Animal Husbandry

Snake Farming: ಹಾವು ಸಾಕಣೆ ಮಾಡಿ 100 ಕೋಟಿ ಸಂಪಾದನೆ ಮಾಡುತ್ತಿರುವ ಗ್ರಾಮ! ಎಲ್ಲಿ ಗೊತ್ತಾ?

04 February, 2023 3:35 PM IST By: Ashok Jotawar
Snake farming: earn 100 crores by doing snake farming! Do you know where?

ಹಾವುಗಳೆಂದರೆ ನಾವೆಲ್ಲ ಬೆಚ್ಚಿ ಬೀಳುತ್ತೇವೆ. ಆದರೆ, ಇಲ್ಲೊಂದು ಗ್ರಾಮ ಈ ಹಾವು ಸಾಕಾಣಿಕೆ ಮೂಲಕ 100 ಕೋಟಿ ರೂಪಾಯಿ ಆದಾಯ ಗಳಿಸುತ್ತಿದೆ. ಚೀನಾದ ಒಂದು ಗ್ರಾಮ ಇಂಥ ವಿಷಕಾರಿ ಹಾವಿನಿಂದಲೇ ಭವಿಷ್ಯ ರೂಪಿಸಿಕೊಂಡಿದೆ. ಮಾಹಿತಿಗಾಗಿ ಈ ಲೇಖನ ಓದಿ

ಕರ್ನಾಟಕದಲ್ಲಿ ಕಳೆದ ಐದು ವರ್ಷಗಳಲ್ಲಿ ವಿದ್ಯುತ್‌ ತಂತಿ ತಗುಲಿ 43 ಆನೆಗಳು ಸಾವನ್ನಪ್ಪಿವೆ

ಚೀನಾದ ಗ್ರಾಮವೊಂದು ವಿಷಕಾರಿ ಹಾವುಗಳ ಸಾಕಣೆ ಮಾಡುವ ಮೂಲಕ ಪ್ರಸಿದ್ಧಿ ಪಡೆದುಕೊಂಡಿದೆ. ಈ ಗ್ರಾಮ ವಿಷಕಾರಿ ಹಾವುಗಳ ವಿಷವನ್ನು ಮಾರಾಟ ಮಾಡುವ ಮೂಲಕವೇ ಶ್ರೀಮಂತವಾಗಿದೆ.

ಅಂದಾಜಿನ ಪ್ರಕಾರ, 100 ಕೋಟಿ ರೂಪಾಯಿಗೂ ಹಣವನ್ನು ವಿಷಕಾರಿ ಹಾವುಗಳ ಸಾಕಣೆ ಮೂಲಕ ಸಂಪಾದನೆ ಮಾಡುತ್ತದೆ. ಕೆಲವೆಡೆ ಆಲ್ಕೋಹಾಲ್‌ಗಳಲ್ಲಿ ಸಣ್ಣ ಪ್ರಮಾಣದಲ್ಲಿ ಹಾವಿನ ವಿಷಗಳನ್ನು ಬೆರೆಸಿ ಕುಡಿಯುತ್ತಾರೆ.

ಇವೆಲ್ಲದಕ್ಕೂ ವಿಷ ಪೂರೈಕೆಯಾಗುವುದು ಚೀನಾದ ಯಾಂಗ್‌ ಹೊಂಗ್‌ಚಾಂಗ್‌ ಎನ್ನುವ ವ್ಯಕ್ತಿ ನಿರ್ಮಾಣ ಮಾಡಿರುವ ಹಾವಿನ ಫ್ಯಾಕ್ಟರಿಯಿಂದ.  

ಕೃಷಿ ಭೂಮಿಯಲ್ಲಿ ಹಾವುಗಳ ನಿರ್ವಹಣೆ ಮತ್ತು ಮುಂಜಾಗ್ರತೆ ಕ್ರಮಗಳು

ಅವರ ಉದ್ಯಮ ಎಷ್ಟು ಜನಪ್ರಿಯವಾಗಿದೆ ಎಂದರೆ, ಈ ಗ್ರಾಮದಲ್ಲಿರುವ ಬಹುತೇಕರು ಈಗ ಶ್ರೀಮಂತರಾಗಿದ್ದಾರೆ. ವಿಷಕಾರಿ ಹಾವುಗಳು ಇಲ್ಲಿನ ಜನರ ಅದೃಷ್ಟವನ್ನೇ ಬದಲಿಸಿದ್ದೇ ರೋಚಕ ಕಥೆ.

ತಮ್ಮ ಗ್ರಾಮದಲ್ಲಿ ಹಾವುಗಳ ಸಾಕಣೆಯನ್ನು ಮೊದಲಿಗೆ ಆರಂಭಿಸಿದ್ದೇ ಯಾಂಗ್ಹಾಂಗ್ಚಾಂಗ್‌. ಬಳಿಕ ಇದು ಇಡೀ ಗ್ರಾಮಕ್ಕೆ ವಿಸ್ತರಣೆಯಾಯಿತು. ಇಂದು ಜಿಸಿಚ್ಯಾವ್ಗ್ರಾಮದಲ್ಲಿ ಬೇಕಾದಷ್ಟು ಹಾವಿನ ಸಾಕಣೆ ಫ್ಯಾಕ್ಟರಿ ಸಿಗುತ್ತದೆ.

ಅದಕ್ಕೆ ಮೂಲ ಕಾರಣರಾದವರು ಯಾಂಗ್ಹಾಂಗ್ಚಾಂಗ್‌.  ಇನ್ನು ಯಾಂಗ್‌, ಹಾವಿನ ಸಾಕಣೆ ಆರಂಭಿಸಿದ್ದು ಕೂಡ ಸಾಹಸಗಾಥೆ. 18ನೇ ವರ್ಷದಲ್ಲಿ ಅವರಿಗೆ ಅಪರೂಪದ ಬೆನ್ನಿನ ಸಮಸ್ಯೆ ಕಾಣಿಸಿಕೊಂಡಿತ್ತು.

ವೈದ್ಯರು, ಹಾವು ತಿಂದರೆ ಸರಿಯಾಗುತ್ತದೆ ಎಂದು ಹೇಳಿದ್ದರಂತೆ. ಇದಕ್ಕಾಗಿ ಯಾಂಗ್‌, ಒಮ್ಮೊಮ್ಮೆ ಇಂಥ ಹಾವುಗಳನ್ನು ಮದ್ಯದ ಬಾಟಲಿಯಲ್ಲಿ ಹಾಕಿಕೊಂಡು ಕುಡಿಯುತ್ತಿದ್ದರೆ, ಇನ್ನೂ ಕೆಲವೊಮ್ಮೆ ಅವುಗಳನ್ನು ಸುಟ್ಟು ತಿನ್ನುತ್ತಿದ್ದರು.

ಕೆಲವೊಮ್ಮೆ ಅವುಗಳನ್ನು ಪುರ್ತಿಯಾಗಿ ಸುಟ್ಟು ಪೌಡರ್ಮಾಡಿ ತಿನ್ನುತ್ತಿದ್ದರು.

ಜೆಲ್ಲಿ ಮೀನು : ಅತ್ಯಂತ ಕುತೂಹಲ ಸೃಷ್ಟಿಸಿದ ಈ ಮೀನಿನ ಬಗ್ಗೆ ಇಲ್ಲಿದೆ ಮಾಹಿತಿ…

ಈ ಕಾರಣಕ್ಕೆ ಮಾಡಲಾಗತ್ತೆ ಹಾವು ಸಾಕಾಣಿಕೆ

Snake Farming: ಹಾವಿನ ವಿಷ ಹಾಗೂ ಸಣ್ಣ ಸಣ್ಣ ಮೂಳೆಗಳನ್ನು ಚೀನಾದ ಪ್ರಖ್ಯಾತ ಔಷಧವನ್ನು ತಯಾರಿಸಲು ಬಳಸುತ್ತಾರೆ. ಕಂಟೇನರ್ಗಳಲ್ಲಿ ಹಾವಿನ ಬಾಯಿಯನ್ನು ಇರಿಸಿ ಅದರ ವಿಷವನ್ನು ತೆಗೆಯಲಾಗುತ್ತದೆ.

ಇನ್ನು ಹಾವುಗಳ ಆಹಾರವನ್ನು ಚೀನಿಯರು ಬಹಳವಾಗಿ ಇಷ್ಟಪಡುತ್ತಾರೆ. ಚರ್ಮಗಳು ಸುಕ್ಕಾಗುವುದನ್ನು ತಡೆಯಲು, ಚರ್ಮದ ಆರೈಕೆ ಮಾಡಲು ಸ್ನೇಕ್ಪೌಡರ್‌, ಸ್ನೇಕ್ಕ್ರೀಮ್ಹಾಗೂ ಸ್ನೇಕ್ವೈನ್ಅನ್ನು ಬಳಕೆ ಮಾಡುತ್ತಾರೆ.

ಕಾರ್ಮಿಕರ ಕೊರತೆ ನಿವಾರಣೆಗೆ ರೈತರ ಉಪಾಯ: ಕೀಟನಾಶಕ ಸಿಂಪಡಣೆಗೆ ಯಂತ್ರಗಳ ಬಳಕೆ 

30 ಲಕ್ಷಕ್ಕೂ ಅಧಿಕ ಹಾವುಗಳು:

ಈ ಗ್ರಾಮದಲ್ಲಿ ವರ್ಷಕ್ಕೆ 30 ಲಕ್ಷಕ್ಕೂ ಅಧಿಕ ಹಾವುಗಳು ಜನ್ಮ ತಾಳುತ್ತದೆಯಂತೆ. ಕೋಳಿ ಸಾಕಣೆಯ ರೀತಿಯಲ್ಲಿಯೇ ಹಾವುಗಳ ಮೊಟ್ಟೆಗಳನ್ನು ಬಳಸಿಕೊಂಡು ಹಾವನ್ನು ಬೆಳೆಸುತ್ತಾರೆ.

ಹಾವಿನ ಬಳಿ ಮೊಟ್ಟೆಗಳನ್ನು ಇರಿಸಿದ ಬಳಿಕ ಅವುಗಳು ಅದನ್ನು ತಿನ್ನಬಾರದು ಎನ್ನುವ ಕಾರಣಕ್ಕೆ 15 ದಿನಗಳ ಕಾಲ ಹಾವಿನ ಬಾಯಿಗೆ ಹೊಲಿಗೆ ಹಾಕಲಾಗುತ್ತದೆ. ಬಳಿಕ ಇವುಗಳನ್ನು ಶೇಖರಿಸಿ ಇಡಲಾಗುತ್ತದೆ. ಜೂನ್ಅಂತ್ಯದಿಂದ ಜುಲೈ ಆರಂಭದ ದಿನಗಳಲ್ಲಿ ಈ ಕೆಲಸ ನಡೆಯುತ್ತದೆ.

ಎರಡು ತಿಂಗಳ ಬಳಿಕ ಇವುಗಳಿಂದ ಹಾವಿನ ಮರಿಗಳು ಹೊರಬರುತ್ತವೆ. ಒಂದು ಬ್ಯಾಚ್ನಲ್ಲಿ ಅಂದಾಜು 10 ಸಾವಿರಕ್ಕೂ ಅಧಿಕ ಹಾವುಗಳು ಹೊರ ಬರುತ್ತದೆಯಂತೆ. ಪ್ರತಿ ವರ್ಷ ಅಂದಾಜು 30 ಲಕ್ಷ ಹಾವುಗಳ ಉತ್ಪಾದನೆಯಾಗುತ್ತದೆ.