ಮೊಲ ಸಾಕುವುದು ಉತ್ತಮ ಉಪ ಕಸಬು. ಸಣ್ಣ ಮತ್ತು ಅತಿ ಸಣ್ಣ ಹಿಡುವಳಿಗಾರರಿಗೆ ಅತಿ ಸೂಕ್ತ. ಮೊಲಗಳನ್ನು ಉಣ್ಣೆ ಮತ್ತು ಚರ್ಮಕ್ಕಾಗಿ ಇಲ್ಲವೇ ಮಾಂಸಕ್ಕಾಗಿ ಸಾಕಾಣಿಕೆ ಮಾಡಬಹುದು. ಉಣ್ಣೆ ಮತ್ತು ಚರ್ಮಕ್ಕಾಗಿ ಜರ್ಮನ್ ಅಂಗೋರಾ, ರಷ್ಯನ್ ಅಂಗೋರಾ, ಫ್ರೆಂಚ್ ಅಂಗೋರಾ, ಬ್ರಿಟಿಷ್ ಅಂಗೋರಾ ಮತ್ತು ಅಲ್ಬಿನೋ ತಳಿಗಳು ಸೂಕ್ತ.
ಪ್ರತಿ ವರ್ಷಕ್ಕೆ ಪ್ರೌಢ ಮೊಲದಿಂದ 400-1000 ಗ್ರಾಂ. ಉಣ್ಣೆ ಪಡೆಯಬಹುದು. ಮಾಂಸಕ್ಕಾಗಿ ಸಾಕುವುದಾದರೆ ನ್ಯೂಜಿಲೆಂಡ್ ವೈಟ್, ರಷ್ಯನ್ ಜೇಂಟ್, ಸೋವಿಯತ್ ಚಿಂಚಲಾ, ಕ್ಯಾಲಿಫೋರ್ನಿಯಾ ವೈಟ್, ಬ್ರಿಟಿಷ್ ಬ್ಲ್ಯಾಕ್, ನ್ಯೂಜಿಲೆಂಡ್ ಬ್ಲ್ಯಾಕ್ ತಳಿಗಳು ಸೂಕ್ತ. ಅವು 12-14 ವಾರದಲ್ಲಿ ಸುಮಾರು ಎರಡು ಕಿಲೋ ದೇಹದ ತೂಕ ಹೊಂದುತ್ತವೆ.
ಉತ್ತಮ ಗುಣಮಟ್ಟದ ರುಚಿಕರ, ಹೆಚ್ಚು ಪೌಷ್ಠಿಕಾಂಶವುಳ್ಳ ಕಡಿಮೆ ಕೊಲೆಸ್ಟ್ರಾಲ್ ಇರುವುದು ಇವುಗಳ ವಿಶೇಷ. ಸ್ಥಳೀಯವಾಗಿ ದೊರಕುವ ಸಾಮಗ್ರಿಗಳನ್ನು ಬಳಸಿ ಮನೆ ಕಟ್ಟಬೇಕು. ಮಳೆ, ಗಾಳಿ, ಬಿಸಿಲು ಮತ್ತು ಶತ್ರುಗಳಿಂದ ಕಾಪಾಡುವ ಎಚ್ಚರಿಕೆ ವಹಿಸಬೇಕು.
ಸ್ಥಳೀಯವಾಗಿ ಸಿಗುವ ಸಾಮಗ್ರಿಗಳಾದ ಹಳೆಯ ತಗಡಿನ ಡಬ್ಬಗಳು, ಮರದ ತುಂಡುಗಳು, ಬಿದಿರು ಕಟ್ಟಿಗೆ, ಜಾಳಿಗೆಯನ್ನು ಬಳಸಿ ಕಟ್ಟಬಹುದು. ಮೇಲ್ಛಾವಣಿಗೆ ಕಲ್ನಾರು ಶೀಟು ಅಥವಾ ತೆಂಗಿನ ಗರಿ ಉಪಯೋಗಿಸಬಹುದು. ಮಣ್ಣಿನ ನೆಲವಾದರೆ ತುಂಬ ಉತ್ತಮ. ಮೂತ್ರವನ್ನು ಸುಲಭವಾಗಿ ಹೀರಿಕೊಳ್ಳುತ್ತದೆ.
ಸಿಮೆಂಟಿನ ನೆಲವಾದರೆ ಇಳಿಜಾರು ಇರಬೇಕು. ಉತ್ತಮ ಒಳಚರಂಡಿ ವ್ಯವಸ್ಥೆ ಇರಬೇಕು. ಇಲ್ಲವಾದರೆ ಅಮೋನಿಯ ಅನಿಲ ಉತ್ಪಾದನೆಯಾಗಿ ಕೆಲಸಗಾರರಿಗೆ ಹಾಗೂ ಮೊಲಗಳಿಗೆ ಉಸಿರಾಟದ ತೊಂದರೆಯಾಗುತ್ತದೆ. ಒಟ್ಟಿನಲ್ಲಿ ನೆಲದಲ್ಲಿ ಹೆಚ್ಚಿನ ತೇವಾಂಶ ಇರಬಾರದು.
ಕ್ರಿಮಿನಾಶಕ ಸಿಂಪಡಿಸಿ ಆಗಿಂದಾಗ್ಗೆ ನೆಲವನ್ನು ಸ್ವಚ್ಛಗೊಳಿಸುತ್ತಾ ಇರಬೇಕು. ತಂಪಾದ ಉಷ್ಣಾಂಶದಲ್ಲಿ ಉಣ್ಣೆಯ ತಳಿಗಳು ಚೆನ್ನಾಗಿ ಇಳುವರಿ ಕೊಡುತ್ತವೆ. 300-340 ಸೆಂಟಿಗ್ರೇಡ್ ಉಷ್ಣಾಂಶ ಮಾಂಸದ ತಳಿಗೆ ಸೂಕ್ತ. ಬೆಳಕು ಹಾಗೂ ಗಾಳಿ ಯಥೇಚ್ಛವಾಗಿ ಇರಬೇಕು.
2 * 2 ಮೀ. ಅಳತೆಯ ಗೂಡಿನಲ್ಲಿ 10 ಮೊಲಗಳನ್ನು ಸಾಕಬಹುದು. ಸ್ಥಳೀಯವಾಗಿ ದೊರಕುವ ಸಸ್ಯ ಮೂಲದ ಆಹಾರ ಪದಾರ್ಥಗಳಾದ ಕುದುರೆ ಮೆಂತೆ, ಗಿನಿ ಹುಲ್ಲು, ಹಸಿರು ಹುಲ್ಲುಗಳು, ಹಸಿರು ಆಹಾರ ಧಾನ್ಯ ಗಿಡಗಳು, ದ್ವಿದಳ ಧಾನ್ಯಗಳು, ಬೇರು ಗಡ್ಡೆಗಳು, ಹಸಿರು ತರಕಾರಿ ಅಲ್ಲದೆ ಇತರೆ ಕಳೆ ಪದಾರ್ಥಗಳನ್ನು ನೀಡಬಹುದು.
ಸುಮಾರು 4ರಿಂದ 5 ಕಿಗ್ರಾಂ ತೂಕವುಳ್ಳ ಮೊಲಕ್ಕೆ ದಿನಕ್ಕೆ ಸುಮಾರು ಒಂದು ಕಿಗ್ರಾಂನಷ್ಟು ಆಹಾರ ಪದಾರ್ಥಗಳನ್ನು ನೀಡಬಹುದು. ಮೊಲಗಳಲ್ಲಿ ತಮ್ಮ ಮಲವನ್ನು ತಾವೇ ತಿನ್ನುವ ಗುಣವಿದೆ, ಮಲದಲ್ಲಿ ಅರ್ಧ ಜೀರ್ಣವಾದ ಆಹಾರವಿದ್ದು, ಅದು ಮೊಲಗಳಿಗೆ ಬಹಳ ಉಪಕಾರಿ. ಅಂದಹಾಗೆ ಪ್ರತಿ ಮೊಲಕ್ಕೆ ನಿತ್ಯ ಸುಮಾರು 60-120 ಮಿ.ಲೀ. ನೀರು ಬೇಕಾಗುತ್ತದೆ.
ಜೈವಿಕ ಗೊಬ್ಬರವನ್ನು ಬೀಜಕ್ಕೆ ಲೇಪನವಾಗಿ ಮತ್ತು ತಿಪ್ಪೆ ಗೊಬ್ಬರದ ಜತೆಗೆ ಮಿಶ್ರ ಮಾಡಿ ಭೂಮಿಗೆ ಬಳಸುವುದು ಸರಿಯಾದ ವಿಧಾನ. ಸಾಮಾನ್ಯವಾಗಿ ಪ್ರತಿ ಎಕರೆಗೆ ಬೀಜೋಪಚಾರಕ್ಕಾಗಿ 200 ಗ್ರಾಂ. ಬೇಕಾಗುತ್ತದೆ. ಭೂಮಿಗೆ ಹಾಕುವುದಕ್ಕಾಗಿ ಎಕರೆಗೆ 1ರಿಂದ 2 ಕಿಗ್ರಾಂ ಸೂಕ್ತ. ಹೆಚ್ಚಿಗೆ ಹಾಕಿದರೂ ತಪ್ಪೇನಿಲ್ಲ.
ಜೈವಿಕ ಗೊಬ್ಬರಗಳಾದ ರೈಜೋಬಿಯಂ ಅನ್ನು ದ್ವಿದಳ ಧಾನ್ಯದ ಬೆಳೆಗೆ, ಅಜಟೋಬ್ಯಾಕ್ಟರನ್ನು ಏಕದಳ ಬೆಳೆಗಳಿಗೆ, ಅಜೋಸ್ಪೇರಿಲಿಯಂನ್ನು ಏಕದಳ ಧಾನ್ಯ ಹಾಗೂ ಕಬ್ಬಿಗೆ ಬಳಸಬಹುದು. ರಂಜಕ ಕರಗಿಸುವ ಜೈವಿಕ ಗೊಬ್ಬರ ಮತ್ತು ಮೈಕೋರೈಝಾ ಜೈವಿಕ ಗೊಬ್ಬರವನ್ನು ಎಲ್ಲಾ ಬೆಳೆಗಳಿಗೂ ಉಪಯೋಗಿಸಬಹುದು
ರಿಯಾಯಿತಿಗಾಗಿ ಜಿಲ್ಲೆಯ ನಬಾರ್ಡ್ ಅಥವಾ ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸುವುದು ಸೂಕ್ತ
ಮೊಲ ಸಾಕುವ ವಿಧಾನ: ನೋಡಿದಾಕ್ಷಣ ಮನಸೆಳೆವ ಮೊಲ ಸಾಕಲು ಬಹಳ ಶ್ರಮ ಪಡಬೇಕಿಲ್ಲ. ಎರಡ್ಮೂರು ತಿಂಗಳಿಗೊಂದು ಬೆಳೆ ತೆಗೆದಂತೆ. ವರ್ಷದಲ್ಲಿ ನಾಲ್ಕೈದು ಬಾರಿ ಆದಾಯ. ಒಂದು ಹೆಣ್ಣು ಮೊಲ ವರ್ಷದಲ್ಲಿ ಕನಿಷ್ಠ 5ರಿಂದ 6 ಬಾರಿ ಮರಿ ಇಡುತ್ತದೆ. ಗರ್ಭದಾರಣೆ ಅವಧಿ 30-35 ದಿನಗಳು.
ಒಂದು ಸಲ ಪ್ರಸವದಲ್ಲಿ ಕನಿಷ್ಠ 5ರಿಂದ 12ರಷ್ಟು ಮರಿಗಳಿರುತ್ತವೆ. ಸರಾಸರಿ 6 ಮರಿಗಳಾದರೂ ಇರುತ್ತವೆ. ಜನಿಸಿದ ನಂತರ 10 ದಿನಗಳವರೆಗೆ ತಾಯಿ ಹಾಲು, ನಂತರ ಹುಲ್ಲು ತಿನ್ನುತ್ತವೆ. ಒಂದು ತಿಂಗಳ ತಾಯಿಯ ಜತೆಯಲ್ಲಿ ಬೆಳೆಸಿ, ನಂತರ ಬೇರ‌್ಪಡಿಸಿ, 2ರಿಂದ 3 ತಿಂಗಳವರೆಗೆ ಪ್ರತ್ಯೇಕ ಯೂನಿಟ್‌ಗಳಲ್ಲಿ ಬಿಡಲಾಗುತ್ತದೆೆ. ಆಗ ಒಂದು ಮೊಲ 3 ರಿಂದ 5ಕೆಜಿ ವರೆಗೆ ತೂಗುತ್ತವೆ. ಸಾಕಾಣಿಕೆ ಮತ್ತು ಉತ್ಪಾದನೆ ಅಭಿವೃದ್ಧಿ, ಮಾರ್ಕೆಟಿಂಗ್ ಮಾಹಿತಿ, ತರಬೇತಿ ಇಲ್ಲವೆ ಸಿಡಿ ಮೂಲಕ ತಿಳಿಯಬಹುದು.
ಆಹಾರ -ಆರೈಕೆ :
ಗರಿಕೆ, ಹುಲ್ಲು, ಪಾಲಕ ಇತರೇ ಅನುಪಯುಕ್ತ ತರಕಾರಿ, ಗಜ್ಜರೆ ತೊಪ್ಪಲು, ಸುಬಾಬುಲಿ,ಚೊಗಚಿ, ನುಗ್ಗೆ ಸೊಪ್ಪು, ಕುದುರೆ ಮೆಂತೆ ಮೊಲಗಳಿಗೆ ಸೂಕ್ತ ಆಹಾರ.
ಸೂಪರ್
ಕುದುರೆ ಮೆಂತೆಯು ರೋಗನಿರೋಧಕವಲ್ಲದೆ ಪೌಷ್ಟಿಕ ಆಹಾರ ಕೂಡ. ಜತೆಗೆ ಗೋದ್ರೆಜ್ ಪ್ಲೇಟ್ ಕಾಂಡಿಯನ್ನು ನೀರಲ್ಲಿ ನೆನೆಸಿ, ಮೆಕ್ಕೆಜೋಳ, ಗೋದಿ ಸೇರಿಸಿದ ನುಚ್ಚಿನೊಂದಿಗೆ ಬೆರೆಸಿ,ಬೆಳಗ್ಗೆ 9ಕ್ಕೆ ಒಂದು ಮೊಲಕ್ಕೆ 50 ಗ್ರಾಂ ನಂತೆ ಕೊಡಲಾಗುತ್ತಿದೆ. 12 ಗಂಟೆಗೆ ಒಂದು ಗ್ಲಾಸ್ ನೀರು, ಮಧ್ಯಾಹ್ನ 2ರ ಹೊತ್ತಿಗೆ 12 ಗ್ರಾಂ ಕುದುರೆ ಮೆಂತೆ ಹುಲ್ಲು, ಸಂಜೆ 8 ಗಂಟೆಗೆ 200 ಗ್ರಾಂ ಹುಲ್ಲು ಇಲ್ಲಿನ ಪ್ರತಿ ಮೊಲಕ್ಕೂ ಕೊಡಲಾಗುತ್ತಿದೆ. ಕಾಯಿಲೆ ಬಂದರೆ ಚುಚ್ಚುಮದ್ದು ಇಲ್ಲವೆ ಮಾತ್ರೆಗಳ ನೀಡಿ ಗುಣಪಡಿಸಲಾಗುತ್ತದೆ.
ಮೊಲ ಸಾಕುವವರಿಗೊಂದಿಷ್ಟು ಮಾತು:ಮಹಿಳೆ,ಯುವಕರು, ರೈತರು, ಎಲ್ಲ ವರ್ಗದ ಜನರೂ ಮೊಲ ಸಾಕಬಹುದು.
ಎಕರೆಯಷ್ಟು ಜಮೀನು, ಲಕ್ಷಾಂತರ ಹಣ ಬೇಕಿಲ್ಲ
ದಿನಕ್ಕೊಂದು ಕೊಡ ನೀರು ಇದ್ದರೂ ಮನೆಯ ಹಿಂದಿನ ಹಿತ್ತಲಿನಲ್ಲಿ ಈ ಕಸುಬು ಮಾಡಬಹುದು.
ಮನೆಯ ಅಂಗಳದಲ್ಲಿ ಒಂದು ಯೂನಿಟ್ (10 ಮೊಲ)ಇದ್ದರೆ ತಿಂಗಳಿಗೆ ಕನಿಷ್ಠ 5-6 ಸಾವಿರ ರೂ.ಲಾಭ.
ಸ್ವಲ್ಪ ನೀರಿದ್ದರೂ ಹುಲ್ಲು ಬೆಳೆದು, 50ಕ್ಕಿಂತ ಹೆಚ್ಚು ಮೊಲ ಸಾಕಿ ದೊಡ್ಡ ಪ್ರಮಾಣದ ಉದ್ದಿಮೆ ಮಾಡಬಹುದು.
ಕಾಸಿಲ್ಲವೆಂದು ಕೊರಗಬೇಕಿಲ್ಲ :
ಒಂದು ಯೂನಿಟ್‌ಗೆ ಒಟ್ಟು 17500 ರೂ. ಖರ್ಚಾಗುವುದು.
ಒಂದು ಯೂನಿಟ್‌ನಲ್ಲಿ 10 ಮೊಲಗಳು (7ಹೆಣ್ಣು+3 ಗಂಡು ) ಒಂದು ಮೆಶ್ ಪಂಜರ (10 ಅಡಿ ಉದ್ದ ಹಾಗೂ 4 ಅಡಿ ಅಗಲದ)
1ಯೂನಿಟ್‌ನಿಂದ ಲಕ್ಷಕ್ಕೂ ಅಧಿಕ ಲಾಭ :
ಒಂದು ಯೂನಿಟ್‌ನಲ್ಲಿ 7 ಹೆಣ್ಣು ಮೊಲಗಳು ( 3 ಗಂಡು ). ಒಂದು ಮೊಲ ಸರಾಸರಿ 6 ಮರಿ ಇಡುತ್ತದೆ. ವರ್ಷದಲ್ಲಿ 6 ಬಾರಿ ಮರಿ ಹಾಕಿದರೆ ಒಂದ ಮೊಲದಿಂದ ಒಟ್ಟು 36 ಮರಿಗಳು. ಹೀಗೆ ಒಂದು ಯೂನಿಟ್‌ನ 7 ಮೊಲಗಳಿಂದ ಒಟ್ಟು 252 ಮರಿಗಳು ದೊರೆಯುತ್ತವೆ.
1ಮೊಲ ಕನಿಷ್ಠ 3ಕೆ.ಜಿ.ತೂಗುತ್ತದೆ.
ಮೊಲದ ಮಾಂಸ 250 ರೂ.ಗೆ 1 ಕೆಜಿ ಮಾರಾಟವಾಗುತ್ತಿದ್ದು, 252 ಮರಿಗಳ (ಒಟ್ಟು 756 ಕೆಜಿ ಮಾಂಸ )ಮಾರಾಟದಿಂದ 1,88,000 ರೂ. ಆದಾಯ ಸಿಗುತ್ತದೆ. ವರ್ಷದಲ್ಲಿ 10 ಮೊಲಗಳಿಗೆ 50 ಸಾವಿರ ರೂ. ಖರ್ಚು ಮಾಡಿದರೂ ನಷ್ಟವಿಲ್ಲ. ಬೆಲೆ ಕಡಿಮೆ ಸಿಕ್ಕರೂ 10 ಮೊಗಳಿಂದ ಕನಿಷ್ಠ ಒಂದು ಲಕ್ಷ ರೂ. ಗಳಿಸಬಹುದು. ಮೊಲ ಸಾಕಲು ನಿರ್ಧರಿಸಿದ್ದರೆ, ನಾಗೇಂದ್ರ ಅವರೇ ಮನೆಯ ಬಾಗಿಲಿಗೆ ಸಾಕಾಣಿಕೆಯ ಸೇವೆ ಕಲ್ಪಿಸಿ, ಜತೆಗೆ ಮೆಡಿಶನ್ ಕಿಟ್,ಇತರೇ ಪರಿಕರಗಳನ್ನು ಒದಗಿಸುತ್ತಾರೆೆ. ಬೇಕಿದ್ದರೆ 10 ವರ್ಷಗಳವರೆಗೆ ಮರಿಗಳ ಖರೀದಿಯ ಕರಾರು ಪತ್ರ ಕೂಡ ಮಾಡಿಕೊಳ್ಳುತ್ತಾರೆ. ** ಮೊ: 9742610398 ಸಂಪರ್ಕಿಸಬಹುದು.
‘ರಾಜ್ಯದ ವಾತಾವರಣವು ಮೊಲ ಸಾಕಾಣಿಕೆಗೆ ಅನುಕೂಲವಾಗಿದೆ.
ಬೆಲೆ ಕುಸಿತ, ರೋಗ ಭಾದೆ ಯಾವುದೇ ಸಮಸ್ಯೆಯಿಲ್ಲದೆ ನಿರಂತರ ಉತ್ಪಾದನಾ ಮೂಲವಿದು. ಸ್ವಂತ ಒಂದೆರಡು ಎಕರೆ ಜಮೀನಿನಲ್ಲಿ ಸ್ವಲ್ಪ ನೀರಿದ್ದರೂ ಸಾಕು. ಸ್ತ್ರೀ ಶಕ್ತಿ ಗುಂಪುಗಳು ಕೂಡ ಈ ಉದ್ಯೋಗ ಮಾಡಬಹುದು. ಕೆಲಸವಿಲ್ಲದ ಯುವಕರು, ಮಹಿಳೆ, ರೈತರು, ಕಾರ್ಮಿಕರು ಎಲ್ಲರೂ ಮೊಲ ಸಾಕಬಹುದು. ಕಬ್ಬು-ಬಾಳೆ ಬೆಳೆದು ಬೆಲೆ ಸಿಗಲಿಲ್ಲವೆಂದು ಕೊರಗದೆ, ಸಾಕಷ್ಟು ಉತ್ಪನ್ನ ತೆಗೆಯಬಹುದು.