅಟಲ್ ಪೆನ್ಷನ್ ಯೋಜನೆಗಾಗಿ ತಿಂಗಳಿಗೊಮ್ಮೆ ಅಥವಾ ಮೂರು ತಿಂಗಳಿಗೆ ಅಥವಾ ಆರು ತಿಂಗಳಿಗೆ ಅಥವಾ ವರ್ಷಕ್ಕೊಮ್ಮೆ ಹಣವನ್ನು ಕಟ್ಟಬಹುದು.ಒಂದು ವೇಳೆ 60 ವರ್ಷದ ನಂತರ ಮರಣ ಹೊಂದಿದಲ್ಲಿ ಅವರು ನೇಮಕ ಮಾಡಿದಂತ ನಾಮಿನಿಗೆ ಹಣ ಸಂದಾಯವಾಗುತ್ತದೆ.
ಇದು ಒಂದು ಕೇಂದ್ರಸರ್ಕಾರದ ಅದ್ಭುತ ಯೋಜನೆಯಾಗಿದ್ದು ಎಲ್ಲರೂ ಇದರ ಉಪಯೋಗವನ್ನು ಪಡೆದುಕೊಳ್ಳಬೇಕು,ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ಬ್ಯಾಂಕ್ ಅಥವಾ ಅಂಚೆ ಕಚೇರಿ ಅಥವಾ ಆನ್ಲೈನ್ ಸೆಂಟರ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು.
ಲೇಖನ:ಚಿನ್ನಪ್ಪ ಎಸ್. ಅಂಗಡಿ