Animal Husbandry

ವಿಜಯಪುರ- ಬಾಗಲಕೋಟೆ, ತುಮಕೂರ ಜಿಲ್ಲೆಯ ರೈತರಿಗೆ ಗುಡ್‌ನ್ಯೂಸ್‌: ಎಮ್ಮೆ, ದನದ ಹಾಲಿಗೆ 2 ರೂ. ಹೆಚ್ಚಳ!

31 January, 2021 10:03 AM IST By: KJ Staff
Milk price hike

ಹಾಲು ಉತ್ಪಾದಿಸುವ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ರೈತರಿಗೆ ಸಂತಸದ ಸುದ್ದಿ. ಈ ಎರಡು  ಜಿಲ್ಲೆಗಳ ಹಾಲು ಉತ್ಪಾದಕರು ಸಂಕಷ್ಟದಲ್ಲಿರುವುದರಿಂದ ಅವರಿಗೆ ನೆರವಾಗಿ ಹೈನುಗಾರಿಕೆ ಪ್ರೋತ್ಸಾಹಿಸಲು ಫೆ.1ರಿಂದ ಜಾರಿಗೆ ಬರುವಂತೆ ಎಮ್ಮೆ ಹಾಲಿಗೆ ಹಾಗೂ ಹಸುವಿನ ಹಾಲಿಗೆ ಪ್ರತಿ ಲೀಟರ್‌ಗೆ 2.ರೂ. ದರ ಹೆಚ್ಚಿಸಲು ವಿಜಯಪರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಒಕ್ಕೂಟ ನಿರ್ಧರಿಸಿದೆ.

ಹೌದು, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಹಾಲು ಉತ್ಪಾದಕರಿಗೆ ನೆರವಾಗಲು ಹಾಗೂ ಹೈನುಗಾರಿಕೆ ಪ್ರೋತ್ಸಾಹಿಸುವ ಸಲುವಾಗಿ ಎಮ್ಮೆ ಮತ್ತು ಆಕಳ ಹಾಲಿಗೆ ತಲಾ 2 ಖರೀದಿ ದರ ಹೆಚ್ಚಳ ಮಾಡಿದೆ.

ನಗರ ಹೊರವಲಯದ ಭೂತನಾಳ ಬಳಿಯ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಕಚೇರಿಯಲ್ಲಿ ಈಚೆಗೆ ನಡೆದ ಒಕ್ಕೂಟದ 19ನೇ ಆಡಳಿತ ಮಂಡಳಿ ಸಭೆಯಲ್ಲಿ ಫೆ.1 ರಿಂದ ಜಾರಿಗೆ ಬರುವಂತೆ ಎಮ್ಮೆ ಮತ್ತು ಆಕಳ ಹಾಲಿಗೆ ಪ್ರತಿ ಲೀಟರ್‌ಗೆ 2 ದಂತೆ ದರ ಹೆಚ್ಚಳ ಮಾಡಿದೆ. ಶೇ 6 ಪ್ಯಾಟ್ ಮತ್ತು ಶೇ 9 ಎಸ್.ಎನ್.ಎಫ್‍ ಹೊಂದಿರುವ ಎಮ್ಮೆ ಹಾಲಿನ ಖರೀದಿ ದರವನ್ನು ಕನಿಷ್ಠ 37 ನಿಗದಿಪಡಿಸಲಾಗಿದೆ. ಶೇ 3.5 ಪ್ಯಾಟ್ ಮತ್ತು ಶೇ 8.5 ಎಸ್.ಎನ್.ಎಫ್‍ ಇರುವ ಆಕಳ ಹಾಲಿಗೆ ಕನಿಷ್ಠ 24 ದಂತೆ ದರ ನಿಗದಿಪಡಿಸಲಾಗಿದೆ.

ಸಂಘಗಳಲ್ಲಿ ಈ ಬಗ್ಗೆ ಹೆಚ್ಚಿನ ಪ್ರಚಾರ ನಡೆಸಿ, ಡಂಗುರ ಹಾಕಿ ಗುಣಮಟ್ಟದ ಹಾಲು ಶೇಖರಿಸಲು ಸಹಕರಿಸಬೇಕು ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಸಂಜೀವ್ ದಿಕ್ಷೀತ್ ತಿಳಿಸಿದ್ದಾರೆ.

 ಬೇಸಿಗೆ ಆರಂಭವಾಗುತ್ತಿದ್ದು, ಜಾನುವಾರುಗಳ ಆರೋಗ್ಯ ರಕ್ಷಣೆ, ಹಾಗೂ ಹಸಿರು ಮೇವಿನ ಕೊರತೆ ನೀಗಿಸಲು ಉತ್ಪಾದಕರ ಸಂಕಷ್ಟವನ್ನು ಅರಿತು ಶೇಖರಣೆ ದರ ಹೆಚ್ಚಳ ಮಾಡಲು ಉದ್ದೇಶಿಸಲಾಗಿದೆ ಎಂದು  ಒಕ್ಕೂಟದ ಅಧ್ಯಕ್ಷ ಸಂಭಾಜಿ ಮಿಸಾಳೆ  ತಿಳಿಸಿದ್ದಾರೆ. 

ಹಾಲು ಖರೀದಿ ದರ  2 ಹೆಚ್ಚಳ

ತುಮಕೂರು ಜಿಲ್ಲೆಯಲ್ಲಿ ರೈತ ರಿಂದ ಖರೀದಿಸುವ ಹಾಲಿನ ದರವನ್ನು ಲೀಟರ್‌ಗೆ  2 ಹೆಚ್ಚಳ ಮಾಡಿದ್ದು, ಫೆ. 1ರಿಂದ ಜಾರಿಗೆ ಬರಲಿದೆ ಎಂದು ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ತುಮುಲ್)  ಅಧ್ಯಕ್ಷ ಸಿ.ವಿ.ಮಹಲಿಂಗಯ್ಯ ತಿಳಿಸಿದ್ದಾರೆ..3.5 ಜಿಡ್ಡಿನಾಂಶ ಇರುವ ಹಾಲಿಗೆ ಲೀಟರ್‌ಗೆ 25 ರೂಪಾಯಿ ಹಾಗೂ 4.1 ಜಿಡ್ಡಿನಾಂಶದ ಹಾಲಿಗೆ 26.28ರೂಪಾಯಿಯಂತೆ ಖರೀದಿ ಮಾಡಲಾಗುವುದು. ಇದರಿಂದ ಪ್ರತಿ ದಿನ 14.60 ಲಕ್ಷ, ತಿಂಗಳಿಗೆ 4.80 ಕೋಟಿ ಹೆಚ್ಚುವರಿ ಖರ್ಚು ಬರಲಿದೆ. ಮಂಡ್ಯ, ಮೈಸೂರು, ಹಾಸನ ಒಕ್ಕೂಟಗಳಿಗಿಂತ ಹೆಚ್ಚು ಬೆಲೆ ನೀಡಿದಂತಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.