ಪ್ರಧಾನ ಮಂತ್ರಿ ಕಿಸಾನ್ ಯೋಜನೆ: ಕೇಂದ್ರ ಸರ್ಕಾರದಿಂದ ರೈತರಿಗೆ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭ ಪಡೆದ ರೈತರು ಈಗ ದುಪ್ಪಟ್ಟು ಲಾಭ ಪಡೆಯಲಿದ್ದಾರೆ. ಈ ಹಿಂದೆ ಸರ್ಕಾರ ರೈತರ ಖಾತೆಗೆ 2000 ರೂ.ಗಳನ್ನು ವರ್ಗಾಯಿಸುತ್ತಿತ್ತು ಆದರೆ ಈಗ 4 ಸಾವಿರ ರೂಪಾಯಿಯನ್ನು ರೈತರ ಖಾತೆಗೆ ವರ್ಗಾಯಿಸಲಾಗುತ್ತೆ ಎಂದು ಹೇಳಲಾಗುತ್ತಿದೆ.
ಹೌದು ನೀವು ಕೂಡ ಪಿಎಂ ಕಿಸಾನ್ ಫಲಾನುಭವಿಗಳಾಗಿದ್ದರೆ, ಈ ಬಾರಿ ನಿಮಗೆ ದುಪ್ಪಟ್ಟು ಹಣ ಸಿಗುತ್ತದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಸರ್ಕಾರವು ರೈತರಿಗೆ ವಾರ್ಷಿಕ 6000 ರೂಪಾಯಿಗಳ ಆರ್ಥಿಕ ನೆರವು ನೀಡುತ್ತದೆ. ಈ ಹಣವನ್ನು ಸರ್ಕಾರವು ದೇಶದ ರೈತರ ಆದಾಯವನ್ನು ದ್ವಿಗುಣಗೊಳಿಸಲು ಉದ್ದೇಶಿಸಲಾಗಿದೆ.
ಇದುವರೆಗೆ 13 ಕಂತುಗಳ ಹಣವನ್ನು ಕೇಂದ್ರ ಸರ್ಕಾರ ರೈತರ ಖಾತೆಗೆ ವರ್ಗಾಯಿಸಿದೆ. ಸದ್ಯ ರೈತರು 14ನೇ ಕಂತಿನ ನಿರೀಕ್ಷೆಯಲ್ಲಿದ್ದಾರೆ. 13ನೇ ಕಂತಿನ ಹಣ ಬಂದಿಲ್ಲದ ರೈತರಿಗೆ 13 ಮತ್ತು 14ನೇ ಕಂತುಗಳ ಹಣ ಒಟ್ಟಿಗೆ ಸಿಗುತ್ತದೆ ಹೇಳಲಾಗುತ್ತಿದೆ. ಅನೇಕ ಕಾರಣಗಳಿಂದ ಕಳೆದ ಕಂತನ್ನು ಕಳೆದುಕೊಂಡ ರೈತರಿಗೆ ಈ ಬಾರಿ ಅವರ ದಾಖಲಾತಿಯೆಲ್ಲ ಸರಿಯಾಗಿದ್ದರೆ 13ನೇ ಕಂತನ್ನು 14ನೇ ಕಂತಿನ ಜೊತೆಗೆ ವರ್ಗಾಯಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಅನೇಕ ರೈತರು ತಮ್ಮ ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ .ಇದರಿಂದಾಗಿ ಆ ರೈತರಿಗೆ 13 ನೇ ಕಂತಿನ ಹಣ ಸಿಗಲಿಲ್ಲ, ಆದರೆ ಈಗ ಹೆಚ್ಚಿನ ಸಂಖ್ಯೆಯ ರೈತರು ಪರಿಶೀಲನೆಯನ್ನು ಮಾಡಿದ್ದಾರೆ. ಇದೀಗ 14ನೇ ಕಂತಿನಲ್ಲಿ ಸರಕಾರ ರೈತರಿಗೆ 2000 ರೂ. ಬದಲಿಗೆ 4000 ರೂ. ಇದರಲ್ಲಿ 13ನೇ ಕಂತಿನ ಹಣ ಸಿಗದ ರೈತರು. ಆ ರೈತರಿಗೆ 13ನೇ ಕಂತಿನ ಹಣವೂ ಸಿಗಲಿದೆ.
14ನೇ ಕಂತು ರಿಲೀಸ್ ಎಂದು..?
ಪಿಎಂ ಕಿಸಾನ್ ಸಮ್ಮಾನ್ ನಿಧಿಯ 14ನೇ ಕಂತು ಏಪ್ರಿಲ್ ಮತ್ತು ಜುಲೈ ನಡುವೆ ಬಿಡುಗಡೆಯಾಗಲಿದೆ. ಕಳೆದ ವರ್ಷ, ಇದೇ ಅವಧಿಯಲ್ಲಿ 11 ನೇ ಕಂತನ್ನು 31 ಮೇ 2022 ರಂದು ವರ್ಗಾಯಿಸಲಾಯಿತು. ಹೀಗಾಗಿ ಈ ಬಾರಿ 14ನೇ ಕಂತು ಈ ಸಮಯಕ್ಕೆ ಅಂದರೆ ಮೇ ತಿಂಗಳ ಅಂತ್ಯದಲ್ಲಿ ಖಾತೆಗೆ ಬರುವ ಸಾಧ್ಯತೆ ಇದೆ.
ಸ್ಮಾರ್ಟ್ ಫೋನ್ ಕಳೆದುಹೋದ್ರೆ ತಕ್ಷಣ ಈ ಕೆಲಸ ಮಾಡಿ ಸಾಕು!
1.86 ಅನರ್ಹ ರೈತರನ್ನು ಹೊರಹಾಕಲಾಗಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಇ-ಕೆವೈಸಿ ಮತ್ತು ಭೂ ದಾಖಲೆಗಳ ಪರಿಶೀಲನೆಯನ್ನು ಸರ್ಕಾರ ಕಡ್ಡಾಯಗೊಳಿಸಿರುವುದರಿಂದ ಇದೀಗ ಈ ಅನರ್ಹರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ.
ಪಿಎಂ ಕಿಸಾನ್ ಬಗ್ಗೆ ಇಲ್ಲಿ ದೂರು ನೀಡಿ
ನಿಮ್ಮ ಖಾತೆಗೆ 13 ನೇ ಕಂತಿನ ಹಣ ಇನ್ನೂ ಬಂದಿಲ್ಲವಾದರೆ, ನೀವು ಸಹಾಯವಾಣಿ ಸಂಖ್ಯೆ 155261 ಅಥವಾ 1800115526 ಅಥವಾ ಈ ಸಂಖ್ಯೆ 011-23381092 ಅನ್ನು ಸಂಪರ್ಕಿಸಬಹುದು. ಇದಲ್ಲದೆ pmkisan-ict@gov.in ಇಮೇಲ್ ಐಡಿಗೆ ಮೇಲ್ ಮಾಡುವ ಮೂಲಕ ನಿಮ್ಮ ಸಮಸ್ಯೆಯನ್ನು ದಾಖಲಿಸಬಹು.