Animal Husbandry

ಸಾಕುಪ್ರಾಣಿಗಳ ಪ್ರಾಣಹಾನಿ ಪರಿಹಾರ 10 ಸಾವಿರದಿಂದ 75 ಸಾವಿರಕ್ಕೆ ಏರಿಕೆ; ಲಿಂಬಾವಳಿ

22 April, 2021 11:18 AM IST By:
animal husbandry

ವನ್ಯಜೀವಿಗಳಿಂದ ಸಾಕು ಪ್ರಾಣಿಗಳ ಹತ್ಯೆ ಆದಲ್ಲಿ ತಕ್ಷಣಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು 20 ಸಾವಿರ ರೂಪಾಯಿಗಳನ್ನು ಬಿಡುಗಡೆ ಮಾಡಲು ಅವಕಾಶ ನೀಡಲಾಗಿದೆ. ಆನಂತರ ಸ್ಥಳೀಯ ಪಶುವೈದ್ಯಾಧಿಕಾರಿಗಳು ಸತ್ತ ಸಾಕುಪ್ರಾಣಿಯ ಪರಿಶೀಲನೆ ನಡೆಸಿ ಪ್ರಮಾಣ ಪತ್ರ ನೀಡಿದ ನಂತರ ಉಳಿದ ಮೊತ್ತ ಪಾವತಿಸಬಹುದಾಗಿದೆ ಎಂದು ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.

ಮಾನವ ವನ್ಯಜೀವಿ ಸಂಘರ್ಷದಿಂದ ಹಸು, ಎಮ್ಮೆ , ಕೋಣ ಮೃತಪಟ್ಟಲ್ಲಿ ಅವುಗಳ ಮಾಲೀಕರಿಗೆ ಈಗ ನೀಡಲಾಗುತ್ತಿರುವ ಪರಿಹಾರ ಹಣವನ್ನು 10 ಸಾವಿರದಿಂದ 75 ಸಾವಿರ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ವನ್ಯ ಜೀವಿಗಳಿಂದ ಸಾಕು ಪ್ರಾಣಿಗಳ ಹತ್ಯೆಯಾದರೆ ತಕ್ಷಣವೇ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು 20 ಸಾವಿರ ರೂಪಾಯಿಯನ್ನು ಬಿಡುಗಡೆ ಮಾಡಲು ಅವಕಾಶ ನೀಡಲಾಗಿದೆ. ನಂತರ ಸ್ಥಳೀಯ ಪಶು ವೈದ್ಯಾಧಿಕಾರಿಗಳು ಸತ್ತ ಸಾಕುಪ್ರಾಣಿಯ ಪರಿಶೀಲನೆ ನಡೆಸಿ ಪ್ರಮಾಣ ಪತ್ರ ನೀಡಿದ ನಂತರ ಉಳಿದ ಮೊತ್ತ ಪಾವತಿಸಬಹುದು ಎಂದು ತಿಳಿಸಿದ್ದಾರೆ.

ಹಸು, ಎಮ್ಮೆ, ಕೋಣ, ವನ್ಯ ಜೀವಿಗಳಿಂದ ಮೃತಪಟ್ಟಲ್ಲಿ ಅವುಗಳ ಮಾಲಿಕನಿಗೆ ಈಗ ನೀಡಲಾಗುತ್ತಿರುವ ಪರಿಹಾರ ಹಣವನ್ನು 10 ಸಾವಿರದಿಂದ 75 ಸಾವಿರ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.   ಕುರಿ, ಮೇಕೆ, ಆಡು ಮೃತಪಟ್ಟಲ್ಲಿ ಈಗ ನೀಡಲಾಗುತ್ತಿರುವ 5 ಸಾವಿರ ಪರಿಹಾರ ಧನವನ್ನು 10 ಸಾವಿರ ರೂಪಾಯಿಗೆ ಹೆಚ್ಚಿಸಲಾಗಿದೆ.

ಈ ಆದೇಶದ ಮೂಲಕ ಜನಪ್ರತಿನಿಧಿಗಳು, ರೈತರು ಮತ್ತು ಸಾರ್ವಜನಿಕರ ಬಹು ದಿನಗಳ ಬೇಡಿಕೆಯನ್ನು ಈಡೇರಿಸಿದಂತಾಗಿದೆ ಎಂದು ಸಚಿವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.