ಬೇಸಿಗೆಯಲ್ಲಿ ಜಾನುವಾರುಗಳನ್ನು ನಿರ್ವಹಣೆ ಮಾಡುವುದು ಹೇಗೆ ಹಾಗೂ ಅವುಗಳ ಸೂಕ್ತ ಉಪಚಾರ ಮಾಡುವುದರ ಕುರಿತು ಇಲ್ಲಿದೆ ಸಂಪೂರ್ಣ ವಿವರ.
Ornamental fish farming: ಉತ್ಸಾಹ ಹಾಗೂ ಉದ್ಯೋಗಕ್ಕಾಗಿ ಅಲಂಕಾರಿಕ ಮೀನು ಸಾಕಾಣಿಕೆ
ಎತ್ತುಗಳ ನಿರ್ವಹಣೆ:
ಎತ್ತುಗಳು ಆರೋಗ್ಯದಿಂದ ಇದ್ದು ಕೃಷಿ ಕೆಲಸದಲ್ಲಿ ಉಪಯುಕ್ತವಾಗಿ ಇರಬೇಕಾದರೆ ಅವುಗಳಿಗೆ ಸರಿಯಾದ ಆಹಾರ ಒದಗಿಸುವುದು ಅವಶ್ಯ.
ಎತ್ತುಗಳಿಗೆ ಕೆಲಸವಿಲ್ಲದಾಗ ಅವುಗಳ ತೂಕ ಹೆಚ್ಚು ಕಡಿಮೆಯಾಗದಂತೆ ಕೇವಲ ಶರೀರದ ಪೋಷಣೆಯನ್ನು ಮಾಡಲು ಬೇಕಾಗುವ ಆಹಾರವನ್ನು "ಜೀವನಾಧಾರ ಆಹಾರ” ಎನ್ನುತ್ತಾರೆ.
ಇದರಿಂದ ಎತ್ತುಗಳು ಆರೋಗ್ಯವಾಗಿ ಬದುಕಲು ಸಾಧ್ಯವಾಗುತ್ತದೆ. ಒಂದು ದಿನಕ್ಕೆ ಒಂದು ಎತ್ತಿಗೆ ಹೊಟ್ಟೆ ತುಂಬುವಷ್ಟು ಓಗ ಅಥವಾ ಹಸಿರು ಮೇವನ್ನು ಕೊಡಬೇಕು. ಜೊತೆಗೆ ಅರ್ಧದಿಂದ ಒಂದು ಕಿಲೋ "ಎತ್ತಿನ ದಾಣಿ ಮಿಶ್ರಣ" ಒದಗಿಸಬೇಕಾಗುತ್ತದೆ.
ಕುಳ್ಳಗೆ ಮುದ್ದಾಗಿರುವ ಪುಂಗನೂರು ತಳಿಯ ಹಸುಗಳ ಬಗ್ಗೆ ನಿಮಗೆಷ್ಟು ಗೊತ್ತು!
ಪ್ರತಿದಿನ 4 ಗಂಟೆ, ರಂಟೆ ಹೊಡೆಯುವ ಅಥವಾ 6 ಗಂಟೆ ಕೆಲಸ ಮಾಡುವ ಎತ್ತುಗಳಿಗೆ ಒಣ ಅಥವಾ ಹಸಿರು ಮೇವಿನ ಜೊತೆಗೆ 15 ಕಿಗ್ರಾಂ ದಾಣಿ ಮಿರ್ಶ ಕೊಡಬೇಕು.
ಪ್ರತಿದಿನ 6 ಗಂಟಿ ರಂಟೆ ಹೊಡೆಯುವ ಅಥವಾ 8 ಗಂಟೆ ಚಕ್ಕಡಿ ಕೆಲಸ ಮಾಡುವ ಎತ್ತುಗಳಿಗೆ ಒಣ ಅಥವಾ ಹಸಿರು ಮೇವಿನ ಜೊತೆಗೆ 15 ರಿಂದ 20 ಕಿ. ಗ್ರಾಂ ದಾಣಿ ಮಿಶ್ರಣ ಒದಗಿಸುವುದು ಅವಶ್ಯ.
ದುಡಿಮೆಯಿಲ್ಲದ ದಿನಗಳಲ್ಲೂ ಕೂಡ ಎತ್ತುಗಳಿಗೆ ನಿತ್ಯಯವು ನಿಯಮಿತವಾದ ಸೂಕ್ತ ವ್ಯಾಯಾಮ ನೀಡುವ ಚಟುವಟಿಕೆಗಳನ್ನು ಮಾಡಿಸುತ್ತಿರಬೇಕು.
ಇಲ್ಲವಾದಲ್ಲಿ ಹೆಚ್ಚು ದಿನಗಳವರೆಗೆ ವಿಶ್ರಾಂತಿ ನಂತರ ಒಮ್ಮೆಲೇ ಜಮೀನಿನಲ್ಲಿ ದುಡಿಸಿದಲ್ಲಿ ಎತ್ತುಗಳಲ್ಲಿ ಕೆಂಪುಮೂತ್ರ ಕಾಣಿಸಿಕೊಳ್ಳಬಹುದು. ಪಶುವೈದ್ಯರ ಸಲಹೆ ಹಾಗೂ ಅವರಿಂದ ಚಿಕಿತ್ಸೆ ಅಗತ್ಯ.
ಕೃಷಿ ಜೊತೆಗೆ ಕುರಿ ಸಾಕಾಣಿಕೆ: 7ರಿಂದ 8 ಲಕ್ಷದವರೆಗೆ ಗಳಿಸುತ್ತಿರುವ ಮಹಿಳೆ!
ಎಮ್ಮೆಗಳ ನಿರ್ವಹಣೆ:
ಬೇಸಿಗೆ ಬಿಸಿಲು ಬಂದಂತೆ ಎಮ್ಮೆಗಳು ನೀರು ನಿಲ್ಲುವ ಸ್ಥಳದಲ್ಲಿ ಈಜಾಡಿ ಹೊರಳಾಡುವುದು ಸರ್ವೇಸಾಮಾನ್ಯ. ಹಸುಗಳಂತೆ ಎಮ್ಮೆಗಳಿಗೆ ಬಿಸಿಲಿನ ತಾಪ ತಡೆಯುವುದು ಸಾಧ್ಯವಾಗುವುದಿಲ್ಲ.
ಇಂತಹ ಸಮಯದಲ್ಲಿ ಎಮ್ಮೆಗಳಿಗೆ ವಿಶೇಷ ಕಾಳಜಿ ಅವಶ್ಯ, ಇಲ್ಲವಾದಲ್ಲಿ ಅವುಗಳ ಉತ್ಪಾದನಾ ಮಟ್ಟ ತೀರಾ ಕಡಿಮೆಯಾಗುವುದು. ಬೇಸಿಗೆಯಲ್ಲಿ ನೀರಿನ ಅಭಾವ ಕಂಡು ಬರುವುದರಿಂದ ಶುಚಿಯಾದ, ಸ್ವಚ್ಛವಾದ ನೀರನ್ನು ದಿನಕ್ಕೆ 5-6 ಸಲ ದನಕರುಗಳಿಗೆ ಕುಡಿಸಬೇಕು.
ಸಾಕಷ್ಟು ಗಿಡಗಳನ್ನು ನೆಟ್ಟು ಬೆಳೆಸಿ ಇಲ್ಲವೇ ಕೊಟ್ಟಿಗೆಯನ್ನು ನಿರ್ಮಿಸಿ ಎಮ್ಮೆಗಳಿಗೆ ನೆರಳು ಸಿಗುವಂತೆ ಮಾಡಬೇಕು. ಕೊಟ್ಟಿಗೆಗಳನ್ನು ತಂಪಾಗಿಡಲು ಕಿಟಕಿಗಳಿಗೆ ಹಸಿ ಮಾಡಿದ ಗೋಣಿ ಚೀಲಗಳನ್ನು ಹಾಕಬೇಕು.
ಮಧ್ಯಾಹ್ನ ಬಿಸಿಲು ಹೆಚ್ಚು ಇದ್ದಾಗ ಎಮ್ಮೆಗಳನ್ನು ತಂಪಾದ ಜಾಗದಲ್ಲಿ ಕಟ್ಟುವುದು ಉತ್ತಮ ಮಧ್ಯಾಹ್ನದ ಸಮಯದಲ್ಲಿ ಎಮ್ಮೆಗಳನ್ನು ಆದಷ್ಟು ನೀರಿನಲ್ಲಿ (ಕೆರೆ, ಹೊಂಡಗಳಲ್ಲಿ) ಬಿಡುವುದು ಉತ್ತಮ.
ಇಲ್ಲವೇ ದಿನಕ್ಕೆ 2-3 ಬಾರಿ ತಣ್ಣೀರಿನಿಂದ ಎಮ್ಮೆಗಳ ಮೈ ತೊಳೆಯಬೇಕು. ಇಲ್ಲವೇ ನೀರು ಸಿಂಪಡಿಸಬೇಕು ಎಮ್ಮೆಗಳಿಗೆ ಸಾಧ್ಯವಾದಷ್ಟು ಹಸಿರು ಮೇವು ಅಥವಾ ರಸಮೇವನ್ನು ಕೊಡಬೇಕು.
ತಂಪಾದ ವೇಳೆಯಲ್ಲಿ ಅಂದರೆ ಬೆಳಿಗ್ಗೆ, ಸಾಯಂಕಾಲ ಹಾಗೂ ರಾತ್ರಿ ಮೇಯಿಸುವುದು ಉತ್ತಮ ಒಂದು ವೇಳೆ ಹೊರಗಡೆ ಮೇಯಲು ಬಿಡುವುದಾದರೆ ತಂಪಾದ ಸಮಯದಲ್ಲಿ ಅಂದರೆ ಬೆಳಿಗ್ಗೆ ಅಥವಾ ಸಾಯಂಕಾಲ ಬಿಡುವುದು ಸೂಕ್ತ.
ಉರಿ ಬಿಸಿಲಿರುವಾಗ ಎಮ್ಮೆಗಳು ಹೊಟ್ಟೆ ತುಂಬ ಮೇವು ತಿನ್ನಲಾರವು, ಬೇಸಿಗೆಯಲ್ಲಿ ಎಮ್ಮೆಗಳು ಸರಿಯಾಗಿ ಬೆದೆಯ ಲಕ್ಷಣ ತೋರಿಸುವುದಿಲ್ಲ.
ರಾತ್ರಿ ಎಮ್ಮೆ ಮಲಗಿದಾಗ (ಕುಳಿತಾಗ) ಗಮನಿಸಿದರೆ ಉತ್ತಮ ಮೇವನ್ನು ಇಷ್ಟಪಟ್ಟು ತಿನ್ನುವ ಹಾಗೆ ಉಪ್ಪು ಯೂರಿಯಾ ಕಾಕಂಬಿಯಿಂದ ರುಚಿಪಡಿಸುವುದು ಸೂಕ್ತ.
ಎಮ್ಮೆಗಳಿಗೆ ಹೊಟ್ಟೆ ತುಂಬುವಷ್ಟು ಹಸಿರು ಮೇವು ಮತ್ತು ಒಣ ಮೇವು ಒದಗಿಸಬೇಕು. ಒಂದು ವೇಳೆ ಹಸಿರು ಮೇವು ಸಿಗದಿದ್ದಾಗ, ರಸ ಮೇವು ಕೊಡಬೇಕು.
ಎಮ್ಮೆಗಳ ಬೆದೆ ನಿರ್ವಹಣೆ:
ಎಮ್ಮೆಗಳು ಬೇಸಿಗೆಯಲ್ಲಿ ಬೆದೆಗೆ ಬಂದಾಗ ಆ ವೇಳೆಯಲ್ಲಿ ಗರ್ಭಕಟ್ಟಿಸುವುದರಿಂದ ಹಾಲು ಉತ್ಪಾದನೆಯನ್ನು ಮುಂದಿನ ಬೇಸಿಗೆಯಲ್ಲಿ ಹೆಚ್ಚಿಸಲು ಉಪಯೋಗಕಾರಿ.
ಇದಕ್ಕಾಗಿ ಬೇಸಿಗೆಯಲ್ಲಿ ಎಮ್ಮೆಗಳನ್ನು ಹೊಂಡದಲ್ಲಿ ಈಜಾಡಲು ಬಿಡುವುದರಿಂದ ಬಿಸಿಲಿನ ತಾಪ ಕಡಿಮೆಯಾಗಿ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸುವುದಲ್ಲದೆ, ಕ್ರಮವಾಗಿ ದೆಡೆಗೆ ಬರಲು ಸಹಾಯಕಾರಿಯಾಗುತ್ತದೆ.
ದೇಸಿಗೆಯಲ್ಲಿ ಕೃತಕ ಗರ್ಭಧಾರಣೆ ಮಾಡಿಸಿದ ನಂತರ ತಣ್ಣೀರಿನಿಂದ ಮೈತೊಳೆದು ಕೊಟ್ಟಿಗೆ ನೆರಳಿನಲ್ಲಿ ಕಟ್ಟುವುದರಿಂದ ಗರ್ಭಧರಿಸುವ ಪ್ರಮಾಣವನ್ನು ಹೆಚ್ಚಿಸುತ್ತದೆ.
ಔಷಧೋಪಚಾರದಿಂದ ಎಮ್ಮೆಗಳು ಬೆದೆಗೆ ಬರುವಂತೆ ಮಾಡಿಸಲು ಹತ್ತಿರದ ಪಶುವೈದ್ಯರನ್ನು ಸಂಪರ್ಕಿಸಬೇಕು.
ಲೇಖನ: ವಿಸ್ತರಣಾ ನಿರ್ದೇಶಕರು, ಕೃಷಿ.ವಿ.ಧಾರವಾಡ