ಜಾನುವಾರುಗಳಲ್ಲಿ ಕಂಡುಬಂದಿರುವ ಮಾರಕ ಕಾಯಿಲೆ ಲಂಪಿಸ್ಕಿನ್ (ಮುದ್ದೆರೋಗ) ಜಾನುವಾರುಗಳ ಜೀವ ಹಿಂಡುತ್ತಿದೆ. ಮೊದಲು ಯಾದಗಿರಿ ಜಿಲ್ಲೆಯಲ್ಲಿ ಕಾಣಿಸಿಕೊಂಡ ಈ ರೋಗ ಕಲಬುರಗಿ, ಬೀದರ್ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯೂ ಹರಡುತ್ತಿದೆ. ರಾಜ್ಯದ ವಿವಿಧೆಡೆ ವ್ಯಾಪಕವಾಗಿ ಹರಡುತ್ತಿರುವುದರಿಂದ ರೈತರು ಈ ರೋಗದ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡು ತಮ್ಮ ಜಾನುವಾರುಗಳನ್ನು ರಕ್ಷಿಸಿಕೊಳ್ಳಲು ಅತೀ ಅವಶ್ಯಕತೆಯಿದೆ.
ಕೆಲವು ಹಸು ಮತ್ತು ಎತ್ತುಗಳಲ್ಲಿ ಮೈಮೇಲೆ ಗುಳ್ಳೆಗಳು/ಗಡ್ಡೆಗಳಂತೆ ಬಾವು ಕಾಣಿಸಿಕೊಂಡು ಕೆಲ ದಿನಗಳ ನಂತರ ಆ ಗುಳ್ಳೆಗಳು ಒಡೆದು ರಕ್ತ ಸುರಿಯುತ್ತಿರುವುದು ಕಾಣಿಸಿದ್ದು. ಇದನ್ನು ಕೆಲವರು ಕೊರೋನಾ ರೋಗವಿರಬಹುದೆಂದು ವದಂತಿಗಳು ಹರಡಿಸಲಾಯಿತು. ಆದರೆ ಇದು ಕೊರೋನಾ ರೋಗವಲ್ಲ. ಈ ರೋಗವನ್ನು“ಲಂಪಿ ಸ್ಕಿನ್ ಡಿಸೀಜ್” (ಎಲ್.ಎಸ್.ಡಿ)ಎಂದು ಕರೆಯುತ್ತಾರೆ.
ಈ ರೋಗವು ವೈರಾಣುವಿನಿಂದ ಬರುತ್ತದೆ.ಇದು ಹೆಚ್ಚಾಗಿ ಆಕಳು, ಎಮ್ಮೆ ಮತ್ತು ಎತ್ತುಗಳಲ್ಲಿ ಕಾಣಿಸಿಕೊಳ್ಳುತ್ತದೆ.ಈ ವೈರಾಣು ಪಾಕ್ಸ್ ವೈರಿಡೆಕುಟುಂಬಕ್ಕೆ ಸೇರಿದ್ದು. ಇದು ಪ್ರಪಥಮವಾಗಿ 1929 ರಲ್ಲಿ, ಆಫ್ರಿಕಾಖಂಡದಲ್ಲಿ ಕಾಣಿಸಿತು. ಈ ರೋಗದಿಂದ ಪ್ರಾಣ ಹಾನಿಯಾಗುವ ಸಂಭವ ತೀರಾ ಕಡಿಮೆ. ಅದು 1-2% ವಿರಬಹುದು.ಆದರೆ ಜಾನುವಾರುಗಳಲ್ಲಿ ಈ ರೋಗ ಬಂದಲ್ಲಿ ಹಾಲಿನ ಇಳುವರಿ ಕಡಿಮೆಯಾಗುವುದು.ಕೆಲಸ ಮಾಡುವ ಸಾಮಥ್ರ್ಯಕುಂಠಿತಗೊಂಡು ರೈತರಿಗೆ ಹಾನಿಯುಂಟು ಮಾಡುತ್ತದೆ. ಈ ರೋಗವು ಆಡು ಮತ್ತು ಕುರಿಗಳಲ್ಲಿ ಬರುವುದಿಲ್ಲ. ಆದರೆ ಈ ತರಹದ ಲಕ್ಷಣಗಳು ಕಂಡು ಬಂದಲ್ಲಿ ಅದು ಶಿಪ್ ಪಾಕ್ಸ್ ಆಗಿರುತ್ತದೆ.
ರೋಗದ ಮುಖ್ಯ ಲಕ್ಷಣಗಳು:
- ಪ್ರಾರಂಭಿಕ ಹಂತದಲ್ಲಿ ರೋಗಗ್ರಸ್ಥ ಪ್ರಾಣಿಗಳಲ್ಲಿ ಅತಿಯಾದ ಜ್ವರ (105-106ಎಫ್), ಆಹಾರ ತಿನ್ನದಿರುವುದು, ನಿಶಕ್ತಿಯಿಂದ ಇರುವುದು ಕಾಣಿಸುತ್ತದೆ.
- ಕೆಲವು ಜಾನುವಾರುಗಳಲ್ಲಿ ಕಾಲುಗಳಲ್ಲಿ ಬಾವು ಹಾಗೂ ಕುಂಟುವುದು ಕಾಣಿಸುವುದು.
- ಜಾನುವಾರುವಿನ ಮೈಮೇಲೆ ಚರ್ಮದಲ್ಲಿ 2-5 ಸೆಂ.ಮೀ. ನಷ್ಟು ಅಗಲವಿರುವ ಗಡ್ಡೆಗಳು ಎಲ್ಲಾ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ತದನಂತರ ಇವು ಒಡೆದು ಗಯಗಳಾಗಿ ನೋವನ್ನುಂಟು ಮಾಡುತ್ತವೆ. ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ನೊಣಗಳು ಕೂಡುವುದರಿಂದ ಮೇಗಟ್‍ಉಣ್ಣಾಗುತ್ತದೆ.
- ಕೆಲವು ಬಾರಿ ಹಸುಗಳ ಬಾಯಿ ಹಾಗೂ ಬಾಯಿಯ ಸುತ್ತಲು ಗಡ್ಡೆಗಳು ಕಾಣಿಸುತ್ತದೆ. ಬಾಯಿಯಲ್ಲಿ ಗುಳ್ಳೆಗಳು ಕಾಣಿಸುತ್ತದೆ.
- ಕಣ್ಣುಗಳಿಂದ ನೀರು ಸೋರುತ್ತಿರುತ್ತದೆ.
- ಕಾಲುಗಳಲ್ಲಿ ನೀರು ತುಂಬಿರುವಂತೆ ಬಾವು ಕಾಣಿಸುವುದು. ತದನಂತರ ಕುಂಟುತ್ತಾ ನಡೆಯುತ್ತವೆ.
- ಹಾಲು ನೀಡುವ ಹಸುಗಳಲ್ಲಿ ಹಾಲಿನ ಇಳುವರಿ ಕಡಿಮೆಯಾಗುತ್ತದೆ. ಎತ್ತುಗಳಲ್ಲಿ ಕೆಲಸ ಮಾಡುವ ಸಾಮರರ್ಥ್ಯ ಕಡಿಮೆಯಾಗುತ್ತದೆ.
- ಗರ್ಭಪಾತವಾಗುವ ಸಾಧ್ಯತೆಯು ಹೆಚ್ಚಾಗಿ ಕಾಣಿಸುತ್ತದೆ.
ಹರಡುವಿಕೆ:
- ಈ ರೋಗವು ಮುಖ್ಯವಾಗಿ ಒಂದು ಜಾನುವಾರುವಿನಿಂದ ಇನ್ನೊಂದಕ್ಕೆ ಸೊಳ್ಳೆಗಳಿಂದ, ಉಣ್ಣೆ ಹಾಗೂ ವಿವಿಧ ಕಚ್ಚುವ ಕೀಟಗಳಿಂದ ಹರಡುತ್ತದೆ.
- ಈ ರೋಗವು ರೋಗಗ್ರಸ್ಥ ಜಾನುವಾರುಗಳಿಂದ ಮಲಿನಗೊಂಡ ಆಹಾರ, ನೀರುಗಳಿಂದ ಹರಡುವ ಸಾಧ್ಯತೆಯಿದೆ.
- ರೋಗಗ್ರಸ್ಥ ಜಾನುವಾರುಗಳಿಗೆ ಉಪಯೋಗಿಸಿದ ಸಿರಿಂಜ್ ಮತ್ತು ಸೂಜಿಯನ್ನು ಬೇರೆ ಜಾನುವಾರುಗಳಿಗೆ ಉಪಯೋಗಿಸಿದಾಗ ಹರಡುವ ಸಾಧ್ಯತೆಯು ಹೆಚ್ಚು.
ಚಿಕಿತ್ಸೆ ಮತ್ತು ತಡೆಗಟ್ಟುವಿಕೆ:
- ಈ ರೋಗಕ್ಕೆ ಯಾವುದೇ ಖಚಿತವಾದ ಚಿಕಿತ್ಸೆಇಲ್ಲ. ಅದಕ್ಕಾಗಿ ಜಾನುವಾರುಗಳಲ್ಲಿ ಕಾಣಿಸುವ ರೋಗ ಲಕ್ಷಣಗಳ ತಕ್ಕಂತೆ ಚಿಕಿತ್ಸೆ ನೀಡಬೇಕಾಗುತ್ತದೆ. ಇಲ್ಲಿ ಅತಿಯಾದ ಜ್ವರ ವಿರುವುದರಿಂದ ಪ್ರಾಥಮಿಕವಾಗಿ ಜಾನುವಾರುವಿನ ದೇಹವನ್ನು ತಂಪಾಗಿಸಲು ಹಸಿ ಬಟ್ಟೆ ಹಾಕುವುದು ಅಥವಾ ಅವುಗಳ ಮೇಲೆ ನೀರನ್ನು ಹಾಕಬೇಕು. ಜಾನುವಾರುವಿನ ಮೈಮೇಲೆ ಕಾಣುವ ಗಡ್ಡೆಗಳು ತೀವ್ರವಾದ ನೋವನ್ನುಉಂಟುಮಾಡುವುದರಿಂದ ನೋವು ನಿವಾರಕ ಔಷಧ ಹಾಗೂ ಬ್ಯಾಕ್ಟೇರಿಯಲ್‍ಇನ್ ಪೆಕ್ಷಂನ್‍ತಪ್ಪಿಸಲು 5 ರಿಂದ 7 ದಿನಗಳ ವರೆಗೆ ಅಂಟಿಬಯ್ ಟೆಕನ್ನು ನುರಿತ ಪಶುವೈದ್ಯರಿಂದ ಕೊಡಿಸಬೇಕು. ಚರ್ಮದ ಮೇಲಿನ ಗಾಯಗಳಿಗೆ ಪೊಟ್ಯಾಶಿಯಂ ಪರಮಾಂಗ್ನೆಟ್ ನೀರಿನಿಂದ ತೊಳೆದು ಪೊವೆಡಿನ್‍ಐಯೊಡಿನ್‍ದ್ರಾವಣ/ಕ್ರಿಮ್ ಹಾಗೂ ಬೇವಿನ ಎಣ್ಣೆಯನ್ನು ಲೇಪಿಸಬೇಕು.
- ರೋಗ ಹರಡುವುದನ್ನುತಡೆಯಲು ರೋಗಗ್ರಸ್ಥ ಜಾನುವಾರುಗಳನ್ನು ಬೇರ್ಪಡಿಸುವುದು.
- ಈ ಜಾನುವಾರವಿಗೆ ಉಪಯೋಗಿಸಿದ ಎಲ್ಲಾ ಸಾಮಾಗ್ರಿಗಳನ್ನು ತೆಗೆದು ಸ್ವಚ್ಛಗೊಳಿಸುವುದು.
- ಈ ರೋಗವು ಸೊಳ್ಳೆ ಉಣ್ಣೆ ಹಾಗೂ ಇತರೆ ಕೀಟಗಳಿಂದ ಪಸರಿಸುವುದರಿಂದ ಕೊಟ್ಟಿಗೆ ಸುತ್ತಮುತ್ತಲು ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು.
- ಕೊಟ್ಟಿಗೆಯನ್ನು ಸ್ವಚ್ಛಗೊಳಿಸಲು ಫರಮಲಿನ್ (1%) ಅಥವಾ ಸೋಡಿಯಂ ಹೈಪೊಕ್ಲೋರೈಟ್ (2-3%) ಅಥವಾ ಪಿನೈಲ್ (2%) ಬಳಸಬೇಕು.
ಲೇಖಕರು:
1. ಡಾ. ಮಹಂತೇಶ್ ಎಮ್.ಟಿ
ಪಶು ವಿಜ್ಞಾನಿ, ಐ.ಸಿ.ಎ.ಆರ್-ಕೃಷಿ ವಿಜ್ಞಾನಕೇಂದ್ರ, ಗಂಗಾವತಿ
2. ಡಾ.ಎಮ್.ವಿ. ರವಿ
ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು, ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಕೊಪ್ಪಳ
ದೂರವಾಣಿ ಸಂಖ್ಯೆ: 9591099699