Animal Husbandry

ಜಾನುವಾರುಗಳಿಗೆ ಚರ್ಮಗಂಟು ರೋಗ ಬಂದರೆ-ರೈತರು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚನೆ

24 September, 2020 7:14 PM IST By:

ಕಲಬುರಗಿ ಜಿಲ್ಲೆಯಾದ್ಯಂತ ಜಾನುವಾರುಗಳಿಗೆ ವೈರಾಣುವಿನಿಂದ ಚರ್ಮಗಂಟು ರೋಗ (ಎಲ್.ಎಸ್.ಡಿ.) ಹರಡುತ್ತಿದ್ದು. ಈ ರೋಗದ ಹತೋಟಿಗಾಗಿ ಜಿಲ್ಲೆಯ ರೈತರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು  ಕಲಬುರಗಿ ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ  ಅಧ್ಯಕ್ಷ ಗುರುಶಾಂತಗೌಡ ಪಾಟೀಲ್   ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಈ ರೋಗವು ಬಹುಮುಖ್ಯವಾಗಿ ದನಗಳ ಮೈಮೇಲೆ ಗುಳ್ಳೆಗಳು ಮತ್ತು ಬಾವು ಬರುತ್ತದೆ. ಇದಲ್ಲದೆ ಸ್ವಲ್ಪ ಮಟ್ಟಿಗೆ ಜ್ವರ ಹಾಗೂ ಮೇವು ನೀರು ಸೇವಿಸುವುದನ್ನು ಕಾಣಬಹುದಾಗಿದೆ. ಇಂತಹ ಲಕ್ಷಣಗಳು ಕಂಡು ಬಂದಲ್ಲಿ ರೈತರು ತಕ್ಷಣ ಸಮೀಪದ ಪಶು ವೈದ್ಯಕೀಯ ಸಂಸ್ಥೆಯ ಸಿಬ್ಬಂದಿಗಳನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ನೀಡಿ, ಉಪಚಾರ ಮಾಡುವುದರ ಮೂಲಕ ಈ ರೋಗದ ಹತೋಟಿ ಮಾಡಬಹುದಾಗಿದೆ.     

      ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ. ವಿ.ಹೆಚ್. ಹನುಮಂತಪ್ಪ    ಈ ರೋಗ ಕುರಿತು ರೈತರು ಭಯಪಡದೇ ಮುಂಜಾಗ್ರತಾ ಕ್ರಮಗಳಾದ ಜಾನುವಾರುಗಳ ಸ್ಥಳದಲ್ಲಿ ಸೊಳ್ಳೆ ಪರದೆಗಳನ್ನು ಅಳವಡಿಸುವುದು, ಸ್ವಚ್ಛತೆ ಕಾಪಾಡುವುದು, ಸುತ್ತ-ಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು, ರಾತ್ರಿ ಸಮಯದಲ್ಲಿ ಬೇವಿನ ಸೊಪ್ಪಿನ ಹೊಗೆ ಹಾಕಬೇಕು ಮತ್ತು ಜಾನುವಾರುಗಳಿಗೆ ಉಣ್ಣೆ, ಸೊಳ್ಳೆಗಳ ಬಾದೆಯಿಂದ ರಕ್ಷಿಸಿದ್ದಲ್ಲಿ ಈ ರೋಗ ಒಂದು ಜಾನುವಾರುದಿಂದ ಮತ್ತೊಂದು ಜಾನುವಾರಿಗೆ ರೋಗ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಈ ರೋಗದ ಲಕ್ಷಣ ಕಂಡುಬಂದಲ್ಲಿ ರೈತರು ಕೂಡಲೇ ತಮ್ಮ ಸಮೀಪದ ಪಶು ವೈದ್ಯಕೀಯ ಸಂಸ್ಥೆಯ ಸಿಬ್ಬಂದಿಯವರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆಯನ್ನು ಕೊಡಿಸಬೇಕು.