Animal Husbandry

ಜನವರಿ 16 ರಿಂದ 25 ರವರೆಗೆ ಉಚಿತ ಹೈನುಗಾರಿಕೆ ತರಬೇತಿ ಪಡೆಯಲಿಚ್ಚಿಸುವವರು ಇಲ್ಲಿ ಕ್ಲಿಕ್ ಮಾಡಿ ಹೆಸರು ನೋಂದಾಯಿಸಿ

09 January, 2021 5:25 PM IST By:
Dairy

ಎಸ್.ಬಿ.ಐ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಜನವರಿ 16 ರಿಂದ 25 ರವರೆಗೆ ಹೈನುಗಾರಿಕೆ ಮತ್ತು ಎರೆಹುಳ ಗೊಬ್ಬರ ತಯಾರಿಕೆ ಉಚಿತ ತರಬೇತಿ ಹಮ್ಮಿಕೊಳ್ಳಲಾಗಿದೆ.

18 ರಿಂದ 45 ವರ್ಷದರೆಗಿನ ಬಿಪಿಎಲ್ ಕುಟುಂಬದ ನಿರುದ್ಯೋಗಿಗಳು ಜನವರಿ 16 ರೊಳಗೆ ಅರ್ಜಿ ಸಲ್ಲಿಸಬೇಕು. ಊಟ ವಸತಿ, ಸೌಲಭ್ಯವೂ ನೀಡಲಾಗುವುದು. ಅಲ್ಪಸ್ವಲ್ಪ ಅನುಭವ ಇರುವವರಿಗೆ ಆದ್ಯತೆ ನೀಡಲಾಗುವುದು.

ಅಂದು ಬೆಳಗ್ಗೆ 10 ರಿಂದ 3 ಗಂಟೆಯವರೆಗೆ ಸಂದರ್ಶನಕ್ಕೆ ಕಡ್ಡಾಯವಾಗಿ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ. 9243602888, 9886781239 ಗೆ ಸಂಪರ್ಕಿಸಬಹುದು.

ಅರ್ಜಿಯನ್ನು ಎಸ್.ಬಿ.ಐ ಆರ್.ಸೆಟಿ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ರಾಮಮಂದಿರ ರಸ್ತೆ, ಆರ್ಯನ್ ಸ್ಕೂಲ್ ಎದುರುಗಡೆ ಮಹಾದೇವಪ್ಪ ರಾಂಪುರೆ ಬಡಾವಣೆ, ಜಿಡಿಎ ಲೇಔಟ್, ದರಿಯಾಪುರ, ಕಲಬುರಗಿ ಇಲ್ಲಿ ಸಲ್ಲಿಸಬೇಕು.