Animal Husbandry

ಆಡು ಬಡವರ ಹಸು, ಆಡಿನ ಹಾಲು ತಾಯಿ ಹಾಲಿನಷ್ಟೇ ಶೇಷ್ಠ ಏಕೆ ಗೊತ್ತೆ... ಇಲ್ಲಿದೆ ಮಾಹಿತಿ

03 January, 2021 10:29 AM IST By:
goat

ಆಡು ಬಡವರ ಹಸು. ಹಸುವನ್ನು ಕೊಳ್ಳಲಾಗದ ಒಬ್ಬ ಬಡ ರೈತನ ಪಾಲಿಗೆ ಆಡು ಕಾಮಧೇನು ಎನ್ನುವುದು ಸತ್ಯ. ಏಕೆಂದರೆ ಆಡು ಸಾಕಾಣಿಕೆಯಿಂದ ಬಡ ರೈತನ ಆರ್ಥಿಕ ಪರಿಸ್ಥಿತಿ ಸುಧಾರಿಸುವುದಲ್ಲದೆ  ಮನುಷ್ಯರಲ್ಲಿ ತಾಯಿ ಹಾಲಿನಲ್ಲಿರುವ ಪೋಷಕಾಂಶಗಳೆಲ್ಲ ಆಡಿನ ಹಾಲಿನಲ್ಲಿರುತ್ತವೆ.

ಆಡಿನ ಹಾಲು ಸರಳವಾಗಿ ಜೀರ್ಣವಾಗುತ್ತದೆ, ಹೀಗಾಗಿ ಚಿಕ್ಕ ಮಕ್ಕಳಿಗೆ ತಾಯಿ ಹಾಲಿಗೆ ಪರ್ಯಾಯವಾಗಿ ಆಡಿನ ಹಾಲು ಉತ್ತಮ. ಆದರೆ ಇಂದು ಸಾಕಾಣಿಕೆಯ ಪ್ರಮಾಣ ಕಡಿಮೆ ಆಗುತ್ತಿದೆ. ಅದು ಕೇವಲ ಮಾಂಸಕ್ಕೆ ಮಾತ್ರ ಒದಗುವ ಪ್ರಾಣಿ ಎಂಬ ಅಪಖ್ಯಾತಿಯೂ ಇದೆ.

ಆಡಿನ ಹಾಲು ಸರಳವಾಗಿ  ಜೀರ್ಣವಾಗುತ್ತದೆ, ಹೀಗಾಗಿ ಚಿಕ್ಕ ಮಕ್ಕಳಿಗೆ ತಾಯಿ ಹಾಲಿಗೆ ಪರ್ಯಾಯವಾಗಿ ಆಡಿನ ಹಾಲು ಉತ್ತಮ. ಕೆಲವು ಸಂಶೋಧನೆಗಳ ಪ್ರಕಾರ ಆರೋಗ್ಯಕ್ಕೆ ಹಸುವಿನ ಹಾಲಿಗಿಂತಲೂ ಆಡಿನ ಹಾಲೇ ಹೆಚ್ಚು ಪ್ರಯೋಜನಕಾರಿಯಾಗಿದೆ. ಇಷ್ಟೆಲ್ಲ ಸಂಗತಿಗಳು ಆಡಿನ ಹಾಲಿನ ಪ್ರಶಂಸೆಗೆ ಮೀಸಲಾದರೂ ಆಡಿನ ಹಾಲಿನ ಬಳಕೆ ಕಡಿಮೆ.

ಇದನ್ನೂ ಓದಿ: ಪಶುಪಾಲಕರಿಗೆ ಸಂತಸದ ಸುದ್ದಿ: ಕುರಿ ಸಾಕಾಣಿಕೆ, ಹೈನುಗಾರಿಕೆ ಮಾಡಬೇಕೇ ಈ ಉಚಿತ ಸಹಾಯವಾಣಿಗೆ ಕರೆ ಮಾಡಿ

ಒಂದು ಲೋಟದಷ್ಟು ಆಡಿನ ಹಾಲಿನಲ್ಲಿ 168 ಕ್ಯಾಲರಿ ಶಕ್ತಿ ಲಭ್ಯ. ಅದರ ಕೊಬ್ಬಿನಂಶ ಶೇ 33, ಅಂದರೆ ಸುಮಾರು 6.5ಗ್ರಾಂನಷ್ಟಿರುತ್ತದೆ. ಕಾರ್ಬೋಹೈಡ್ರೇಟ್ ಶೇ 11 ಅಂದರೆ 4ಗ್ರಾಂನಷ್ಟಿದೆ. ಸೋಡಿಯಂ ಅಂಶ ಸುಮಾರು 12 ಮಿಲಿಗ್ರಾಂ. ಸಕ್ಕರೆ ಕೂಡ 12 ಗ್ರಾಂನಷ್ಟು ಲಭ್ಯ. ಕ್ಯಾಲ್ಸಿಯಂ,(327,ಮಿ.ಗ್ರಾಂ.), ಪೊಟ್ಯಾಶಿಯ,(348 ಮಿ.ಗ್ರಾಂ.) ಮ್ಯಾಗ್ನೀಸಿಯಂ, ರಂಜಕ(271ಮಿ.ಗ್ರಾಂ), ತಾಮ್ರ(0.1 ಮಿ.ಗ್ರಾಂ.) ಮತ್ತು ಸತುವಿನಂಶ(0.7ಮಿ.ಗ್ರಾಂ.) – ಇದು ಆಡಿನ ಹಾಲಿನ ಘಟಕಗಳು. ಅನ್ನಾಂಗಗಳ ಪೈಕಿ ಎ.(483 ಐ.ಯು.), ಬಿ2.(3. ಮಿ.ಗ್ರಾಂ.)ಸಿ(3 ಮಿ.ಗ್ರಾಂ.) ಹಾಗೂ ಡಿ(29 ಐ.ಯು.) ಅಂಶಗಳು ಆಡಿನ ಹಾಲಿನ ಘಟಕಗಳು. ಆಧುನಿಕ ಆಹಾರ ವಿಜ್ಞಾನಿಗಳು ಸಹ ಈ ಐದು ಕಾರಣಗಳಿಂದಾಗಿ ಆಡಿನ ಹಾಲನ್ನು ಹಸುವಿನದಕ್ಕಿಂತ ಮಿಗಿಲು ಎನ್ನುತ್ತಾರೆ.

ಮೊದಲನೆಯ ಕಾರಣ ಇದು ಹೆಚ್ಚು ಬೇಗ ಪಚನವಾಗುತ್ತದೆ. ಕರುಳಿನಲ್ಲಿ ಯಾವುದೇ ತೊಂದರೆಗಳಿಲ್ಲದೆ ದೇಹದೊಳಗೆ ರವಾನೆಯಾಗುತ್ತದೆ. ಒಂದಿನಿತೂ ಒಗ್ಗದಿಕೆಯಾಗದ ಸಸಾರಜನಕಗಳು ಆಡಿನ ಹಾಲಿನ ವಿಶೇಷ. ದೇಹದ ಚರ್ಮದ ಆರೋಗ್ಯ ಕಾಪಾಡಲು ಆಡಿನ ಹಾಲಿನ ಬಳಕೆ ಹೆಚ್ಚು ಯೋಗ್ಯ. ಕಬ್ಬಿಣದಂಶದಂತಹ ಅಪರೂಪದ ಖನಿಜಾಂಶ ದೇಹ ಸೇರುವಿಕೆಯು ಕೂಡ ಬಹಳ ಸುರಳೀತ. ಹಾಗಾಗಿ ಆಡಿನ ಹಾಲಿನ ಬಳಕೆಗೆ ಹೆಚ್ಚು ಒತ್ತು ಕೊಡಲು ಆಧುನಿಕ ಆಹಾರತಜ್ಞರು ಕರೆ ನೀಡುತ್ತಾರೆ. ಆದರೆ ಹಸುವಿನ ಹಾಲೇ ಕುಡಿಯದೆ ಕೇವಲ ಡೈರಿಗೆ ಮಾರುವ ಕೃಷಿಕರು ಆಡು ಸಾಕಿದರೂ ಅದರ ಹಾಲನ್ನು ಪ್ರತ್ಯೇಕಿಸದೆ ಡೈರಿಗೆ ಹಾಕುವ ಸಂದರ್ಭಗಳೇ ಅಧಿಕ. ಇನ್ನು ಮುಂದಾದದರೂ ಆಡಿನ ಹಾಲಿನ ಬಳಕೆಯ ಮಡಿವಂತಿಗೆ ಅಳಿದು ರೋಗರುಜಿನ ತಡೆಯಬಲ್ಲ ಇಂತಹ ಅಮೃತಸೇವನೆಗೆ ಗ್ರಾಮೀಣ ಜನತೆ ಮುಂದಾಗಲಿ. ಹೊಸ ಪೀಳಿಗೆಯ ನಗರವಾಸಿಗಳಿಗೂ ಆಡಿನ ಹಾಲು ದೊರಕುವಂತಾಗಲಿ.

ಆಡಿನ ಹಾಲಿನಲ್ಲಿ ಆರೋಗ್ಯದ ಹಾಡು

ವಿಶೇಷತೆಃ ಕ್ಷಯರೋಗ, ಕೃಶಕಾಯದವರಿಗೆ ಆಡಿನ ಹಾಲಿನ ಸೇವನೆಯ ಪಥ್ಯವು ಆಯುರ್ವೇದ ಸಂಹಿತೆಗಳಲ್ಲಿದೆ. ಅದು ಹೊಟ್ಟೆಯ ಹಸಿವೆ ಹೆಚ್ಚಿಸಲು ಉಪಕಾರಿ. ದ್ರವ ಮಲ, ಪದೇ ಪದೇ ಭೇದಿ ಇದ್ದವರಿಗೂ ಹಿತಕಾರಿ. ಕೆಮ್ಮು–ದಮ್ಮು ಇದ್ದರೆ ಹಸುವಿನ ಹಾಲು ಕಫ ಹೆಚ್ಚಿಸುವ ಪ್ರಮೇಯ ಇದೆ. ಆದರೆ ಆಡಿನ ಹಾಲಿನದು ಲಘು ಗುಣ; ಬೇಗನೆ ಪಚನವಾಗುತ್ತದೆ. ಕೆಮ್ಮು, ಕಫ, ಉಬ್ಬಸವಿದ್ದರೂ ಕೆಡುಕನ್ನು ಉಂಟುಮಾಡದು. ಮೂಗು, ಬಾಯಿಯ ರಕ್ತಸ್ರಾವ, ಅತಿಯಾದ ಕೆಂಪುಮುಟ್ಟು ತೊಂದರೆಯನ್ನು ಪರಿಹರಿಸಲು ಆಡಿನ ಹಾಲು ಉತ್ತಮ ಎಂಬ ಮಾಹಿತಿ ಚರಕ, ಸುಶ್ರುತಸಂಹಿತೆಯ ಒಮ್ಮತದ ಅಭಿಪ್ರಾಯ. 

ಇದನ್ನೂ ಓದಿ: ಆಡು ಸಾಕಾಣಿಕೆ ಮಾಡಿದರೆ ಕೈಯಲ್ಲಿ ಡೆಬಿಟ್ ಕಾರ್ಡ್ ಇದ್ದಂತೆ

ಆಡಿನ ಹಾಲಿನಿಂದ ತಯಾರಿಸಿದ ಮೊಸರನ್ನು ತಿಂದರೆ ಕಣ್ಣಿನ ಶಕ್ತಿ ಹೆಚ್ಚುತ್ತದೆ ಎಂಬ ಮಾಹಿತಿ ಧನ್ವಂತರಿ ನಿಘಂಟುವಿನದು. ಈ ಮೊಸರು ಮೂಲವ್ಯಾಧಿ ಕಾಯಿಲೆಗೆ ಮದ್ದು ಎನ್ನುತ್ತಾನೆ ಸುಶ್ರುತ. ಆಡಿನ ತುಪ್ಪಕ್ಕೆ ಇಷ್ಟೆಲ್ಲ ಗುಣಗಳ ಜೊತೆಗೆ ದೇಹಬಲವನ್ನೂ ಕಣ್ಣಿನ ಶಕ್ತಿಯನ್ನೂ ಹೆಚ್ಚಿಸುವ ಗುಣವಿದೆ.

ಆಡಿನ ಹಸಿ ಹಾಲು ಕುಡಿಯುವುದರಿಂದ ಈ ರೋಗಗಳನ್ನು ತಡೆಗಟ್ಟಬಹುದು:

 ಡೆಂಗೆ ಮುಂತಾದ ಸಮಸ್ಯೆ ಬಣದಾಗ ಪ್ಲೇಟ್‌ಲೆಟ್‌ ಸಂಖ್ಯೆ ಕಡಿಮೆಯಾದಾಗ ಆಡಿನ ಹಸಿ ಹಾಲನ್ನು ಕುಡಿಯುವುದರಿಂದ ಪ್ಲೇಟ್‌ಲೆಟ್‌ ಸಂಖ್ಯೆ ಹೆಚ್ಚಾಗುವುದು.  ಅಲ್ಲದೆ ಕಾಮಲೆಯಂಥ ಕಾಯಿಲೆಯನ್ನು ಗುಣಪಡಿಸುವ ಶಕ್ತಿ ಆಡಿನ ಹಾಲಿಗಿದೆ.
ಮಕ್ಕಳ ಬೆಳವಣಿಗೆಗೆ ಒಳ್ಳೆಯದು
ಪ್ರೊಟೀನ್‌, ಆರೋಗ್ಯಕರ ಕೊಬ್ಬಿನಂಶ, ವಿಟಮಿನ್ಸ್. ಕಬ್ಬಿಣದಂಶ ಈ ಪೋಷಕಾಂಶಗಳಿರುವುದರಿಂದ ಮಕ್ಕಳ ಮೂಳೆಯನ್ನು ಬಲವಾಗಿಸುತ್ತದೆ, ಹಲ್ಲುಗಳು ಬಲವಾಗುವುದು ಅಲ್ಲದೆ ಮಗುವಿನ ಬೆಳವಣಿಗೆಗೆ ಸಹಕಾರಿ.