Disease management in poultry: ಕೋಳಿ ಸಾಕಾಣಿಕೆ ಮಾಡಬೇಕು ಎನ್ನುವ ಪ್ರತಿಯೊಬ್ಬರಿಗೂ ಉಪಯುಕ್ತವಾಗುವ ಸೂಕ್ತ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
ಕೆಳಗೆ ತಿಳಿಸಿದಂತೆ ನಿರ್ವಹಣೆಯನ್ನು ಮಾಡಿದರೆ ರೋಗಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ.
- ಶುದ್ಧ ಪಾತ್ರೆಯಲ್ಲಿ ಯಾವಾಗಲೂ ಕೋಳಿಗಳಿಗೆ ಶುದ್ಧ ನೀರನ್ನು ಒದಗಿಸಬೇಕು.
- ಕೋಳಿ ಆಹಾರವನ್ನು ಒಣಗಿದ ಹಾಗೂ ಸ್ವಚ್ಛ ಸ್ಥಳದಲ್ಲಿ ಇಡಬೇಕು.
- ಮೇವಿಣಿಕೆಗಳನ್ನು ಮತ್ತು ನೀರುಣಿಕೆಗಳನ್ನು ಪ್ರತಿದಿನ ಶುದ್ಧ ನೀರಿನಿಂದ ತೊಳೆದು ಒಣಗಿಸಿದ ನಂತರ ಆಹಾರವನ್ನು ನೀಡಬೇಕು.
- ಕೋಳಿ ಮನೆಯನ್ನು ಪ್ರತಿದಿನ ಸ್ವಚ್ಛವಾಗಿ ಇಡಬೇಕು.
- ನೆಲ ಮತ್ತು ಗೋಡೆಯ ಸುತ್ತಮುತ್ತ ಸುಣ್ಣವನ್ನು ಹಾಕಬೇಕು.
- ಯಾವ ಕೋಳಿಗಳು ರೋಗಕ್ಕೆ ತುತ್ತಾಗುವ ಸಾಧ್ಯತೆ ಇದೆ ಅಂತಹ ಕೋಳಿಗಳನ್ನು ಬೇರ್ಪಡಿಸಬೇಕು.
- ಕೋಳಿಗಳ ಜೊತೆಯಲ್ಲಿ ಬೇರೆ ಪ್ರಾಣಿಗಳನ್ನು ಸಾಕಬಾರದು.
- ಜಂತುನಾಶಕ ಔಷಧಿಯನ್ನು ಲಸಿಕೆ ಹಾಕುವ 12 ರಿಂದ15 ದಿನಗಳ ಮುಂಚೆ ನೀಡಬೇಕು.
- ಲಸಿಕೆಯನ್ನು ವೇಳಾ ಪಟ್ಟಿಯಂತೆ ಹಾಕಿಸಬೇಕು.
- ಕೋಳಿಗಳಲ್ಲಿ ಪ್ರಮುಖವಾಗಿ ಕಂಡು ಬರುವ ರೋಗಗಳು ಮತ್ತು ಅವುಗಳ ನಿರ್ವಹಣೆ:
- ಕೋಳಿಗಳಲ್ಲಿ ಬರುವ ಮುಖ್ಯ ರೋಗಗಳೆಂದರೆ, ರಾಣಿಖೇತ, ಸಿಡುಬು ರೋಗ, ಲಿಂಪಾಯ್ಡ್ ಲ್ಯುಕೋಸಿಸ್, ರಕ್ತಬೇಧಿ. ರೋಗ ಬಂದ ಕೋಳಿಗಳು ತೋರುವ ಸಾಮಾನ್ಯ ಲಕ್ಷಣಗಳೆಂದರೆ ಆಹಾರ ತಿನ್ನದೆ ಚುರುಕಾಗಿರದೆ ನಿಧಾನವಾಗಿ ಅಡ್ಡಾಡುವುದು, ತೂಕದಲ್ಲಿ ಇಳಿಕೆ, ತೂಕಡಿಸುವುದು ಮತ್ತು ಮೊಟ್ಟೆ ಉತ್ಪಾದನೆಯಲ್ಲಿ ಕುಸಿತ ಕಂಡುಬರುವದು. ಈ ರೋಗಗಳ ಹತೋಟಿಗೆ ಸಾಕುವ ಮನೆಯ ನೈರ್ಮಲ್ಯತೆಯ ಜೊತೆಗೆ ಸೂಕ್ತ ಕಾಲದಲ್ಲಿ ಲಸಿಕೆಗಳನ್ನು ಹಾಕಬೇಕು.
ಮರೇಕ್ಸ ರೋಗ (ಹರ್ಪಿಸ್ ವೈರಸ್)
ಗಾಳಿಯ ಮೂಲಕ ಹರಡುವ ಈ ರೋಗ ಬಾಧಿತ ಕೋಳಿಗಳಿಂದ ಉಸಿರಾಟದ ತೊಂದರೆ, ಕಾಲಿಗೆ ಲಕ್ವ ಹೊಡೆಯುವುದು, ಪುಕ್ಕಗಳು ಜೋತು ಬಿದ್ದಿರುತ್ತವೆ, ಒಂದು ಕಾಲು ಮುಂದೆ ಇನ್ನೊಂದು ಕಾಲು ಹಿಂದೆ ಇರುವ ಲಕ್ಷಣ ಕಂಡುಬರುತ್ತದೆ, ಕುರುಡುತನ, ಪುಕ್ಕಗಳ ಗ್ರಂಥಿಗಳ ಊತ, ಹಸೀರು ಬಣ್ಣದ ಬೇಧಿ.
ಕಾಯಿಲೆ ಬಂದ ಮೇಲೆ ಚಿಕಿತ್ಸೆ ಮಾಡುವುದು ಕಷ್ಟ. ಎಚ್.ವಿ.ಟಿ ಮರೇಕ್ಸ ಲಸಿಕೆ 0.2 ಮಿ.ಲಿ ಸಿದ್ದಪಡಿಸಿದ ಲಸಿಕೆಯನ್ನು ಕುತ್ತಿಗೆಯ ಹತ್ತಿರ ಚರ್ಮದೊಳಗೆ ಹಾಕಬೇಕು. ಮರಿಗಳಿಗೆ ಹುಟ್ಟಿದ 24 ಗಂಟೆಗಳೊಳಗಾಗಿ ಹಾಕಬೇಕು.
ಕೊಕ್ಕರೆ/ ರಾನಿಖೇತ ಕಾಯಿಲೆ (ಪ್ಯಾರಾಮಿಕ್ಸೋ ವೈರಸ್)
ಈ ರೋಗ ಗಾಳಿಯ ಮೂಲಕ ಕಲುಷಿತ ಆಹಾರ/ನೀರಿನ ಮೂಲಕ ಹರಡುತ್ತದೆ. ಉಸಿರಾಟದ ತೊಂದರೆ, ಕೆಮ್ಮುವುದು, ಮೊಟ್ಟೆ ಉತ್ಪಾದನೆಯಲ್ಲಿ ಕುಂಠಿತವಾಗುವುದು, ಹಸಿರು ಬಣ್ಣದ ಬೇಧಿ, ತಲೆ ಹೊರಳುವುದು ಕಾಯಿಲೆಯ ಲಕ್ಷಣಗಳು.ಕಾಯಿಲೆ ಬಂದ ಮೇಲೆ ಚಿಕಿತ್ಸೆ ಮಾಡುವುದು ಕಷ್ಟ. ಉತ್ತಮ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳುವುದರಿಂದ ರೋಗವನ್ನು ತಡೆಯಬಹುದು. 7-10 ದಿನಗಳಲ್ಲಿ (ಎಫ್1/ಲಾಸೋಟ, 1 ಹನಿ ಕಣ್ಣಿನೊಳಗೆ) 4-5 ನೇ ವಾರಕ್ಕೆ (ಲಾಸೋಟ, ಕುಡಿಯುವ ನೀರಿನಲ್ಲಿ) 10-12 ನೇ ವಾರಕ್ಕೆ (ರಾನಿಖೇತ- ಆರ್2ಬಿ, 0.5 ಮಿ.ಲಿ. ಚರ್ಮದ ಕೆಳಗೆ) ನೀಡಬೇಕು
ಕೋಳಿ ಸಿಡುಬು
(ಪಾಕ್ಸ್ ವೈರಸ್) ಗಾಯಗಳ ಮೂಲಕ ಹರಡುತ್ತದೆ, ಸೊಳ್ಳೆಗಳು ವಾಹಕಗಳಾಗಿರುತ್ತವೆ. ಚರ್ಮ, ಬಾಯಿ ಮತ್ತು ತಲೆಯ ಮೇಲೆ ಗುಳ್ಳೆಗಳು ಸೋಫ್ರಾಮೈಸಿನ್ ಅಥವಾ ಟರ‍್ರಾಮೈಸಿನ ನಂಜುನಿರೋಧಕ ಮುಲಾಮ ಉಪಯೊಗದಿಂದ, 7-8 ನೇ ವಾರಕ್ಕೆ (0.5 ಮಿ.ಲಿ. ಚರ್ಮದ ಕೆಳಗೆ
ಗುಂಬರೋ ರೋಗ
(ಐ.ಬಿ.ಡಿ) ಕಲುಷಿತ ಆಹಾರ/ನೀರಿನ ಮೂಲಕ. ಸೊಳ್ಳೆಗಳು ಮತ್ತು ಜಂತುಗಳು ವಾಹಕಗಳಾಗಿರುತ್ತವೆ. ಬಿಳಿ ನೀರಿನ ಬೇಧಿ, ಹಸಿವಾಗದಿರುವಿಕೆ, ಮಂಕಾಗಿರುವುದು, ಮುದುಡಿದ ಪುಕ್ಕಗಳು, ಮಲವಿಸರ್ಜನೆ ಮಾಡುವಾಗ ವಿಚಿತ್ರ ಕೂಗು. ಈ ಕಾಯಿಲೆಯನ್ನು ಲಸಿಕೆ ಹಾಕಿಸುವುದರಿಂದ ತಡೆಗಟ್ಟಬಹುದು. 14-15 ನೇ ದಿನಕ್ಕೆ (ಐ.ಬಿ.ಡಿ ಲಸಿಕೆ, 1 ಹನಿ ಕಣ್ಣಿನೊಳಗೆ)
ಕೋಳಿ ಟೈಫಾಯ್ಡ್
(ಸಾಲ್ಮೋನೆಲಲ್ಲಾ ಬ್ಯಾಕ್ಟೀರಿಯಾ) ಮೊಟ್ಟೆಗಳ ಮೂಲಕ, ಕಲುಷಿತ ಆಹಾರ/ನೀರಿನ/ ವಸ್ತುಗಳು/ ಮನುಷ್ಯ ಮೂಲಕ, ಇಲಿಗಳ ಮೂಲಕ ಮರಿಗಳಲ್ಲಿ: ರೋಗಬಾಧಿತ ಮರಿಗಳು ಮಂಕಾಗಿ ಅಶಕ್ತವಾಗಿರುತ್ತವೆ, ಗುದದ್ವಾರದ ಬಳಿ ಬಿಳಿ ವಸ್ತು ಅಂಟಿಕೊಂಡಿರುವುದು.