ಕುರಿ ಸಾಕಾಣಿಕೆ ಮಾಡಲಿಚ್ಚಿಸುವ ರೈತರಿಗಿಲ್ಲದೆ ಸಂತಸದ ಸುದ್ದಿ. ಜಿಲ್ಲಾ ಪಂಚಾಯತಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆ 2021-22ನೇ ಸಾಲಿನಲ್ಲಿ ವಿಸ್ತರಣಾ ಘಟಕಗಳ ಬಲಪಡಿಸುವ ಕಾರ್ಯಕ್ರಮದಡಿಯಲ್ಲಿ ಕುರಿ ಸಾಕಾಣಿಕೆ ಕುರಿತು ತರಬೇತಿ ನೀಡಲಾಗುವುದು.
ಸುಧಾರಿತ ಕುರಿ-ಮೇಕೆ ಸಾಕಾಣಿಕೆ ಕ್ರಮಗಳ ಕುರಿತು ಜುಲೈ 27 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ತರಬೇತಿ ನಡೆಯಲಿದೆ. ಕುರಿ ಸಾಕಾಣಿಕೆ ಕುರಿತು ರಾಷ್ಟ್ರೀಯ ಪಶುಪೋಷಣೆ ಮತ್ತು ಶರೀರ ಕ್ರಿಯಾ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ. ಎನ್.ಕೆ. ಶಿವಕುಮಾರಗೌಡ, ರಾಷ್ಟ್ರೀಯ ಪಶುಪೋಷಣೆ ಮತ್ತು ಶರೀರ ಕ್ರಿಯಾ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ. ಆನಂದನ್ ಹಾಗೂ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಜೆ.ಎಂ. ನಾಗರಾಜ ತರಬೇತಿಯಲ್ಲಿ ಭಾಗವಹಿಸಿ ರೈತರಿಗೆ ಮಾಹಿತಿ ನೀಡಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಡಾ. ಸಿದ್ದಪ್ಪ , ಮುಖ್ಯಪಶುವೈದ್ಯಾಧಿಕಾರಿಗಳು ( ಆಡಳಿತ ) , ನೆಲಮಂಗಲ –9845637387 ಡಾ. ನಾರಾಯಣಸ್ವಾಮಿ , ಮುಖ್ಯಪಶುವೈದ್ಯಾಧಿಕಾರಿಗಳು ( ಆಡಳಿತ ) , ದೇವನಹಳ್ಳಿ –9480910509 ಡಾ || ಆಂಜಿನಪ್ಪ , ಮುಖ್ಯಪಶುವೈದ್ಯಾಧಿಕಾರಿಗಳು ( ಆಡಳಿತ ) , ದೊಡ್ಡಬಳ್ಳಾಪುರ –9632047920 ಡಾ. ಎಂ.ಕೆ , ಮಂಜುನಾಥ್ , ಮುಖ್ಯಪಶುವೈದ್ಯಾಧಿಕಾರಿಗಳು ( ಆಡಳಿತ ) , ಹೊಸಕೋಟೆ –9448988649 ಉಪನಿರ್ದೇಶಕರ ನಂಬರಿಗೆ ಕರೆ ಮಾಡಬಹುದು.
ಕುರಿ ಸಾಕಾಣಿಕೆ ತರಬೇತಿ ಶಿಬಿರಕ್ಕೆ ಚಾಲನೆ
ಕಲಬುರಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿAದ 2021-22 ಸಾಲಿನಲ್ಲಿ 10 ದಿನಗಳ ಕಾಲ ಏರ್ಪಡಿಸಲಾಗಿದ್ದ ಕುರಿ ಸಾಕಾಣಿಕೆ ತರಬೇತಿ ಶಿಬಿರಕ್ಕೆ ಕಲಬುರಗಿಯಲ್ಲಿ ಕಲಬುರಗಿ ಜಿಲ್ಲಾ ಪಂಚಾಯತ್‌ನ ಉಪ ಕಾರ್ಯದರ್ಶಿ ಮಹ್ಮದ್ ಇಸ್ಮಾಯಿಲ್ ಅವರು ಸೋಮವಾರ ಚಾಲನೆ ನೀಡಿದರು.
ಶಿಬಿರಾರ್ಥಿಗಳು ಈ ಸಂಸ್ಥೆಯಲ್ಲಿ ಕುರಿ ಸಾಕಾಣಿಕೆ ತರಬೇತಿ ಪಡೆದು ತರಬೇತಿ ಪಡೆದು ಸ್ವಯಂ ಉದ್ಯೋಗ ಪ್ರಾರಂಭಿಸಲು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಎನ್.ಆರ್.ಎಲ್.ಎಮ್. ಜಿಲ್ಲಾ ವ್ಯವಸ್ಥಾಪಕರಾದ ಲೋಹಿತಕುಮಾರ, ಸಂಸ್ಥೆಯ ನಿರ್ದೇಶಕಿಯರಾದ ಎ.ಪದ್ಮಾ, ಕವಿತಾ ಹಾಗೂ ಸಾವಿತ್ರಿ ಕೊಡೆಕಲ್ ಉಪಸ್ಥಿತರಿದ್ದರು. ಭಾರತಿ ಆವಟೆ ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.