Animal Husbandry

ರೈತರಿಗೆ ಭರ್ಜರಿ ಲಾಭ ನೀಡುವ ಮುರ್ರಾ ಎಮ್ಮೆ.. ಸರ್ಕಾರದಿಂದಲೂ ಬಂಪರ್‌ ಸಬ್ಸಿಡಿ ಲಭ್ಯ

02 January, 2023 10:53 AM IST By: Maltesh
Murrah buffalo which gives huge benefits to the farmers.. Bumper subsidy

ಭಾರತದ ಹೆಚ್ಚಿನ ರೈತರು ಹೆಚ್ಚುವರಿ ಆದಾಯಕ್ಕಾಗಿ ಕೃಷಿಯೊಂದಿಗೆ ಹಸು ಮತ್ತು ಎಮ್ಮೆ ಸಾಕಾಣಿಕೆಯನ್ನು ಮಾಡುತ್ತಾರೆ. ಈ ಮೂಲಕ ಅವರಿಗೆ ಉತ್ತಮ ಪ್ರಮಾಣದ ಹಾಲು ಸಿಗುತ್ತದೆ, ಮತ್ತು ಅದನ್ನು ಮಾರಾಟ ಮಾಡುವ ಮೂಲಕ ಅವರು ಹೆಚ್ಚುವರಿ ಆದಾಯವನ್ನು ಗಳಿಸುತ್ತಾರೆ.  

ಹಸು ಮತ್ತು ಎಮ್ಮೆಗಳ ಅನೇಕ ಜಾತಿಗಳು ಭಾರತದಲ್ಲಿ ಕಂಡುಬರುತ್ತವೆ. ಇವುಗಳಲ್ಲಿ ಗಿರ್ ತಳಿಯ ಹಸು ಮತ್ತು ಮುರ್ರಾ ತಳಿಯ ಎಮ್ಮೆ ಹಾಲು ಉತ್ಪಾದನೆಗೆ ಹೆಸರುವಾಸಿಯಾಗಿದೆ.

ಈ ಲೇಖನದಲ್ಲಿ ನಾವು ಹೈನುಗಾರಿಕೆಗೆ ಪ್ರಸಿದ್ಧವಾದ ಮುರ್ರಾ ಎಮ್ಮೆಯ ಬಗ್ಗೆ ತಿಳಿದುಕೊಳ್ಳೋಣ.. ಭಾರತದ ಹೆಚ್ಚಿನ ಪ್ರದೇಶಗಳಲ್ಲಿ, ಹೈನುಗಾರಿಕೆಯನ್ನು ಕೈಗೊಂಡವರು ಮುರ್ರಾ ಎಮ್ಮೆಯನ್ನೆ ಸಾಕುತ್ತಾರೆ. ಅದರ ಹಾಲನ್ನು ಮಾರಾಟ ಮಾಡುವ ಮೂಲಕ ಉತ್ತಮ ಆದಾಯವನ್ನು ಗಳಿಸುತ್ತಿದ್ದಾರೆ.

ವಾಯುಭಾರ ಕುಸಿತ: ರಾಜ್ಯದ ಈ ಭಾಗಗಳಲ್ಲಿ 2 ದಿನ ತುಂತುರು ಮಳೆ

ಮುರ್ರಾ ಎಮ್ಮೆ

ಮುರ್ರಾ ಎಮ್ಮೆಯ ಹಾಲಿನಲ್ಲಿ ಶೇಕಡಾ 7 ರಷ್ಟು ಕೊಬ್ಬಿನಂಶವಿದೆ. ಮುರ್ರಾ ಎಮ್ಮೆಗೆ ತ್ವರಿತವಾಗಿ ಜೀರ್ಣವಾಗುವ ವಸ್ತುಗಳು ಮತ್ತು ದ್ವಿದಳ ಧಾನ್ಯಗಳನ್ನು ಮೇವಿನ ರೂಪದಲ್ಲಿ ನೀಡಲಾಗುತ್ತದೆ. ಆದಾಗ್ಯೂ, ಉತ್ತಮ ಹಾಲು ಉತ್ಪಾದನೆಗೆ, ಜೋಳ, ಗೋಧಿ, ಬಾರ್ಲಿ, ಮತ್ತು ರಾಗಿ ಧಾನ್ಯಗಳು ಮತ್ತು ಎಣ್ಣೆ ಬೀಜಗಳನ್ನು ನೀಡಲಾಗುತ್ತದೆ. ಮುರ್ರಾ ತಳಿಯ ಎಮ್ಮೆಗಳನ್ನು ಸ್ವಚ್ಛತೆಯಿಂದ ಕಾಪಾಡಬೇಕು. ಈ ತಳಿಯು ದಿನಕ್ಕೆ 12-16 ಲೀಟರ್ ಹಾಲು ನೀಡುತ್ತದೆ.

ಈ ಎಮ್ಮೆ ದಿನಕ್ಕೆ 12-16 ಲೀಟರ್ ಹಾಲು ನೀಡುತ್ತದೆ. ಅದಕ್ಕಾಗಿಯೇ ಅದರ ಪೋಷಣೆಯನ್ನು ಗಮನದಲ್ಲಿಟ್ಟುಕೊಂಡು, ಅದಕ್ಕೆ ಸಮತೋಲಿತ ಆಹಾರವನ್ನು ನೀಡುವುದು ಬಹಳ ಮುಖ್ಯ. ಎಮ್ಮೆ ಯಾವುದೇ ತಳಿಯಾಗಿರಲಿ, ಅದನ್ನು ಉತ್ತಮವಾಗಿ ಆರೈಕೆ ಮಾಡಿದರೆ ಜಾನುವಾರು ಸಾಕುವವರು ಹೆಚ್ಚು ಲಾಭ ಪಡೆಯಲು ಸಾಧ್ಯವಾಗುತ್ತದೆ.

ಇತರ ಪ್ರಾಣಿಗಳಂತೆ, ಮುರ್ರಾ ಎಮ್ಮೆಗೆ ಸಹ ವಾಸಿಸಲು ಆರಾಮದಾಯಕ ಆವರಣದ ಅಗತ್ಯವಿದೆ. ಇದರಿಂದ ಎಮ್ಮೆ ಚಳಿ, ಶಾಖ ಮತ್ತು ಮಳೆಯ ಪರಿಣಾಮಗಳಿಂದ ರಕ್ಷಿಸಲ್ಪಡುತ್ತದೆ.

ರಿಲಯನ್ಸ್‌ ಫೌಂಡೇಶನ್‌ ಸ್ಕಾಲರ್‌ಶಿಪ್‌..ಪದವಿ ಓದುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ಆವರಣದಲ್ಲಿ ಸ್ವಚ್ಛತೆ ಕಾಪಾಡುವುದು ಬಹಳ ಮುಖ್ಯ. ಸೊಳ್ಳೆಗಳು ಉಲ್ಬಣವಾದಾಗ ಆವರಣದಲ್ಲಿ ಸೊಳ್ಳೆ ಪರದೆಗಳನ್ನು ಸಹ ಅಳವಡಿಸಬಹುದು.

ಉತ್ತಮ ಆರೋಗ್ಯ ಹೊಂದಿರುವ ಎಮ್ಮೆ ನಿಮಗೆ ಉತ್ತಮ ಹಾಲು ಉತ್ಪಾದನೆಯನ್ನು ನೀಡುತ್ತದೆ. ಆದರೆ ಮಳೆಗಾಲದಲ್ಲಿ ಜಾನುವಾರುಗಳಿಗೆ ಕಾಲುಬಾಯಿ, ಗಂಟಲು ರೋಗಗಳು ಬರುವ ಸಾಧ್ಯತೆ ಹೆಚ್ಚಿರುವುದರಿಂದ ಅವುಗಳನ್ನು ತಡೆಯಲು ಕಾಲಕಾಲಕ್ಕೆ ಲಸಿಕೆ ಹಾಕಿಸಿಕೊಂಡು ಹೊಟ್ಟೆ ಹುಳುಗಳಿಗೆ ಔಷಧ ನೀಡುತ್ತಲೇ ಇರಬೇಕು..

ಮುರ್ರಾ ತಳಿಯ ಎಮ್ಮೆಯ ಬೆಲೆ 1 ಲಕ್ಷ ರೂಪಾಯಿಗೂ ಹೆಚ್ಚು. ಅನೇಕ ರೈತರು ಮತ್ತು ಹೈನುಗಾರಿಕೆಯಲ್ಲಿ ನಿರತರಾದವರು ಈ ಎಮ್ಮೆಗಳನ್ನು ಖರೀದಿಸುವ ಮೂಲಕ ಹೈನುಗಾರಿಕೆಯನ್ನು ಪ್ರಾರಂಭಿಸಬಹುದು. ಮುರ್ರಾ ಎಮ್ಮೆ ಖರೀದಿಗೆ ಹಲವು ರಾಜ್ಯ ಸರ್ಕಾರಗಳು ಆರ್ಥಿಕ ಅನುದಾನವನ್ನೂ ನೀಡುತ್ತಿವೆ.

ಸಬ್ಸಿಡಿ ಜಾರಿಯಾದ ನಂತರ ಮುರ್ರಾ ಎಮ್ಮೆಯನ್ನು 50,000 ರೂ.ಗೆ ಖರೀದಿಸಬಹುದು. ಭಾರತ ಸರ್ಕಾರವು ರಾಷ್ಟ್ರೀಯ ಗೋಕುಲ್ ಮಿಷನ್ ಮತ್ತು ಪಶು ಕಿಸಾನ್ ಕ್ರೆಡಿಟ್ ಕಾರ್ಡ್‌ನಲ್ಲಿ ಪ್ರಾಣಿಗಳನ್ನು ಖರೀದಿಸಲು ಸಹಾಯಧನವನ್ನು ನೀಡುತ್ತಿದೆ.

ಇದರ ಜೊತೆ ಮುಖ್ಯಮಂತ್ರಿ ಅಮೃತ ಜೀವನ ಯೋಜನೆ (Chief Minister Amrut Jeevan Scheme) ಅಡಿಯಲ್ಲಿ, ರಾಜ್ಯ ಸರ್ಕಾರದ ವತಿಯಿಂದ ಸುಧಾರಿತ ತಳಿಯ ಅಥವಾ ಮಿಶ್ರತಳಿಯ ಹಸು – ಎಮ್ಮೆಗಳನ್ನು ಕೊಳ್ಳಲು ರೈತರಿಗೆ ನೀಡಲಿದೆ 20 ಸಾವಿರ ಸಬ್ಸಿಡಿ ನೀಡಲಾಗುತ್ತದೆ. ರಾಜ್ಯದಲ್ಲಿ ಪಶುಪಾಲನೆ, ಹೈನುಗಾರಿಕೆ, ಕ್ಷೀರೋದ್ಯಮವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಅಮೃತ ಜೀವನ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಈ ಯೋಜನೆಯಡಿ ರೈತರಿಗೆ ಹಸು ಅಥವಾ ಎಮ್ಮೆಗಳನ್ನು ಖರೀದಿಸಲು ಇಪ್ಪತ್ತು ಸಾವಿರ ರೂಪಾಯಿಯ ಸಬ್ಸಿಡಿ ದೊರೆಯಲಿದೆ.