Animal Husbandry

ಒಂದು ಕುರಿಗೆ 70 ಲಕ್ಷದ ಆಫರ್ ಬಂದರೂ ಕುರಿ ಮಾರಲು ನಿರಾಕರಿಸಿದ್ದಾನೆ ಮಾಲಿಕ, ಅದ್ಯಾವ ಕುರಿ ಅಂದುಕೊಂಡಿದ್ದೀರಾ. ಇಲ್ಲಿದೆ ಮಾಹಿತಿ.

14 December, 2020 1:43 PM IST By:

ಒಂದು ಕುರಿಗೆ ಅಬ್ಬಬ್ಬಾ ಅಂದರೂ 25 ರಿಂದ 30 ಸಾವಿರ ರೂಪಾಯಿಗೆ ಖರೀದಿ ಮಾಡಬಹುದು. ಅದಕ್ಕಿಂತ ಹೆಚ್ಚು ಕುರಿ, ಮೇಕೆ ಬೆಲೆ ಇರುವುದಿಲ್ಲ. ಆದರೆ ಇಲ್ಲೊಂದು ಕುರಿಗೆ 70 ಲಕ್ಷ ರೂಪಾಯಿ ಕೇಳಿದರೂ ಮಾರಾಟ ಮಾಡಿಲ್ಲ.

ಹೌದು ಇದು ಸತ್ಯ. ವಿಭಿನ್ನ ನೋಟ ಹಾಗೂ ಉತ್ಕೃಷ್ಟ ಗುಣಮಟ್ಟದ ಮಾಂಸಕ್ಕೆ ಹೆಸರಾಗಿರುವ ಮದ್ ಗ್ಯಾಲ್ ತಳಿಯ ಕುರಿಗೆ ಬರೋಬ್ಬರಿ 70 ಲಕ್ಷದ ಆಫರ್ ಬಂದರೂ ಸಹ ಕುರಿ ಮಾಲಿಕ ಕುರಿಯನ್ನು ಮಾರಾಟ ಮಾಡಲು ನಿರಾಕರಿಸಿದ್ದಾರೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆ ಕುರಿ ಮಾಲಿಕ ಬಾಬು ಮೆಟ್ಯಾರಿ..

ಇದಕ್ಕೆ ಕುರಿ ಮಾಲಿಕ ಬೆಲೆ ಹೇಳಿದ್ದೇಷ್ಟು ಗೊತ್ತೇ. ಬರೋಬ್ಬರಿ 1.5 ಕೋಟಿ ರುಪಾಯಿ ಕೊಟ್ಟರೆ ಮಾತ್ರ ಮಾರುತ್ತೇನೆಂದು ಹೇಳಿದ್ದಾರೆ.  

ಇದನ್ನೂ ಓದಿ: ಕುರಿ, ಕೋಳಿ, ಹಸು ಸಾಕಾಣಿಕೆ ಮಾಡುವವರಿಗೆ ಸಂತಸದ ಸುದ್ದಿ- Onlineನಲ್ಲಿ ಅರ್ಜಿ ಸಲ್ಲಿಸಿ ಶೇ. 50 ರಷ್ಟು ಸಹಾಯಧನ ಪಡೆಯಿರಿ

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಹೆಚ್ಚಾಗಿ ಈ ಮದ್ ಗ್ಯಾಲ್ ತಳಿ ಕಂಡುಬರುತ್ತದೆ. ಎತ್ತರಕ್ಕಿದ್ದು, ಇನ್ನಿತರ ತಳಿಗಳಿಗಿಂತ ಬೇಗ ಬೆಳವಣಿಗೆ ಹೊಂದುವುದು ಇದರ ವೈಶಿಷ್ಟ್ಯ. ಮದ್ ಗ್ಯಾಲ್ ಕುರಿಯ ಮಾಂಸ ವಿಶೇಷವಾದ ರುಚಿಯನ್ನು ಹೊಂದಿದೆಯಂತೆ. ಹೀಗಾಗಿ ಈ ಕುರಿಯ ಮಾಂಸಕ್ಕೆ ಭಾರೀ ಬೇಡಿಕೆ ಇದೆ. ಸಾಂಗ್ಲಿಯ ಮದ್ ಗ್ಯಾಲ್ ಹಳ್ಳಿಯಲ್ಲಿ ಹೆಚ್ಚಾಗಿ ಈ ತಳಿಯಿರುವುದರಿಂದ ಈ ಕುರಿ ತಳಿಗೆ ಇದೇ ಹೆಸರು ಬಂದಿದೆ.

ಸಾಂಗ್ಲಿಯ ಅಟ್ಪಾಡಿ ಎಂಬಲ್ಲಿ ಬಾಬು ಮೆಟ್ಕಾರಿ ಎಂಬುವವರು ಇದೇ ರೀತಿ 200 ಕುರಿಗಳನ್ನು ಸಾಕಿದ್ದಾರೆ. ಸದ್ಯಕ್ಕೆ ಈ ವಿಶೇಷ ಕುರಿಗೆ 70 ಲಕ್ಷ ಬೇಡಿಕೆ ಬಂದಿದೆ. ಕುರಿ ಬಗ್ಗೆ ಮಾತನಾಡಿರುವ ಮಾಲೀಕ, "ಈ ಕುರಿ ಹೆಸರು ಸರ್ಜಾ. ಆದರೆ ಇದಕ್ಕೆ ನಂತರ ಮೋದಿ ಎಂದು ಮರು ನಾಮಕರಣ ಮಾಡಲಾಯಿತು. ಮೋದಿಯವರು ಹೇಗೆ ಎಲ್ಲಾ ಚುನಾವಣೆಗಳನ್ನು ಗೆದ್ದು ದೇಶದ ಪ್ರಧಾನಿಯಾದರೋ ಹಾಗೆ ಈ ಕುರಿಯೂ ಎಲ್ಲ ಉತ್ಸವಗಳಲ್ಲಿ ಗೆದ್ದು, ಮಾರುಕಟ್ಟೆಯಲ್ಲಿ ತನ್ನದೇ ಸ್ಥಾನ ಪಡೆದುಕೊಂಡಿದೆ" ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಈ ಸರ್ಜಾ ತನಗೆ ಹಾಗೂ ತನ್ನ ಕುಟುಂಬಕ್ಕೆ ಅದೃಷ್ಟ ತಂದಿದೆ ಎಂದು ಹೇಳಿಕೊಳ್ಳುವ ಮೆಟ್ಕಾರಿ ಅವರಿಗೆ ಇದನ್ನು ಮಾರಲು ಇಷ್ಟವಿಲ್ಲವಂತೆ.

2003ರಲ್ಲಿ ಈ ತಳಿ ಕೇವಲ 5,319 ಇದ್ದು, ಇದೀಗ 1.50 ಲಕ್ಷದಷ್ಟು ಹೆಚ್ಚಾಗಿದೆ. ಸದ್ಯಕ್ಕೆ ಸರ್ಕಾರದ ಕಾರ್ಯಕ್ರಮವೊಂದರ ಅಡಿಯಲ್ಲಿ ಮದ್ ಗ್ಯಾಲ್ ತಳಿಯ ಕುರಿಗಳನ್ನು ಅಭಿವೃದ್ಧಿಪಡಿಸುವ ಕೆಲಸ ನಡೆಯುತ್ತಿದೆ.