ಇವತ್ತಿನ ದಿನಗಳಲ್ಲಿ ಹೈನುಗಾರಿಕೆಯು ಒಂದು ಉದ್ಯಮವಾಗಿ ಬೆಳೆಯುತ್ತಿದೆ. ಕೃಷಿಯ ಜೊತೆಗೆ ಹೈನುಗಾರಿಕೆಯನ್ನು ಉಪಕಸುಬನ್ನಾಗಿ ಮಾಡುವುದು ರೂಢಿಯಲ್ಲಿದೆ. ಈಗಿನ ಕಾಲದಲ್ಲಿ ಅನೇಕ ಯುವಕರು ಕೃಷಿ ಹಾಗೂ ಹೈನುಗಾರಿಕೆಯು ಕಡೆಗೆ ತಿರುಗುತ್ತಿರುವುದು ಇದರ ಪ್ರಾಮುಖ್ಯತೆಯನ್ನು ತಿಳಿಸುತ್ತದೆ. ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ ಉಪಯೋಗವಾಗುವ ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳೋಣ.
SEXED SEMEN ತಂತ್ರಜ್ಞಾನ
ಇದನ್ನು ಮೊದಲ ಬಾರಿಗೆ ಅಮೆರಿಕದಲ್ಲಿ 2001ರಲ್ಲಿ , SEXING TECHNOLOGIES ಎಂಬ ಕಂಪನಿಯು ವಾಣಿಜ್ಯೀಕರಣಗೊಳಿಸಿತು. ಸಾಮಾನ್ಯವಾಗಿ ಆಕಳಿನ ಗರ್ಭದಾರಣೆ ಮಾಡಲು ಬಳಸುವ ಕಡ್ಡಿಯಲ್ಲಿ X ಮತ್ತು Yಎಂಬ ಎರಡು ವರ್ಣ ತಂತುಗಳು ( ಕ್ರೋಮೋಸೋಮ್)ಗಳು ಇರುತ್ತವೆ.ಆದರೆ ಈ ತಂತ್ರಜ್ಞಾನದಲ್ಲಿ ಒಂದು ವರ್ಣತಂತು (X ಅಥವಾY ) ಹೆಚ್ಚಾಗಿ ‘X’ ಕ್ರೋಮೋಸೋಮ್ ಇರುತ್ತವೆ. ಯಾಕೆಂದರೆ ಹೈನುಗಾರಿಕೆಯಲ್ಲಿ ಹೆಣ್ಣು ಕರುಗಳಿಗೆ ಹೆಚ್ಚಿನಪ್ರಾಮುಖ್ಯತೆ. ‘Y’ ಕ್ರೋಮೋಸೋಮ್ ಇದ್ದರೆ ಗಂಡು ಕರುಹುಟ್ಟುತ್ತವೆ.
ಈ ತಂತ್ರಜ್ಞಾನದಲ್ಲಿ ವಿಜ್ಞಾನಿಗಳು X ಮತ್ತು Yವರ್ಣತಂತುಗಳನ್ನು ಹೊಂದಿದ ವೀರ್ಯಗಳ ನಡುವಿನ ವ್ಯತ್ಯಾಸದ ಮೇಲೆ ಇವುಗಳನ್ನು ವಿಂಗಡಿಸುತ್ತಾರೆ.[ ಪಶುಗಳ X ಕ್ರೋಮೋಸೋಮ್ Y ಕ್ರೋಮೋಸೋಮಗಿಂತಾ 3.8% ರಷ್ಟುಹೆಚ್ಚುಡಿಎನ್ಎ ಹೊಂದಿರುತ್ತದೆ]. ಈ ತಂತ್ರಜ್ಞಾನದಿಂದ ತಯಾರಿಸಿದ ಕಡ್ಡಿಗಳನ್ನು ಸಾಮಾನ್ಯವಾಗಿ ಬಳಸುವ ಕಡ್ಡಿಗಳ ಹಾಗೆ ಬಳಸಬಹುದು, ಆದರೆ ಸಾಮಾನ್ಯವಾಗಿ ಬಳಸುವ ಕಡ್ಡಿಗಳಲ್ಲಿ ವೀರ್ಯದಸಾಂದ್ರತೆ 20 ಮಿಲಿಯನ್/ಡೋಸ್ಇರುತ್ತವೆ . ಆದರೆ SEXED SEMEN ಕಡ್ಡಿಗಳಲ್ಲಿ ಬರಿ 2ಮಿಲಿಯನ್/ಡೋಸ್ಇರುತ್ತದೆ. ಇದರಿಂದ ರಾಸುಗಳಲ್ಲಿ ಗರ್ಭ ಧರಿಸುವ ಸಂಭವನೀಯತೆ (10-15% ) ರಷ್ಟುಕಮ್ಮಿಯಾಗುತ್ತದೆ.
ತಂತ್ರಜ್ಞಾನದ ಉಪಯೋಗಗಳು :
ಈ ವಿಧಾನದಲ್ಲಿ ಹೆಣ್ಣು ಕರುಗಳು ಮಾತ್ರ ಹುಟ್ಟುವುದರಿಂದ,ಗಂಡು ಕರುಗಳ ಸಾಕಾಣಿಕೆಯ ವೆಚ್ಚ ತಗ್ಗಿಸಬಹುದು.
ಮಧ್ಯಮ ಹಾಗೂ ಸಣ್ಣ ವರ್ಗದ ರೈತರಿಗೆ ತಮಗೆ ಹೆಚ್ಚವರಿಯಾದ ಕರುಗಳನ್ನು ಮಾರಲು ಅವಕಾಶವಿರುತ್ತದೆ
ಕರುಗಳು ತಮ್ಮ ಆಕಳು / ಸ್ಥಳದಲ್ಲೆ ಹುಟ್ಟುವುದರಿಂದ, ಹೊರಗಿನಿಂದ ಕರುಗಳನ್ನು ತರುವುದು ತಪ್ಪುತ್ತದೆ.
ತಂತ್ರಜ್ಞಾನದ ಮಿತಿಗಳು :
ಈ ವಿಧಾನವು ತುಂಬಾ ಸೂಕ್ಷ್ಮ ಇರುವುದರಿಂದ,ಆಧುನಿಕ ಯಂತ್ರಗಳ ಉಪಯೋಗ ಮತ್ತು ಅಷ್ಟೇ ಕೌಶಲ್ಯಉಳ್ಳ ಕೆಲಸಗಾರರು ಬೇಕಾಗುತ್ತಾರೆ.
50% ರಷ್ಟು ವೀರ್ಯವನ್ನು ವಿಂಗಡಿಸುವುದರಿಂದ ಅದಕ್ಕೆ ಹಾನಿಯಾಗಿ, ಅದು ಉಪಯೋಗಕ್ಕೆ ಬರುವುದಿಲ್ಲ.
ಸೂಚನೆ: ಅನುಭವಿ ಪಶುವೈದ್ಯರ ಪ್ರಕಾರ ಈ ತಂತ್ರಜ್ಞಾನವುಶೇಕಡ 70ರಷ್ಟು ಯಶಸ್ವಿಯಾಗಿದೆ.ಹಾಗೂ ಈ SEXED SEMEN ಕಡ್ಡಿಯನ್ನು ಮೊದಲ ಬಾರಿಗೆ ಗರ್ಭ ಧರಿಸುತ್ತಿರುವ ಕರುಗಳು ( virgin heifers) ಗಳಲ್ಲಿ ಬಳಸುವುದರಿಂದ ಗರ್ಭ ಧರಿಸುವ ಸಂಭವನೀಯತೆ(conception rare) ಹೆಚ್ಚುತ್ತದೆ, ಮತ್ತೆ ಇದನ್ನು 3ನೇ ಸೂಲದ( 3rd lactation) ರಾಸುಗಳವರೆಗೂ ಬಳಸಬಹುದು.
ಲೇಖಕರು: ಆತ್ಮನಂದ ಹೈಗರ್