Animal Husbandry

ಕೋಳಿ ಸಾಕಾಣಿಕೆಗೆ ಶೇ. 75 ರಷ್ಟು ಸಹಾಯಧನ- ಅರ್ಜಿ ಸಲ್ಲಿಸಲು ಜನವರಿ 31 ಕೊನೆಯ ದಿನ

21 January, 2021 3:43 PM IST By:
poultry

ಕೋಳಿ ಸಾಕಾಣಿಕೆ ಮಾಡಲಿಚ್ಚಿಸುವವರಿಗೆ ಇಲ್ಲಿದೆ ಸಂತಸದ ಸುದ್ದಿ, ಹೌದು ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆ ವತಿಯಿಂದ ಕೋಳಿ ಸಾಕಾಣಿಕೆ ಮಾಡಲಿಚ್ಚಿಸುವವರಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವ ಅರ್ಜಿದಾರರು ಕರ್ನಾಟಕದವರಾಗಿದ್ದು, ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು, ಈ ಯೋಜನೆಯಡಿ ಈ ಹಿಂದೆ ಯಾವುದೇ ಇಲಾಖೆ ಮತ್ತು ನಿಗಮದಿಂದ ಯಾವುದೇ ಯೋಜನೆಯಡಿ ಸೌಲಭ್ಯವನ್ನು ಪಡೆದಿರಬಾರದು, ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವ ಬಗ್ಗೆ ಪ್ರಮಾಣ ಪತ್ರ ನೀಡಬೇಕು,

ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ಹೊಂದಿರಬೇಕು, ಘಟಕವೆಚ್ಚ ರೂ. 5.50 ಲಕ್ಷಗಳಾಗಿದ್ದು, ಶೇ.75%ರಷ್ಟು ಸಹಾಯಧನವನ್ನು ಇಲಾಖಾವತಿಯಿಂದ ನೀಡಲಾಗುವುದು. ಉಳಿದೆ ಶೇ.25% ರಷ್ಟು ಅನುದಾನವನ್ನು ಫಲಾನುಭವಿಯು ಭರಿಸಬೇಕು ಅಥವಾ ಬ್ಯಾಂಕ್‍ಗಳಿಂದ ಪಡೆಯಲು ಬದ್ಧನಾಗಿರಬೇಕು.

ಜನವರಿ 31 ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.  ಹೆಚ್ಚಿನ ಮಾಹಿತಿಗೆ ದೂ:08262–220779 ಸಂಪರ್ಕಿಸಬಹುದು ಅಥವಾ ಆಯಾ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಗೆ ಸಂಪರ್ಕಿಸಬಹುದು.