ರಾಜ್ಯದಲ್ಲಿ ಸಿರಿಧಾನ್ಯ ಬೆಳೆಯುವ ರೈತರಿಗೆ ಕೃಷಿ ವಿಕಾಸ್ ಯೋಜನೆಯಲ್ಲಿ ಸಂಯೋಜಿಸಲಾದ ರೈತ ಸಿರಿ ಯೋಜನೆಯ ಮೂಲಕ ಸಿರಿಧಾನ್ಯ ಬೆಳೆಗಾರರಿಗೆ 10 ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ. ರೈತರಿಗೆ ಸರ್ಕಾರ ಇದನ್ನು ನೇರ ವರ್ಗಾವಣೆ ಮೂಲಕ(DBT) ರೈತರ ಅಕೌಂಟ್‌ಗೆ 10 ಸಾವಿರ ರೂಪಾಯಿ ಪಾವತಿಸಲಾಗುತ್ತದೆ. ಸಿರಿಧಾನ್ಯ ಬೆಳೆಗಳ ವ್ಯಾಪ್ತಿ ಹೆಚ್ಚಿಸಲು ಈ ಅನುದಾನವನ್ನು ನೀಡಲಾಗುತ್ತದೆ.
ಈ ಯೋಜನೆಯನ್ನು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಹಾಗೂ ಯೋಜನೆಗಳೊಂದಿಗೆ ಸಂಯೋಜಿಸಲಾಗಿದೆ. ಸಿರಿಧಾನ್ಯಗಳು ಪ್ರಮುಖವಾಗಿ ಮಳೆಯಾಶ್ರಿತ ಬೆಳೆಗಳಾಗಿದ್ದು ಮುಂಗಾರು ಹಂಗಾಮಿನಲ್ಲಿ ಬೆಳೆಯಲಾಗುತ್ತದೆ.
ರಾಜ್ಯದಲ್ಲಿ ಸಿರಿಧಾನ್ಯ ಬೆಳೆಯುವ ಬೆಳೆಗಾರರಿಗೆ ಉತ್ತೇಜನ ನೀಡಲು ರೈತಸಿರಿ ಎಂಬ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಫಲಾನುಭವಿ ರೈತರು ಸಿರಿಧಾನ್ಯಗಳಾದ ಊದಲು, ನವಣೆ, ಹಾರಕಾ, ಕೊರಲೆ, ಸಾಮೆ ಮತ್ತು ಬರಗುಗಳಂತ ಸಿರಿಧಾನ್ಯಗಳಿಗೆ ಬೆಳೆದಿರಬೇಕು. ಸಿರಿಧಾನ್ಯ ಬೆಳೆಯಲು ಆಸಕ್ತಿಯಿರುವ ಹಾಗೂ ಈಗಾಗಲೇ ಬಿತ್ತನೆ ಮಾಡಿರುವ ರೈತರು ರೈತಸಿರಿ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿ ಪ್ರೋತ್ಸಾಹಧನ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹುದು.
ಪಿಎಂ ಕಿಸಾನ್ ಬಿಗ್ ಅಪ್‌ಡೇಟ್: ಲಕ್ಷಾಂತರ ರೈತರಿಗೆ ಗುಡ್‌ನ್ಯೂಸ್ ನೀಡಿದ ಕೇಂದ್ರ ಸರ್ಕಾರ
ಪ್ರಮುಖ ಅಂಶಗಳು
ಪ್ರತಿ ಹೆಕ್ಟೇರ್‌ಗೆ 10,000 ರೂಪಾಯಿ
ಹಾರಕ, ನವಣೆ, ಹಾರಕ, ಸಾಮೆ ಮತ್ತು ಬರಗು ಸಿರಿಧಾನ್ಯಗಳಿಗೆ ಮಾತ್ರ ಆದ್ಯತೆ
2 ಕಂತುಗಳಲ್ಲಿ ನಗದು ವರ್ಗಾವಣೆ
ಸೀದಾ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು.
ಮೊದಲ ಕಂತಿನ 6000 ರೂಪಾಯಿಯನ್ನು ಬಿತ್ತನೆ ಮಾಡಿದ 30 ದಿನಗಳ ನಂತರ GPS ಆಧಾರಿತ ಫೋಟೋ ಪರಿಶೀಲನೆ ಬಳಿಕ ನೀಡಲಾಗುತ್ತದೆ.
₹4,000ವನ್ನು ನಂತರದಲ್ಲಿ ಜಮೆ ಮಾಡಲಾಗುವುದು.
ಗರಿಷ್ಠ 2 ಹೆಕ್ಟೇರ್‌ಗೆ ಮಾತ್ರ ಸೀಮಿತವಾಗುವಂತೆ ಪ್ರೋತ್ಸಾಹಧನ.
ಫಲಾನುಭವಿಗಳ ಅರ್ಹತೆ:
ಫಲಾನುಭವಿಯು ಮೊದಲಿಗೆ ರೈತರಾಗಿರಬೇಕು. ಅವರ ಹೆಸರರಿನಲ್ಲಿಯೇ ಜಮೀನನ್ನು ಹೊಂದಿರಬೇಕು. ಜಂಟಿ ಖಾತೆ ಇದ್ದಿದ್ದಲ್ಲಿ, ಇತರೆ ಖಾತೆದಾರರ ಒಪ್ಪಿಗೆಯ ಪ್ರಮಾಣ ಪತ್ರ ಪಡೆದಿರಬೇಕು.
ಮಹಿಳೆಯ ಹೆಸರಲ್ಲಿ ಖಾತೆ ಹೊಂದಿ, ಕುಟುಂಬದ ಇತರೆ ಪುರುಷ ಸದಸ್ಯರ ಹೆಸರಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ ಮಾನ್ಯ ಮಾಡಬಾರದು, ಅಂತವುಗಳನ್ನು ತಿರಸ್ಕರಿಸಬೇಕು.
ಈ ಯೋಜನೆಯಡಿ, ಮುಖ್ಯವಾಗಿ ರಾಜ್ಯದ 17 ಜಿಲ್ಲೆಗಳಲ್ಲಿಊದಲು, ನವಣೆ, ಹಾರಕ, ಕೊರಲೆ, ಸಾಮೆ, ಮತ್ತುಬರಗು ಸಿರಿಧಾನ್ಯಗಳಿಗೆ ಒತ್ತು ನೀಡಲಾಗಿದೆ. ಫಲಾನುಭವಿ ರೈತರು ಮೇಲ್ಕಾಣಿಸಿದ ಸಿರಿಧಾನ್ಯಗಳನ್ನೆ ಪ್ರಮುಖ ಬೆಳೆಯಾಗಿ ಬೆಳೆದಿರಬೇಕು.
ಈ ಯೋಜನೆಯ ಉದ್ದೇಶಗಳು ಏನು..?
ಸಿರಿಧಾನ್ಯ ಬಿತ್ತನೆಯನ್ನು ಹೆಚ್ಚಿಸುವುದು ಮತ್ತು ಉತ್ಪಾದನೆಯ ಹೆಚ್ಚಳ
ಸಿರಿಧಾನ್ಯಗಳು ಸುಸ್ಥಿರ ಕೃಷಿ ಹಾಗೂ ಪರಿಸರಕ್ಕೆ ಪೂರಕವಾಗಿರುವುದರಿಂದ ಈ ಧಾನ್ಯಗಳನ್ನು ಬೆಳೆಯಲು ಪ್ರೋತ್ಸಾಹ
ಕಡಿಮೆ ಫಲಪ್ರದವಾದ ಭೂಮಿಯ ಸದ್ಬಳಕೆಗಾಗಿ ಪೂರಕವಾದ ಸುಧಾರಿತ ತಾಂತ್ರಿಕತೆಗಳನ್ನು ಸೂಕ್ತವಾಗಿ ಅಳವಡಿಸಿ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುವುದು.
ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳ ಪಟ್ಟಿ
ವಸತಿ ಪ್ರಮಾಣಪತ್ರ
ಆಧಾರ್ ಕಾರ್ಡ್
ಆದಾಯ ಪ್ರಮಾಣಪತ್ರ
ಬ್ಯಾಂಕ್ ಖಾತೆ ಪಾಸ್ ಬುಕ್
ವಿಳಾಸದ ಕುರಿತಂತೆ ಪುರಾವೆ
ಭೂ ದಾಖಲೆಗಳು
ಯೋಜನೆಯ ಬಗ್ಗೆ ಹೆಚ್ಚಿನ ವಿವರಗಳನ್ನು https://raitamitra.karnataka.gov.in/info-2/Raita+Siri/en ನಲ್ಲಿ ಪರಿಶೀಲಿಸಬಹುದು