Animal Husbandry

ಪಶುದನ್ ಭೀಮಾ ಯೋಜನೆಯಡಿ ಜಾನುವಾರುಗಳಿಗೆ ವಿಮೆ ಮಾಡಿಸಿ

12 January, 2021 8:04 PM IST By:
cow

ಪಶುದನ್ ಭೀಮಾ ಯೋಜನೆಯಡಿಯಲ್ಲಿ ರೈತರು, ಸಹಕಾರಿ ಸೊಸೈಟಿಗಳು, ಮತ್ತು ಹೈನುಗಾರಿಕೆ  ಮಾಡುವ ರೈತರು ತಮ್ಮ ಜಾನುವಾರುಗಳಿಗೆ ವಿಮೆ ಮಾಡಿಸಬಹುದು. ವಿಮೆ ಮಾಡಿಸುವ ಒಟ್ಟು ಮೊತ್ತವು ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚಾಗಿ 100% ಮಿರಬಾರದು.

 ಜಾನುವಾರು ತಳಿ, ಪ್ರದೇಶಗಳು, ಸ್ಥಳಗಳು,ಯುಗಳ ಅನುಗುಣವಾಗಿ ಮಾರುಕಟ್ಟೆ ಮೌಲ್ಯ ವ್ಯತ್ಯಾಸಗೊಳ್ಳುತ್ತದೆ.

 ಯಾವುದಕ್ಕೆ ವಿಮೆ ನೀಡುತ್ತಾರೆ?

 ಇದರಲ್ಲಿ ನೈಸರ್ಗಿಕ ಅಪಘಾತಗಳು, ಅನಿರೀಕ್ಷಿತ ಸನ್ನಿವೇಶಗಳು ಒಳಗೊಂಡಿರುತ್ತದೆ. ರೋಗದಿಂದ ಜಾನುವಾರುಗಳು ಸಾವನ್ನಪ್ಪುವುದು, ಶಸ್ತ್ರಚಿಕಿತ್ಸೆಗಳು, ಭಯೋತ್ಪಾದಕರ ದಾಳಿಗಳು ಇದರಲ್ಲಿ ಸೇರುತ್ತವೆ.

ಯಾವುದಕ್ಕೆ ವಿಮೆ ನೀಡುವುದಿಲ್ಲ?

 ಇದರಲ್ಲಿ ಭಾಗಶಃ ಅಂಗವಿಕಲತೆ, ಅದು ಶಾಶ್ವತವಾಗಿರಲಿ ಅಥವಾ ತಾತ್ಕಾಲಿಕ ವಾಗಿರಲಿ, ಅವುಗಳಿಗೆ ವಿಮೆ ನೀಡುವುದಿಲ್ಲ. ಈ ವಿಮೆ ಪಾಲಿಸಿ ಉಪಕ್ರಮ ಗೊಂಡ ಹದಿನೈದು ದಿನಗಳಲ್ಲಿ ಜಾನುವಾರುಗಳು ಸಾವನ್ನಪ್ಪಿದರೆ, ವಿಮೆ ನೀಡುವುದಿಲ್ಲ.

 ವಿಮೆ ಮೊತ್ತವನ್ನು ನಿರ್ಧರಿಸುವುದು ಹೇಗೆ?

 ಈ ವಿಮೆ ಪ್ರಸ್ತಾವನೆಯನ್ನು ನ್ಯಾಯಯುತವಾಗಿ ಸ್ವೀಕರಿಸಲು ಪಶುವೈದ್ಯರ ಸಲಹೆ ಪಡೆಯುವುದು ಸೂಕ್ತವಾಗಿದೆ. ಜಾನುವಾರುಗಳ ತಳಿ, ಪ್ರದೇಶ, ಸ್ಥಳಗಳ ಅನುಗುಣವಾಗಿ ವಿಮೆ ನಿರ್ಧರಿಸಲಾಗುತ್ತದೆ. ಮತ್ತು ವಿಮೆ ಮೊತ್ತವು ಮಾರುಕಟ್ಟೆ ಮೌಲ್ಯಕ್ಕಿಂತ ಶೇಕಡಾ 100 ಮೀರಬಾರದು.

ನಷ್ಟ ಪರಿಹಾರ: ಈ ಪ್ರಕರಣದಲ್ಲಿ ರೋಗಕ್ಕೆ ಮುಂಚೆ ವಿಮೆಯ ಮೊತ್ತ ಅಥವಾ ಮಾರುಕಟ್ಟೆ ಮೌಲ್ಯ ಯಾವುದು ಇದರಲ್ಲಿ ಕಡಿಮೆ ಇದೆಯೋ ಅದನ್ನು ಗಣನೆ ಮಾಡಲಾಗುತ್ತದೆ.

 ಪಡೆದುಕೊಳ್ಳುವುದು ಹೇಗೆ?

 ರೈತರು ತಮ್ಮ ಹತ್ತಿರದ ಜಿಲ್ಲೆಯ ಪಶುವೈದ್ಯ ಆಸ್ಪತ್ರೆ ಗೆ ಹೋಗಬೇಕು, ಅಲ್ಲಿ ಜಾನುವಾರುಗಳಿಗೆ ಸಂಬಂಧಿಸಿದ ವಿಮೆಯ ಬಗ್ಗೆ ಮಾಹಿತಿಯನ್ನು     ಪಡೆದುಕೊಳ್ಳಬೇಕು. ನಂತರ ಅವರು ಬಂದು ಜಾನುವಾರುಗಳ ಆರೋಗ್ಯ ತಪಾಸಣೆ ಮಾಡುತ್ತಾರೆ ಮತ್ತು ಅದರ ಸರ್ಟಿಫಿಕೇಟ್ ನೀಡುತ್ತಾರೆ. ನಂತರ ವಿಮೆ ಮಾಡಲಾದ ಜಾನುವಾರಗಳ ಕಿವಿಗೆ (ಇಯಾರ್  ಟ್ಯಾಗ್)ಟ್ಯಾಗ್  ಅಥವಾ ಮೈಕ್ರೋ ಚಿಪ್ಪನ್ನು ಕಿವಿಗೆ ಲಗತ್ತಿಸುತ್ತಾರೆ.

ಮಾಲೀಕರು ಹಾಲು ಕೊಡುವ ಜಾನುವಾರಿನ ಜೊತೆಗೆ ವಿಮೆ ಮಾಡಿರುವ ಜಾನುವಾರಿನ ಫೋಟೋ ತೆಗೆದುಕೊಂಡು ನಂತರ ವಿಮೆ ಪಾಲಿಸಿ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಪ್ರಾದೇಶಿಕ ಪಶು ವೈದ್ಯಕೀಯ ಇಲಾಖೆ ಅಧಿಕಾರಿಗಳನ್ನು ಭೇಟಿ ನೀಡಬೇಕು.

ಲೇಖನ: ಮುತ್ತಣ್ಣ ಬ್ಯಾಗೆಳ್ಳಿ