Wildlife Protection Act: ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಹಾಗೂ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಅಡಿಯಲ್ಲಿ ಭಾರತದ ಪ್ರತಿಯೊಬ್ಬ ಪ್ರಜೆಯೂ ತಿಳಿದಿರಲೆಬೇಕಾದ ಪ್ರಾಣಿ ಸಂಬಂಧಿತ ಕಾನೂನುಗಳು ಇಲ್ಲಿವೆ ನಿಮ್ಮ ಓದಿಗಾಗಿ…
- ಮಂಗಗಳನ್ನು ಮತ್ತು ಗಿಳಿಗಳನ್ನು ಸಾಕುವುದು ನ್ಯಾಯ ಸಮ್ಮತವಲ್ಲ ಹಾಗೂ ಶಿಕ್ಷಾರ್ಹ ಅಪರಾಧ. (Wild life (Protection) Act 1972)
- ಕರಡಿ, ಮಂಗ, ಹುಲಿ, ಚಿರತೆ, ಸಿಂಹ ಹಾಗೂ ಹೋರಿಗಳಿಗೆ ತರಬೇತಿ ನೀಡುವುದಾಗಲಿ ಅಥವಾ ಯಾವುದೇ ವಿಧದ ಮನರಂಜನೆಗಾಗಿ ಅವುಗಳನ್ನು ಬಳಸುವಂತಿಲ್ಲ. Section 22(1), PCA Act, 1960)
- ದೇಶದ ಯಾವುದೇ ಸ್ಥಳದಲ್ಲಿ ಪ್ರಾಣಿ ಬಡಿ ನಿಷಿದ್ಧ. (Rule 3, Slaughterhouse Rules 2001)
- ಸಾರ್ವಜನಿಕ ದೇವಸ್ಥಾನ/ ಪೂಜಾ ಸ್ಥಳಗಳಲ್ಲಿ ಅದರ ಸುತ್ತ ಮುತ್ತ ಪ್ರಾಣಿ ಬಲಿ ಸಂಪೂರ್ಣ ನಿಷೇಧ, ಉಲ್ಲಂಘನೆ ದಂಡ ಕಲಂ (6) ಆರು ತಿಂಗಳ ಸೆರೆವಾಸ, ಕಲಂ (7) ನಿಯಮ ಉಲ್ಲಂಘಿಸಿದ ಯಾವುದೇ ವ್ಯಕ್ತಿಯ ವಾರಂಟ್ ಇಲ್ಲದೆ ಪೊಲೀಸ್ ಇನ್ಸ್‌ಪೆಕ್ಟರ್‌ವರು ದಸ್ತಗಿರಿ ಮಾಡಲು ಅಧಿಕಾರವಿದೆ. (Section 3,6,7)
- ಪ್ರಾಣಿಗಳಿಗೆ ಹೊಡೆಯುವುದು, ಒದೆಯುವುದು, ಸವಾರಿ ಮಾಡುವುದು, ಅತಿಭಾರ ಹೇರುವುದು, ಚಿತ್ರಹಿಂಸೆ ನೀಡುವುದು ನಿಷೇಧಿಸಿದೆ. ಯಾವುದೇ ವಾಹನವನ್ನು ಎಳೆಯುವ ಅಥವಾ ಭಾರ ಹೊರುವ ಪ್ರಾಣಿಯನ್ನು ದಿನದಲ್ಲಿವೊಟ್ಟು 5 ಗಂಟೆಗಿಂತ ಹೆಚ್ಚಾಗಿ, ವಿಶ್ರಾಂತಿ ನೀಡದೆ ಬಳಸಬಾರದು. (Section (11) (1))
- ಅಶಕ್ತ, ರೋಗಗ್ರಸ್ತ ಪ್ರಾಣಿಗಳಿಂದ ಕೆಲಸ ಮಾಡಿಸುವುದು, ಬೇಕಂತಲೇ ಕಾರಣ ಇಲ್ಲದೇ ಔಷಧಗಳನ್ನು ನೀಡುವುದು, ನಿಗದಿತ ಸಮಯಕ್ಕಿಂತ ಮೀರಿ ಬಂಧಿಸುವುದು, ವ್ಯಾಯಾಮ ಮಾಡಿಸದೆ ಇರುವುದು. ಮಾಲೀಕನಾಗಿ, ಸಕಾಲದಲ್ಲಿ ಅವಶ್ಯಕ ನೀರು, ಆಹಾರ, ನೆಲೆ ನೀಡದೆ ಇರುವುದು. ಸಾರ್ವಜನಿಕ ಪ್ರದರ್ಶನಕ್ಕೆ ಮನರಂಜನೆಗಾಗಿ ಪ್ರಾಣಿಗಳನ್ನು ಬಳಸುವುದು ಅಪರಾಧ. (Section 21, 22, 23)
- ಎಲ್ಲಾ ಜೀವಿಗಳ ಬಗ್ಗೆ ಅನುಕಂಪ ಹೊಂದಿರಬೇಕಾಗಿರುವುದು ಪ್ರತಿ ಭಾರತೀಯ ಪ್ರಜೆಯ ಮೂಲಭೂತ ಕರ್ತವ್ಯವಾಗಿದೆ.(Article 51A(g))
- ಬಿಡಾಡಿ ಜಾನುವಾರುಗಳು ಸೇರಿದಂತೆ ಯಾವುದೇ ಪ್ರಾಣಿಗಳನ್ನು ಹಿಂಸಿಸುವುದು ಅಥವಾ ವಧೆ ಮಾಡುವುದು ಶಿಕ್ಷಾರ್ಹ ಅಪರಾಧ.(IPC Section 428 and 429)
- ಮಾಲೀಕನಾಗಿದ್ದರೂ ಸಾಕು ಪ್ರಾಣಿಗಳನ್ನು ಮನೆಯಿಂದ ಹೊರಗೆ ಬಿಟ್ಟುಬಿಡುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ. (Section 11(1) and section 11 (j) PCA Act,1960)
- ಕೋಳಿಗಳೂ ಸೇರಿದಂತೆ ಯಾವುದೇ ಪ್ರಾಣಿ ಅಥವಾ ಪಕ್ಷಿಗಳನ್ನು ವಧಾಗಾರ ಹೊರತುಪಡಿಸಿ ಇನ್ಯಾಔಉದೋ ಸ್ಥಳಗಳಲ್ಲಿ ವಧೆ ಮಾಡತಕ್ಕದ್ದಲ್ಲ. (2001 and Chapter 4, Food Safety and standards regulations, 2011)
- ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಬೀದಿ ನಾಯಿಗಳನ್ನು ಬೇರೆ ಕಡೆಗೆ ಸ್ಥಳಾಂತರಿಸುವಂತಿಲ್ಲ. ನಿರ್ದಿಷ್ಟ ಸಂಸ್ಥೆ ಮಾತ್ರವೇ ಬೀದಿ ನಾಯಿಗಳನ್ನು ಹಿಡಿದು ಸಂತಾನಹರಣ ಶಸ್ತ್ರಚಿಕತ್ಸೆಗೆ ಒಳಪಡಿಸಿ ನಂತರ ಸ್ಥಳದಲ್ಲಿ ಬಿಡಬೇಕು. (ABC Rules,2001)
- ಯಾವುದೇ ಪ್ರಾಣಿಗೆ ಕಾಲಕಾಲಕ್ಕೆ ಆಹಾರ ನೀಡದಿರುವುದು, ವಸತಿ ಕಲ್ಪಿಸದೇ ಇರುವುದು, ನಿರ್ಲಕ್ಷಿಸಿ ವ್ಯಾಯಾಮ ಮಾಡಿಸದೇ ಇರುವುದು. ದೀರ್ಘಕಾಲ ಒಂಟಿಯಾಗಿ ಕೂಡಿ ಹಾಕುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ. (Section 11(1)(h),PCA Act,1960)
- ಪ್ರಾಣಿಗಳ ಕಾದಾಟವನ್ನು ಪ್ರಚೋದಿಸುವುದಾಗಲಿ, ನಡೆಸುವುದಾಗಲಿ, ಭಾಗವಹಿಸುವುದಾಗಲಿ ಶಿಕ್ಷಾರ್ಹ ಅಪರಾಧ. (section 11 (1) (m)(ii) and section 11(1),PCA Act,1960)
- ಪ್ರಾಣಿಗಳ ಮೇಲೆ ಸೌಂದರ್ಯ ವರ್ಧಕಗಳ ಪರೀಕ್ಷೆ ನಿಷಿದ್ಧವಾಗಿದ್ದು, ಆಮದು ಮಾಡಲಾಗುವ ಸೌಂದರ್ಯ ವರ್ಧಕಗಳನ್ನು ಪ್ರಾಣಿಗಳ ಮೇಲೆ ಪರೀಕ್ಷಿಸಲು ನಿರ್ಬಂಧಿಸಲಾಗಿದೆ. (Rules 148-C and 135 B of Drugs and Cosmetic Rules, 1945)
- ಮೃಗಾಲಯದಲ್ಲಿ ಪ್ರಾಣಿಗಳನ್ನು ರೇಗಿಸುವುದು, ಆಹಾರ ನೀಡುವುದು ಮತ್ತು ತೊಂದರೆಪಡಿಸುವುದು ಮತ್ತು ಮೃಗಾಲಯಗವನ್ನು ಮಲೀನಗೊಳಿಸುವುದು ಶಿಕ್ಷಾರ್ಹ ಅಪರಾಧ. (Section 38J, Wildlife (Protection) Act, 1972)
- ಕಾಡು ಪ್ರಾಣಿಗಳನ್ನು ಬಂಧನದಲ್ಲಿಡುವುದು, ಬಲೆ ಹಾಕಿ ಹಿಡಿಯುವುದು, ವಿಷ ಹಾಕುವುದು ಮತ್ತು ಘಾಸಿಗೊಳಿಸುವುದು ಕಾನೂಕು ಪ್ರಕಾರ ಶಿಕ್ಷಾರ್ಹ ಅಪರಾಧ. (Section 9̧ Wildlife (Protection) Act, 1972)
- ಮೈನಾ ಹಕ್ಕಿ, ಬುಲ್‌ಬುಲ್ ಹಕ್ಕಿ, ಗುಬ್ಬಚ್ಚಿ ಸೇರಿದಂತೆ ಎಲ್ಲಾಜಾತಿಯ ಹಕ್ಕಿಗಳನ್ನು ಬಂಧನದಲ್ಲಿಡುವುದು, ಪಂಜರದಲ್ಲಿ ಕೂಡಿ ಹಾಕುವುದು ಮತ್ತು ಅವುಗಳ ಮಾಲೀಕತ್ವ ಪಡೆಯುವುದು ನ್ಯಾಯ ಸಮ್ಮತವಲ್ಲ ಹಾಗೂ ಶಿಕ್ಷಾರ್ಹ ಅಪರಾಧ. ( (Section 9̧ Wildlife (Protection) Act, 1972)
- ಆರಾಮದಾಯಕವಲ್ಲದ ನೋವಿನಿಂದ ಅಥವಾ ಯಾತನಾಮಯವಾದ ಕೋಳಿಗಳ ಸಾಗಾಣಿಕೆ ಶಿಕ್ಷಾರ್ಹ ಮತ್ತು ಕೋಳಿಗಳನ್ನು ಬ್ಯಾಟರಿ ಚಾಲಿತ ಪಂಜರದಲ್ಲಿ ಕೂಡಿ ಹಾಕುವುದು ಸಹ ನಿಯಮಗಳ ಉಲ್ಲಂಘನೆಯಾಗುತ್ತದೆ. (Rules,2001 and Motor Vehicles Act 1978)
ಪ್ರಾಣಿ ಹಿಂಸೆ ಕಂಡು ಬಂದರೆ ದೂರು ದಾಖಲಿಸಲು ಅಥವಾ ಮಾಹಿತಿ ನೀಡಲು ಸಂಪರ್ಕಿಸಬೇಕಾದ ಪಶು ಸಹಾಯವಾಣಿ ಸಂಖ್ಯೆ : 8277100200