ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲಿ ದೇಶದ ರೈತರ ಹಿತದ ಬಗ್ಗೆ ಸದಾ ಚಿಂತಿಸಿ, ದಿನದಿಂದ ದಿನಕ್ಕೆ ಒಂದಲ್ಲ ಒಂದು ಯೋಜನೆ ಜಾರಿಗೆ ತರುತ್ತಿದ್ದು, ಎಲ್ಲ ಸವಲತ್ತುಗಳನ್ನು ನೀಡಲು ಸರ್ಕಾರ ಸರ್ವ ಪ್ರಯತ್ನಗಳನ್ನು ನಡೆಸುತ್ತಿದೆ.
ಇನ್ನು ರೈತರಿಗೆ ನೇರ ಬೆಂಬಲವನ್ನು ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು 2018 ರಲ್ಲಿ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯನ್ನು ಪ್ರಾರಂಭಿಸಿರುವುದು ಈ ಯೋಜನೆಯಲ್ಲಿ ವಾರ್ಷಿಕ 6 ಸಾವಿರ ರೂಪಾಯಿಗಳ ಆರ್ಥಕ ಸಹಾಯವನ್ನ ನೀಡುತ್ತದೆ ಎಂಬುದು ಇದೀಗ ನಿಮಗೆಲ್ಲ ತಿಳಿದಿರುವುದೆ.
ಈಗ ಈ ಯೋಜನೆಯಡಿ ರೈತರಿಗೆ ನೀಡುವ ಕಂತಿನ ಮೊತ್ತವನ್ನು ಹೆಚ್ಚಿಸಬೇಕೆಂಬ ಆಗ್ರಹ ಕೇಳಿ ಬರುತ್ತಿದೆ. ವರದಿಯೊಂದರ ಪ್ರಕಾರ ರೈತರ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ ಆರ್ಥಿಕ ನೆರವು ಹೆಚ್ಚಿಸಬೇಕೆಂಬ ಬೇಡಿಕೆ ಉಂಟಾಗಿದೆ. ICRIER ವರದಿಯು ಪಿಎಂ ಕಿಸಾನ್ ಯೋಜನೆಯಡಿ ಮೊತ್ತವನ್ನು ಹೆಚ್ಚಿಸಲು ಸಲಹೆಗಳನ್ನು ನೀಡಿದೆ.
ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ವಾರ್ಷಿಕವಾಗಿ ಎಲ್ಲಾ ಅರ್ಹ ರೈತರಿಗೆ ಕೇವಲ 6,000 ರೂ.ಗಳನ್ನು ಪಾವತಿಸಲಾಗುತ್ತಿದೆ. ಇಲ್ಲಿಯವರೆಗೆ ಇದರಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ, ಆದರೆ ದೇಶದಲ್ಲಿ ವಿವಿಧ ವಸ್ತುಗಳ ಹಣದುಬ್ಬರವು ಹಲವಾರು ಪಟ್ಟು ಹೆಚ್ಚಾಗಿದೆ. ಹೀಗಾಗಿ ಇದೇಶದಲ್ಲಿ ಪ್ರಸ್ತುತ ಹಣದುಬ್ಬರವನ್ನು ಗಮನಿಸಿದರೆ ರೈತರಿಗೆ ಕನಿಷ್ಠ 10 ಸಾವಿರ ರೂಪಾಯಿ ಆರ್ಥಿಕ ನೆರವು ನೀಡಬೇಕು ಎಂದು ಹೇಳಲಾಗಿದೆ.
2 ಹೆಕ್ಟೇರ್ಗಿಂತ ಕಡಿಮೆ ಭೂಮಿಯನ್ನು ಹೊಂದಿರುವ ಮತ್ತು ಕೆಲವೇ ದೊಡ್ಡ ರೈತರನ್ನು ಹೊಂದಿರುವ ಅತಿ ಹೆಚ್ಚು ಸಣ್ಣ ರೈತರನ್ನು ಭಾರತ ಹೊಂದಿದೆ. ಇನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನರ್ಹ ರೈತರನ್ನು ಈ ಪಟ್ಟಿಯಿಂದ ಹೊರಗಿಟ್ಟ ಕಾರಣ ಕೇಂದ್ರ ಸರ್ಕಾರವು ಇತ್ತೀಚೆಗೆ ಪ್ರಧಾನ ಮಂತ್ರಿ ಕಿಸಾನ್ ನಿಧಿ ಯೋಜನೆಯಡಿ 10 ಸಾವಿರ ಕೋಟಿ ರೂಪಾಯಿಗಳನ್ನು ಉಳಿಸಿದೆ. ಆದ್ದರಿಂದ ಅವರನ್ನೂ ಕೂಡ ಪುನಃ ಯೋಜನೆಗೆ ಸೇರಿಸಬೇಕೆಂದು ಹೇಳಲಾಗುತ್ತಿದೆ.