Animal Husbandry

ಜಾನುವಾರುಗಳ ಕಾಲುಬಾಯಿ ರೋಗ ಬಂದರೆ ಆತಂಕಗೊಳ್ಳದೆ ಕೃಷಿ ತಜ್ಞರು ನೀಡಿದ ಸಲಹೆಗಳಂತೆ ಕ್ರಮಕೈಗೊಳ್ಳಿ

10 August, 2021 8:54 PM IST By:

ಜಾನುವಾರುಗಳಿಗೆ ಕಾಲು ಬಾಯಿ ಜ್ವರಹರಡಿದಾಗ  ರೈತರು ಆತಂಕಕ್ಕೊಳಗಾಗಬಾರದು. ಕೃಷಿ ವಿಜ್ಞಾನಿಗಳು ರೋಗದ ಕುರಿತು ರೈತರಲ್ಲಿನ ಆತಂಕ ಕಡಿಮೆ ಮಾಡಲು ಹಾಗೂ ರೋಗ ನಿಯಂತ್ರಣ ಮಾಡಿ ಸೂಕ್ತ ಮಾಹಿತಿ ನೀಡಲು ಹಲವು ಕ್ರಮಗಳನ್ನು ಕುರಿತು ಸಲಹೆ ನೀಡಿದ್ದಾರೆ. ಹೌದು, ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಹಗರಿಯ ಮುಖ್ಯಸ್ಥರು ಜಾನುವಾರುಗಳ ಕಾಲುಬಾಯಿ ರೋಗ ಮತ್ತು ನಿಯಂತ್ರಣ ಕ್ರಮಗಳ ಕುರಿತು ಸಲಹೆ ನೀಡಿದ್ದಾರೆ.

ಸೀಳು ಗೊರಸುಳ್ಳ ಪ್ರಾಣಿಗಳಲ್ಲಿ ಕಂಡು ಬರು ವೇರಾಣುವಾಗಿದೆ. ವೈರಾಣಿ (ಪಿಕಾರ್ನೋ) ವಿನಲ್ಲಿ ಏಳು ಪ್ರಮುಖ ಬಗೆಗಳಿದ್ದು, ರೋಗವು ಒಂದೇ ಋತುವಿನಲ್ಲಿ ಪುನರಾವರ್ತಿತವಾಗುವ ಸಾಧ್ಯತೆಗಳಿರುತ್ತವೆ.

ರೋಗ ಹೇಗೆ ಹರಡುತ್ತದೆ?

ರೋಗಪೀಡಿತ ಪಶುವಿನ ಜೊಲ್ಲು, ಹಾಲು, ಮೂತ್ರ, ಮಲ ಮತ್ತು ವೀರ್ಯದಿಂದ ಇತರ ಜಾನುವಾರುಗಳಇಗೆ ರೋಗ ಹರಡುತ್ತದೆ.

ರೋಗದ ಲಕ್ಷಣಗಳು:

 ವಿಪರೀತ ಜ್ವನ ಇರುತ್ತದೆ. ಬಾಯಿ ಮತ್ತು ನಾಲಿಗೆಯ ಮೇಲೆ ಸಣ್ಣ ಗುಳ್ಳೆಗಳಾಗಿ ನಂತರ ಒಡೆದು ಹುಣ್ಣುಗಳಾಗುತ್ತವೆ.ಮೇವು ತಿನ್ನಲು ಆಗದೆ, ಬಾಯಿಯಿಂದ ಧಾರಾಕಾರವಾಗಿ ಜೊಲ್ಲು ಸುರಿಯುತ್ತದೆ. ಕಾಲಿನಲ್ಲಿ ಗೊರಸುಗಳ ಮಧ್ಯೆ ಹುಣ್ಣುಗಳಾಗಿ, ನಡೆಯಲು ಕಷ್ಟವಾಗುತ್ತದೆ. ಹಾಲಿನ ಇಳುವರಿ ಕಡಿಮೆಯಾಗುತ್ತದೆ.

ನಿಯಂತ್ರಣ ಕ್ರಮ:

ರೋಗವು ಬಾರದಂತೆ ತಡೆಗಟ್ಟಲು ಒಂದಕ್ಕಿಂತ ಹೆಚ್ಚು ಎಫ್ ಎಂ.ಡಿ. ವೈರಾಣು ಬಗೆಗಳಿರುವ ಪಾಲಿವಲೆಂಟ್ ಲಸಿಕೆಗಳನ್ನು ಪ್ರತಿ ರಾಸುವಿಗೆ ತಪ್ಪದೆ ವರ್ಷದಲ್ಲಿ ಎರಡು ಬಾರಿ ಹಾಕಿಸಬೇಕು.

ಪಶುಪಾಲಕರ 8277 100 200

ರಾಜ್ಯದ ಪಶುಸಂಗೋಪನಾ ಚಟುವಟಿಕೆಗಳಲ್ಲಿ ನಿರತರಾಗಿರುವ ರೈತರು ದೂರವಾಣಿ ಸಂಖ್ಯೆ 8277 100 200 (ಉಚಿತ) ಕ್ಕೆ 24*7 ರವರೆಗೆ ಕರೆ ಮಾಡಿ, ಸಹಾಯವಾಣಿಯಲ್ಲಿ ಕಾರ್ಯನಿರ್ವಹಿಸುವ ಪಶುವೈದ್ಯರು ಮತ್ತು ಇತರೆ ವಿಷಯ ತಜ್ಞರಿಂದ ಅಗತ್ಯ ಮಾಹಿತಿ ಪಡೆಯಬಹುದಾಗಿದೆ.

ಸಹಾಯವಾಣಿಯ ಮೂಲಕ ಲಭ್ಯವಿರುವ ಮಾಹಿತಿಗಳು:

ಇಲಾಖೆಯ ವತಿಯಿಂದ ಲಭ್ಯವಿರುವ ತಾಂತ್ರಿಕ ಸೇವೆಗಳ ಬಗ್ಗೆ ಮಾಹಿತಿ.

ಹೈನುಗಾರಿಕೆ, ಕುರಿ ಮತ್ತು ಮೇಕೆ ಸಾಕಾಣಿಕೆ, ಮೊಲ ಸಾಕಾಣಿಕೆ, ಹಂದಿ ಸಾಕಾಣಿಕೆ, ಕೋಳಿ ಸಾಕಾಣಿಕೆ ಕುರಿತಂತೆ ಇಲಾಖೆಯ ತರಬೇತಿ ಕೇಂದ್ರಗಳಲ್ಲಿ ನಡೆಯುವ ತರಬೇತಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ.

ಜಾನುವಾರು ರೋಗಗಳು, ಲಸಿಕಾ ಕಾರ್ಯಕ್ರಮ ಹಾಗೂ ಜಾನುವಾರು ರೋಗ ತಡೆಗಟ್ಟಲು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ವಿವರ.

ದೇಶಿ ಹಾಗೂ ವಿದೇಶಿ ಜಾನವಾರು ತಳಿಗಳ ಬಗ್ಗೆ ಮಾಹಿತಿ.

ಜಾನುವಾರುಗಳಲ್ಲಿ ನಿಯಮಿತವಾಗಿ ನೀಡಬೇಕಾಗಿರುವ ಲಸಿಕೆಗಳ ಕುರಿತು ವಿವರಣೆ.

ಪಶುಸಂಗೋಪನಾ ಚಟುವಟಿಕೆಗಳಿಗೆ ವಿವಿಧ ಬ್ಯಾಂಕುಗಳಿಂದ ದೊರೆಯಬಹುದಾದ ಸಾಲ ಸೌಲಭ್ಯ ಕುರಿತು ಮಾಹಿತಿ.

ಮಿಶ‍್ರತಳಿ ಹಸು, ಕುರಿ ಮತ್ತು ಮೇಕೆ, ಹಂದಿಗಳ ಅಂದಾಜು ಬೆಲೆ ಹಾಗೂ ಅವುಗಳ ಲಭ್ಯತೆ ಕುರಿತಂತೆ ಸೂಕ್ತ ಸ್ಥಳಗಳ ವಿವರ.

ಯಶಸ್ವಿ ಹೈನುಗಾರಿಕೆಗೆ ಅಗತ್ಯವಿರುವ ಮೇವಿನ ಬೆಳೆಗಳ ಬಗ್ಗೆ ಮಾಹಿತಿ.

ತುರ್ತು ಪಶುವೈದ್ಯ ಸೇವೆಗಾಗಿ ಒಳಬರುವ ಕರೆಗಳನ್ನು ಹತ್ತಿರದ ಇಲಾಖಾ ತಾಂತ್ರಿಕ ಸಿಬ್ಬಂದಿ/ಅಧಿಕಾರಿಗೆ ವರ್ಗಾಯಿಸಿ, ಅಗತ್ಯ ಸೇವೆ ದೊರೆಯುವಂತೆ ಸಹಕರಿಸುವುದು.