Animal Husbandry

ರಾಸುಗಳಲ್ಲಿ ಉಣ್ಣೆಗಳ ನಿಯಂತ್ರಣಕ್ಕೆ ಬಂದಿದೆ ಗಿಡಮೂಲಿಕೆಗಳ ಮದ್ದು

23 January, 2021 8:01 AM IST By:
tick control

ಉಣ್ಣೆಗಳು ರಕ್ತಹೀರುವ ಜೀವಿಗಳಾಗಿದ್ದು ಪ್ರಾಣಿಗಳಲ್ಲಿ ಕಂಡುಬರುತ್ತವೆ. ಇವುಗಳು ಪ್ರಾಣಿಗಳಿಂದ ರಕ್ತಹಿರುವುದಲ್ಲದೆ ಮಾರಣಾಂತಿಕ ಕಾಯಿಲೆಗಳಾದ ಥೇಲೇರಿಯಾಸಿಸ್ ಬೇಬಿಯೋಸಿಸ್ ಮುಂತಾದವುಗಳನ್ನು ಹರಡುತ್ತವೆ. ಉಣ್ಣೆಗಳ ಕಡಿತದಿಂದ ರಾಸುಗಳ ಬೆಳವಣಿಗೆ ಕುಂಠಿತವಾಗುವುದಲ್ಲದೆ, ಆಹಾರ ಸೇವನೆಯ ಪ್ರಮಾಣ ಸಹ ಕಡಿಮೆಯಾಗುತ್ತದೆ.

ಅಂದಾಜಿನ ಪ್ರಕಾರ ಒಂದು ಉಣ್ಣೆಯ ಜೀವಿತಾವಧಿ ಪೂರ್ಣಗೊಳ್ಳಲು 30 ಹನಿಗಳಿಂತ ಹೆಚ್ಚುರಕ್ತ ಬೇಕೆನ್ನುತ್ತಾರೆ, ಇದುವೆ ಇವುಗಳ ತೀವ್ರತೆಯನ್ನು ತಿಳಿಸುತ್ತದೆ . ಇವುಗಳನ್ನುನಿಯಂತ್ರಿಸಲು ಹಲವಾರು ವಿಧಾನಗಳಿದ್ದು ಅವುಗಳಲ್ಲಿ ಸಾಮಾನ್ಯವಾಗಿ ರೈತರು ಔಷದ ಕೇಂದ್ರಗಳಲ್ಲಿ ಸಿಗುವ ಉಣ್ಣೆನಾಶಕಗಳನ್ನು ಬಳಸುತ್ತಾರೆ. ಆದರೆ ಇವುಗಳನ್ನು ಬಳಸಿದ ಕೆಲವೇ ದಿನಗಳಲ್ಲಿ ಮತ್ತೆ ಅವು ರಾಸುಗಳಲ್ಲಿ ಕಾಣಸಿಗುವುದರಿಂದ ಹಾಗು ರಾಸಾಯನಿಕ ಔಷಧಗಳ ವೆಚ್ಚವು ಜಾಸ್ತಿ ಮತ್ತು ಪರಿಸರಕ್ಕೆ ಹಾನಿಯಾಗುವುದರಿಂದ ಈ ಪದ್ಧತಿ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ. ಹೀಗಾಗಿ ದೇಶೀಯ ಗಿಡಮೂಲಿಕೆಗಳ ಅನೇಕ ಔಷದೀಯಗುಣ ಮತ್ತು ಅನೇಕ ತರಹದ ಕೀಟಗಳನ್ನು ನಾಶ ಮಾಡುವ ಸಾಮರ್ಥ್ಯ ಹೊಂದಿದ್ದು ಅವುಗಳನ್ನು ಬಳಸಿಕೊಂಡು ಕಡಿಮೆ ವೆಚ್ಚದಲ್ಲಿ ಉಣ್ಣೆಗಳನ್ನು ನಿಯಂತ್ರಿಸಬಹುದು .ಹೀಗಾಗಿ NATIONAL INNOVATION FOUNDATION ಸಂಸ್ಥೆಯು ICAR- NATIONAL DAIRY RESEARCH INSTITUTE, KARNAL ರ ಸಹಯೋಗದೊಂದಿಗೆ ಬೇವು ಮತ್ತು ಬಿಳಿ ನಿಕ್ಕೆಎಂಬ ಸಸ್ಯಗಳನ್ನು ಬಳಸಿ ತಯಾರಿಸಿದ ಔಷಧವನ್ನು ತಯಾರಿಸಿ ಉಣ್ಣೆಗಳಿಂದ ಮುಕ್ತಿ ಪಡೆದಿದ್ದಾರೆ.

ಔಷಧ ತಯಾರಿಸುವ ವಿಧಾನ:

ಸ್ಥಳೀಯವಾಗಿ ಲಭ್ಯವಿರುವ ಬೇವು (Azardichtaindica) ಹಾಗೂ ಬಿಳಿನಿಕ್ಕೆ ( Vitexnegundo) ಬಳಸಿಕೊಂಡು ಇದನ್ನು ತಯಾರಿಸಲಾಗಿದೆ. 2.5 ಕೆಜಿ ಬೇವಿನ ಎಲೆಯನ್ನುನಾಲ್ಕು ಲೀಟರ್ ನೀರಿನಲ್ಲಿ ಕುದಿಸಿ , ಹಾಗೂ 1ಕೆಜಿ  ಬಿಳಿ ನಿಕ್ಕೇ ಗಿಡದ ಎಲೆಗಳನ್ನು 2 ಲೀಟರ ನೀರಿನಲ್ಲಿ ಕುದಿಸಿ ಎರಡನ್ನು 12  ಗಂಟೆಗಳಕಾಲ ಬಿಡಬೇಕು. ನಂತರ ಏರಡು ದ್ರಾವಣಗಳನ್ನು ಪ್ರತ್ಯೇಕವಾಗಿ ಸೋಸಿ ತೆಗೆಯಬೇಕುನಂತರ 300 ml ಸೋಸಿದಬೇವಿನದ್ರಾವಣಮತ್ತು 100 ml ಸೋಸಿದಬಿಳಿನಿಕ್ಕೆದ್ರಾವಣವನ್ನು (3:1) ಅನುಪಾತದಲ್ಲಿ ಮಿಶ್ರಣಮಾಡಬೇಕುಬಂದ 400 ml ದ್ರಾವಣವನ್ನು 3600 ml ನೀರಿನಲ್ಲಿ ಸೇರಿಸಿ ಬಳಸಬೇಕು.

ಔಷದದ ಪರಿಣಾಮ:

ಈ ಒಂದು ಔಷಧವನ್ನು 3 ದಿನಗಳ ಕಾಲ ಹರಿಯಾಣ ರಾಜ್ಯದ 8 ಹಳ್ಳಿಗಳ ರಾಸುಗಳಲ್ಲಿ ಬೆಳಗ್ಗೆ ಮತ್ತು ರಾತ್ರಿಹೊತ್ತು ಉಪಯೋಗಿಸಲಾಯಿತುಉಪಯೋಗದ  ನಂತರ ರಾಸುಗಳ ಕೆಚ್ಚಲು, ಕೊರಳು ಪಟ್ಟಿ, ಕಿವಿ ಮುಂತಾದ ಭಾಗಗಳಲ್ಲಿನ ಉಣ್ಣೆಗಳ ಸಂಖ್ಯೆ ದಾಖಲಿಸಿಕೊಳ್ಳಲಾಯಿತು, ಇದರ ಪ್ರಕಾರ ಬಳಸಿದ 48 ಗಂಟೆಗಳ ಒಳಗೆ ಉಣ್ಣೆಗಳ ಪ್ರಮಾಣ ಕಡಿಮೆಯಾಗಿದ್ದು, ಬಳಸಿದ ನಂತರ 45 ದಿನಗಳವರೆಗೂ ಯಾವುದೇ ಉಣ್ಣೆ ಭಾದೆಯು ಕಂಡುಬಂದಿಲ್ಲ.

ಸಾಮಾನ್ಯವಾಗಿ ಬಳಸುವ ವಿಧಾನದಲ್ಲಿ (ಉಣ್ಣೆನಾಶಕ) 40-45 ದಿನಗಳಲ್ಲಿ ಮತ್ತೇ ಕಾಣಿಸಿಕೊಳ್ಳುವುದು ಹಾಗೂ ಅದಕ್ಕೆ ಮತ್ತೆ ಔಷಧದ ಖರ್ಚು ಹಾಗೂ ವೈದ್ಯರ ವೆಚ್ಚ ಸೇರಿದಂತೆ ಒಟ್ಟು 1440  ಪ್ರತೀ ವರ್ಷಕ್ಕೆಇದ್ದು , ಈಒಂದು ಹೊಸ ಮತ್ತು ನೈಸರ್ಗಿಕ ವಿಧಾನದಿಂದ ಬರೀ 240  ಪ್ರತೀ ವರ್ಷಕ್ಕೆಎಂದು ತಿಳಿದು ಬಂದಿದ್ದು ಇದರಿಂದ ತುಂಬಾ ರೈತರಿಗೆ ಪ್ರಯೋಜನವಾಗಲಿದೆ. ಹೆಚ್ಚಿನಮಾಹಿತಿಗಾಗಿ ಭೇಟಿ ನೀಡಿ : https://icar.org.in/node/15152 ಸಂಪರ್ಕಿಸಬಹುದು.

ಲೇಖನ: ಆತ್ಮಾನಂದ ಹೈಗರ್