Animal Husbandry

ರೈತರಿಗೆ ವೈಜ್ಞಾನಿಕ ಹೈನುಗಾರಿಕೆ ತರಬೇತಿ ನೀಡಲು ಅರ್ಜಿ ಆಹ್ವಾನ

05 August, 2021 10:16 PM IST By:

ನಿಗದಿತ ಅರ್ಜಿ ನಮೂನೆಯನ್ನು ಕಲಬುರಗಿಯ ಪಶುವೈದ್ಯಕೀಯ ಪರೀಕ್ಷಕರ ತರಬೇತಿ ಕೇಂದ್ರದಿಂದ ಅಥವಾ  ಆಯಾ ತಾಲೂಕಿನ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆಯಬೇಕು.  ತರಬೇತಿಗೆ ಭಾಗವಹಿಸುವ ರೈತರಿಗೆ ಯಾವುದೇ ಭತ್ಯೆ ಇರುವುದಿಲ್ಲ. ಅರ್ಜಿ ಸಲ್ಲಿಸಲು 2021ರ ಆಗಸ್ಟ್ 13 ಕೊನೆಯ ದಿನವಾಗಿದೆ.

ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು, ಆಧಾರ್ ಕಾರ್ಡ್ ಝೆರಾಕ್ಸ್, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರ ಹಾಗೂ ವಾಟ್ಸ್ ಆಪ್ ಇರುವ ಮೊಬೈಲ್ ಸಂಖ್ಯೆಗಳ ವಿವರದೊಂದಿಗೆ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಪ್ರಥಮ ದರ್ಜೆ ಸಹಾಯಕರಾದ ಸುನೀಲ ಇವರ ಮೊಬೈಲ್ ಸಂಖ್ಯೆ 7676475317ಗೆ ಸಂಪರ್ಕಿಸಲು ಕೋರಲಾಗಿದೆ.

ಮಳೆ ಕಡಿಮೆಯಾಗಿದ್ದರಿಂದ ಹೆಚ್ಚಿನ ರೈತರು ಕೃಷಿಚಟವಟಿಕೆಯಲ್ಲಿ ತೊಡಗಿದ್ದಾರೆ. ರೈತರಿಗೆ ಅನುಕೂಲವಾಗಲೆಂದು ಆನ್ಲೈನ್ ಮೂಲಕ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ. ಆಸಕ್ತ ರೈತರು ಆಯಾ ತಾಲೂಕಿನ ಸಹಾಯಕ ನಿರ್ದೇಶಕರ ಕಚೇರಿಯಿಂದ ಅಱ್ಜಿ ಪಡೆದು ಸಲ್ಲಿಸಬೇಕು.

ರಾಜ್ಯದಲ್ಲಿ ಇತ್ತೀಚೆಗೆ ಯುವಕರು  ಹೆಚ್ಚು ಹೈನುಗಾರಿಕೆಯಲ್ಲಿ ತೊಡಗಿಕೊಳ್ಳುತ್ತಿರುವುದು ಸಂತಸದ ಸಂಗತಿ. ಹೈನುಗಾರಿಕೆಯಲ್ಲಿ ತರಬೇತಿಯಲ್ಲಿ ನೀಡುವ ಸಲಹೆಗಳನ್ನು ಸದುಪಯೋಗ ಪಡೆದುಕೊಂಡು ಯುವಕರು ಕೊನೆಯ ದಿನದವರೆಗೆ ಕಾಯದೆ ಬೇಗನೆ ಅರ್ಜಿ ಸಲ್ಲಿಸಿ ತರಬೇತಿಯ ಲಾಭ ಪಡೆದುಕೊಳ್ಳಬಹುದು.

ನಗರ ಪ್ರದೇಶಗಳಿಗೆ ವಲಸೆ ಹೋಗಿದ್ದ ಗ್ರಾಮಸ್ಥರು ತಮ್ಮೂರಿನಲ್ಲಿ ಹೈನುಗಾರಿಕೆ ಮಾಡಲು ಇಚ್ಚೆಯುಳ್ಳುವರಿಗೆ ಈ ತರಬೇತಿಯು ಅನುಕೂಲವಾಗಲಿದೆ. ಹೈನುಗಾರಿಕೆ ಮಾಡಲು ಆಸಕ್ತಿಯಿರುತ್ತದೆ. ಆದರೆ ತರಬೇತಿಯ ಕೊರತೆಯಿಂದಾಗಿ ರೈತರು ಹೈನುಗಾರಿಕೆ ಮಾಡಲು ಹಿಂಜರಿಯುತ್ತಾರೆ. ಅಂತಹ ರೈತರಿಗೆ ಈ ಉಚಿತ ಆನ್ಲೈನ್ ತರಬೇತಿ ಅನುಕೂಲವಾಗಲಿದೆ.

ಕೃಷಿಯಲ್ಲಿ ಹೈನುಗಾರಿಕೆಯ ಪಾತ್ರ ವಿಶಿಷ್ಟವಾದುದು. ಸನಾತನ ಧರ್ಮದ ಕಾಲದಿಂದಲೂ ಹೈನುಗಾರಿಕೆ ರೈತರ ಪೋಷಣೆ ಮಾಡುತ್ತ ಕೈ ಹಿಡಿದು ನಡೆಸುತ್ತಾ ಸಾಗಿದೆ. ಸಮಯ ಕಳೆದಂತೆ, ಹೈನೋದ್ಯಮ ಹಲವಾರು ಸಮುದಾಯ, ಪ್ರದೇಶ ಮತ್ತು ದೇಶಗಳ ಆರ್ಥಿಕತೆಗೆ ಸಕ್ರಿಯವಾಗಿ ಕೊಡುಗೆ ನೀಡುತ್ತ ಬಂದಿದೆ. ಇತ್ತೀಚೆಗೆ ಹೈನುಗಾರಿಕೆಯಲ್ಲಿ ಯುವಕರ ಆಸಕ್ತಿಯೂ ಹೆಚ್ಚಾಗುತ್ತಿದೆ..ಹೈನುಗಾರಿಕೆಯಲ್ಲಿ ಆಸಕ್ತಿಯಿರುವ ರೈತರಿಗಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.