ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ವಿಶೇಷ ಕೇಂದ್ರೀಯ ನೆರವಿನಡಿ ಕೋಳಿ ಸಾಕಾಣಿಕೆ ಕೇಂದ್ರ ಸ್ಥಾಪಿಸಲು ರಾಮನಗರ ಜಿಲ್ಲೆಯ ಪರಿಶಿಷ್ಟ ಪಂಗಡದವರಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ರೈತರು ಸಮಾಜ ಕಲ್ಯಾಣ ಇಲಾಖೆಯ ಸಹಾಯವಾಣಿ ನಿರ್ದೇಶಕರು, ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ ತಾಲೂಕು ಕಚೇರಿಗಳಲ್ಲಿ ಅರ್ಜಿಗಳನ್ನು ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಸೆಪ್ಟೆಂಬರ್ 17 ರೊಳಗಾಗಿ ಸಂಬಂಧಪಟ್ಟ ತಾಲೂಕಿನ ಸಹಾಯಕ ನಿರ್ದೇಶಕರ ಕಚೇರಿಗಳಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ರಾಮಗನರ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕಚೇರಿ ದೂರವಾಣಿ ಸಂಖ್ಯೆ 080-27273003, ರಾಮನಗರ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ದೂರವಾಣಿ ಸಂಖ್ಯೆ 080-27272214, 7760242757, ಚನ್ನಪಟ್ಟಣ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ದೂರವಾಣಿ ಸಂಖ್ಯೆ 080-27252151, 9448857432, ಕನಕಪುರ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ದೂರವಾಣಿ ಸಂಖ್ಯೆ 080-27522593, 9880435845 ಹಾಗೂ ಮಾಗಡಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ದೂರವಾಣಿ ಸಂಖ್ಯೆ 080-27745379, 9480384099ಗೆ ಸಂಪರ್ಕಿಸಲು ಕೋರಲಾಗಿದೆ.
ಕೋಳಿ ಸಾಕಾಣಿಕೆ ಮುನ್ನ ಓದಿರಿ ಈ ಕೆಳಗಿನ ಮಾಹಿತಿ
ಕೋಳಿಗಳಲ್ಲಿ ಮಾಂಸಕೋಳಿ, ಮತ್ತು ಮೊಟ್ಟೆ ಕೊಳಿಗಳೆಂದು ವಿಂಗಡಿಸಲಾಗುತ್ತದೆ. ಕೆಲವರು ಮಾಂಸಕ್ಕಾಗಿ ಸಾಕುತ್ತಾರೆ.ಇನ್ನೂ ಕೆಲವರು ಮೊಟ್ಟೆ ಮತ್ತು ಮಾಂಸಕ್ಕಾಗಿ ಕೋಳಿಗಳನ್ನು ಸಾಕುತ್ತಾರೆ. ಯಾವುದಕ್ಕಾಗಿ ಉದ್ಯಮ ಆಯ್ಕೆ ಮಾಡಿಕೊಳ್ಳುತ್ತೇವೆಯೋ ಅದ ಕೋಳಿ ಸಾಕಾಣಿಕೆ ಮಾಡುವವ ವಿವೇಚನೆಗೆ ಬಿಟ್ಟಿದ್ದು.
ಬಾಯ್ಲರ್ ಕೋಳಿಗಳನ್ನು ಮಾಂಸಕ್ಕಾಗಿಯೇ ಉಪಯೋಗಿಸುತ್ತಾರೆ. ಈ ಕೋಳಿಗಳು ಕೇವಲ ಒಂದು ಒಂದೂವರೆ ತಿಂಗಳುಗಳಲ್ಲಿ ಎರಡು ಎರಡೂವರೆ ಕೆ.ಜಿ ತೂಕ ಪಡೆಯುತ್ತವೆ. ಒಂದು ಕೆ.ಜಿ. ತೂಕ ಬರಲು ಪ್ರತಿ ಕೋಳಿಗೆ 1.6 ಕೆಜಿ ಯಿಂದ 1.75 ಕೆ.ಜಿಯಷ್ಟು ಆಹಾರ ಸಾಕು! ಮೊಟ್ಟೆ ಕೋಳಿಗಳ ಸಾಕಣೆಗೆ ಹೊಲಿಸಿದರೆ ಮಾಂಸದ ಕೋಳಿ ಸಾಕಣೆಯ ಪ್ರಾರಂಭಿಕ ವೆಚ್ಚ ತೀರಾ ಕಡಿಮೆ. ಸಾಕಣೆ ಕಾಲಾವಧಿ ಕೇವಲ 4ರಿಂದ 6 ವಾರಗಳು ಮಾತ್ರ. ಇವುಗಳ ಮಾಂಸಕ್ಕೆ ಬೇಡಿಕೆ ಹೆಚ್ಚು.
ಸಾಕಣೆಗೆ ಏನೇನು ಬೇಕು?
ಈ ಉದ್ಯೋಗವನ್ನು ಕೈಗೊಳ್ಳಲು ಮೊದಲು ಆಸಕ್ತಿ, ದೃಢವಾದ ಮನಸ್ಸು, ಕನಿಷ್ಠ ತರಬೇತಿ ಹಾಗೂ ಪರಿಶ್ರಮದೊಂದಿಗೆ ಮುನ್ನೆಚ್ಚರಿಕೆಯೊಂದಿಗೆ ವ್ಯವಹಾರಿಕ ಜ್ಞಾನವೂ ಬೇಕು. ಸತತ ಶುದ್ಧ ನೀರಿನ ಸೌಕರ್ಯ ಬೇಕು. ರಾತ್ರಿಯೆಲ್ಲ ಬೆಳಕಿನ ಅವಶ್ಯಕತೆಯಿರುವುದರಿಂದ ವಿದ್ಯುತ್ ಬೇಕು.
ತಳಿಗಳಿವೆ. ಉದಾಹರಣೆಗೆ ಕಾಬ್, ಹಬ್ಬರ್ಡ್, ಹಬ್ಚಿಿಕ್ಸ್ ಇತ್ಯಾದಿ.
ಈ ಕೋಳಿಮರಿಗಳು ಹುಟ್ಟಿದಾಗ 42ಗ್ರಾಂ ನಿಂದ 45 ಗ್ರಾಂ ತೂಕವಿರುತ್ತವೆ. ಅದನ್ನು ಪಡೆದ ರೈತರು ಪ್ರಾರಂಭದ 10-15 ದಿನಗಳ ಕಾಲ ವಿದ್ಯುತ್ ಬಲ್ಬುಗಳ ಮೂಲಕ ಬೆಚ್ಚಗೆ ಕಾವು ಕೊಟ್ಟು ಪೌಷ್ಟಿಕ ಆಹಾರ ಹಾಕಿ ಸತತವಾಗಿ ನೀರುಣಿಸಿ ಒಂದು ಒಂದೂವರೆ ತಿಂಗಳುಗಳ ತನಕ ಸಾಕಿ ಮಾರಾಟ ಮಾಡುತ್ತಾರೆ. ಕೇವಲ 45 ದಿನಗಳಲ್ಲಿ ಕೋಳಿ ಮರಿಯು ತನ್ನ ತೂಕವನ್ನು 50 ಪಟ್ಟು ಹೆಚ್ಚಿಸಿಕೊಳ್ಳುತ್ತದೆ. ಕೋಳಿ ಗೊಬ್ಬರ ಹೆಚ್ಚು ಸಾರಜನಕ ಹೊಂದಿದೆ. ಇದನ್ನು ಕಾಂಪೋಸ್ಟ್ ಮಾಡಿ ಕೃಷಿಗೂ ಬಳಸುತ್ತಾರೆ.
ಕೋಳಿ ಆಹಾರ:
ಕೋಳಿಗಳಿಗೆ ಉತ್ತಮ ಸಮತೋಲನ ವಾಗಿರುವ ಆಹಾರವನ್ನು ವೈಜ್ಞಾನಿಕ ರೀತಿಯಲ್ಲಿ ತಿನ್ನಿಸಬೇಕು. ಆಗ ಮಾತ್ರ ಕೋಳಿಗಳಿಂದ ಅಧಿಕ ಉತ್ಪಾದನೆ (ಮೊಟ್ಟೆ ಮತ್ತು ಮಾಂಸ) ಪಡೆಯಲು ಸಾಧ್ಯ. ಕೋಳಿ ಸಾಕಾಣೆಯ ಒಟ್ಟು ವೆಚ್ಚದಲ್ಲಿ ಶೇಕಡ 70-75 ರಷ್ಟು ಭಾಗ ಆಹಾರದ್ದಾಗಿರುತ್ತದೆ. ಆರ್ಥಿಕ ದೃಷ್ಟಿಯಿಂದ ಈ ವೆಚ್ಚ ಒಂದು ಗಮನಾರ್ಹ ಅಂಶ.
ಈ ಆಹಾರದಲ್ಲಿ ಮರಿಗಳ ವಯಸ್ಸಿಗೆ ತಕ್ಕಂತೆ ನೀಡುವ ಪ್ರಿಸ್ಟಾರ್ಟರ್, ಸ್ಟಾರ್ಟರ್, ಹಾಗೂ ಫಿನಿಶರ್ ಎಂಬ ಆಹಾರಗಳಿವೆ. ಆಹಾರದ ಗುಣಮಟ್ಟ ಮತ್ತು ಸಂಗ್ರಹಣೆಯ ಬಗ್ಗೆ ಹೆಚ್ಚು ಕಾಳಜಿವಹಿಸುವುದು ಅವಶ್ಯ. ಆಹಾರವು ಶಿಲೀಂಧ್ರಪೀಡಿತ(ಫಂಗಸ್)ವಾಗಿರಬಾರದು.
ಕೋಳಿಗಳ ಶೆಡ್ ನಿರ್ಮಾಣದಲ್ಲಿ ಗಮನಿಸಬೇಕಾದ ಅಂಶಗಳು:
ನೀವು ದೊಡ್ಡ ಪ್ರಮಾಣದಲ್ಲಿ ಶೆಡ್ ನಿರ್ಮಾಣ ಮಾಡುವುದಾದರೆ ಬಯಲು ಪ್ರದೇಶವನ್ನು ಆಯ್ಕೆಮಾಡಿಕೊಳ್ಳುವುದು ಉತ್ತಮ. ಏಕೆಂದರೆ ಮುಕ್ತವಾದ ಗಾಳಿ ಬೆಳಕು ಈ ಪ್ರದೇಶದಲ್ಲಿದ್ದರೆ ಕೋಳಿಗಳ ಬೆಳವಣಿಗೆಗೆ ಇದು ತುಂಬಾ ಅನುಕೂಲಕಲವಾಗಿರುತ್ತದೆ. ಇದನ್ನು ನಿರ್ಮಿಸುವಾಗ ನೆಲದಿಂದ ಎತ್ತರವಾಗಿ ಮತ್ತು ಸಮವಾಗಿರುವಂತೆ ನಿರ್ಮಿಸಬೇಕು. ಅಲ್ಲದೇ ಬೇಸಿಗೆಯಲ್ಲಿ ತಂಪಾಗಿರುವಂತೆ ಮತ್ತು ಚಳಿಗಾಲದಲ್ಲಿ ಬೆಚ್ಚಗೆ ಇರುವಂತ ಸ್ಥಳವನ್ನು ಆಯ್ಕೆಮಾಡಬೇಕು ಆದಷ್ಟು ಇಳಿಜಾರಾಗಿರುವ ಪ್ರದೇಶದಲ್ಲಿ ಇದನ್ನು ನಿರ್ಮಿಸುವುದು ಸೂಕ್ತ. ಅಲ್ಲದೇ ಇದಕ್ಕೆ ನೀರಿನ ಪೂರೈಕೆ ಮತ್ತು ಬೆಳಕಿನ ಪೂರೈಕೆ ಇರುವ ಹಾಗೆ ಗಮನಹರಿಸಬೇಕು.