2020-21ನೇ ಸಾಲಿನ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮೀನುಗಾರಿಕೆಗೆ ಸಂಬಂಧಿಸಿದ ವಿವಿಧ ಚಟುವಟಿಕೆ ಕೈಗೊಳ್ಳಲು ಅರ್ಜಿ ಸಲ್ಲಿಸುವ ಅವಧಿಯನ್ನು ಜುಲೈ 15ರವರೆಗೆ ವಿಸ್ತರಿಸಲಾಗಿದೆ.
ಪ್ರಧಾನಮಂತ್ರಿ ಮತ್ಸ್ಸ್ಯ ಸಂಪದ ಯೋಜನೆಯಡಿ ಹೊಸದಾಗಿ ಮೀನು ಕೃಷಿ ಕೊಳ ನಿರ್ಮಾಣ ಮಾಡಲು ಇಚ್ಚಿಸುವವರು ಹಾಗೂ ಮೀನುಗಾರಿಕೆಗೆ ಸಂಬಂಧಿಸಿದ ಇತರೆ ಚಟುವಟಿಕೆಗಳಾದ ಆರ್.ಎ.ಎಸ್ ಘಟಕಗಳ ನಿರ್ಮಾಣ, ತಾಜಾ ಮೀನು ಮಾರಾಟ ಕೇಂದ್ರಗಳ ಸ್ಥಾಪನೆ, ಮೀನು ಸಾಗಣೆ ಮತ್ತು ಮಾರಾಟ ವಾಹನಗಳ ಖರೀದಿಗೆ ಸಹಾಯಧನ ಮತ್ತಿತರ ಚಟುವಟಿಕೆಗಳ ಸದುಪಯೋಗ ಪಡೆಯುವುದಕ್ಕಾಗಿ ಅರ್ಜಿ ಸಲ್ಲಿಸುವ ಅವಧಿಯನ್ನು ಜುಲೈ 15ರವರೆಗೆ ವಿಸ್ತರಿಸಲಾಗಿದೆ. ಯೋಜನೆಗಳ ಸಹಾಯಧನ ಪಡೆಯಲು ಆಸಕ್ತ ಒಳನಾಡು ಮೀನುಗಾರರು ಸಂಬಂಧಪಟ್ಟ ತಾಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕ ಕಚೇರಿಗಳಿಗೆ ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು ಎಂದು ಮೀನುಗಾರಿಕೆ ಉಪನಿರ್ದೇಶಕ ಗಣೇಶ ಆರ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಲಮೂಲಗಳು ಇರುವ ಕಡೆಗಳಲ್ಲಿ ಮೀನು ಕೃಷಿ ಪ್ರಮುಖ ಆರ್ಥಿಕ ಬೇಸಾಯವಾಗಿದೆ. ಈ ಉಧ್ಯಮದ ಮೇಲೆ ಈಗಲೂ ಸಹ ಸಾಕಷ್ಟು ಕುಟುಂಬಗಳು ಅವಲಂಬಿಸಿವೆ. ದೊಡ್ಡ ದೊಡ್ಡ ಕೆರೆಗಳಲ್ಲಿ, ಜಲಾಶಯಗಳಲ್ಲಿ ಮೀನುಮರಿಗಳನ್ನು ಬಿಟ್ಟು ವ್ಯಾಪಾರ ಮಾಡುವುದು ಒಂದೆಡೆಯಾದರೆ ಮೀನು ಕೃಷಿ ಕೊಳ ನಿರ್ಮಾಣ ಮಾಡಿ ರೈತರು ಆದಾಯ ಗಳಿಸಿಕೊಳ್ಳಬಹುದು.
2021-22ನೇ ಸಾಲಿನಲ್ಲಿ ಮೀನುಗಾರಿಕೆ ಸಲಕರಣೆ ಕಿಟ್‌ಗಳ ಖರೀದಿ, ಮೀನುಮರಿ ಖರೀದಿಗೆ ಹಾಗೂ ಯೋಜನೆಗಳಿಗೆ ಸಹಾಯಧನ ಪಡೆಯಲು ಆಸಕ್ತ ಒಳನಾಡು ಮೀನುಗಾರರು ಸಂಬಂಧಪಟ್ಟ ತಾಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ ಅರ್ಜಿಗಳನ್ನು ಸಲ್ಲಿಸಬಹುದು