Animal Husbandry

ಟಗರು ಕಾಳಗದಲ್ಲಿ 50 ಸಾವಿರ, ಎತ್ತುಗಳಿಂದ ಭಾರ ಎಳೆಯುವ ಸ್ಪರ್ಧೆಯಲ್ಲಿ ಗೆಲ್ಲಲು 50 ಸಾವಿರ ನಗದು ಗೆಲ್ಲಲು ಇಂದೇ ಹೆಸರು ನೋಂದಾಯಿಸಿ

06 January, 2021 9:46 AM IST By:
sheep competitaion

ರೈತ ಬಾಂಧವರಿಗೆ ಸುವರ್ಣಾವಕಾಶ ಇಲ್ಲಿದೆ. ನಿಮ್ಮಲ್ಲಿ ದಷ್ಟಪುಷ್ಟ ಟಗರು ಇದೆಯೇ. ಅಥವಾ ನಿಮ್ಮಲ್ಲಿ ಬಲಿಷ್ಟ ಎತ್ತುಗಳಿವೆಯೇ?  ಹಾಗಾದರೆ ಇನ್ನೇಕೆ ತಡ. ಟಗರು ಕಾಳಗ ಮತ್ತು ಎತ್ತುಗಳಿಂದ ಭಾರ ಎಳೆಯುವ ಸ್ಪರ್ಧೆ ಇವರೆಡರಲ್ಲಿ ಯಾವುದಾದರೊಂದು ಸ್ಪರ್ಧೆಯಲ್ಲಿ ಭಾಗವಹಿಸಿ 50 ಸಾವಿರ ರೂಪಾಯಿ ಗೆಲ್ಲುವ ಸುವರ್ಣಾವಕಾಶ ನಿಮಗಿದೆ.

ಹೌದು  ಪ್ರತಿವರ್ಷದಂತೆ ಈ ವರ್ಷವೂ ರಾಯಚೂರ ಜಿಲ್ಲೆಯ ದೇವದುರ್ಗ ತಾಲ್ಲೂಕಿನ ವೀರಗೋಟ ತಿಂಥಣಿ ಬ್ರಿಡ್ಜ್ ನ ಹತ್ತಿರವಿರುವ ಕನಗುರು ಪೀಠದಲ್ಲಿ ಜ.12,13 ಮತ್ತು 14 ರಂದು ಮೂರುದಿನಗಳ ಕಾಲ “ಹಾಲುಮತ ಸಂಸ್ಕೃತಿ ವೈಭವ” ಕಾರ್ಯಕ್ರಮದಲ್ಲಿ ಟಗರು ಹಾಗೂ ಭಾರ  ಎಳೆಯುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.

ಇದನ್ನೂ ಓದಿ: ಪಶುಪಾಲಕರಿಗೆ ಸಂತಸದ ಸುದ್ದಿ: ಕುರಿ ಸಾಕಾಣಿಕೆ, ಹೈನುಗಾರಿಕೆ ಮಾಡಬೇಕೇ ಈ ಉಚಿತ ಸಹಾಯವಾಣಿಗೆ ಕರೆ ಮಾಡಿ

ಟಗರು ಕಾಳಗದಲ್ಲಿ ಪ್ರಥಮ ಸ್ಥಾನ ಪಡೆದ ಟಗರು ಮಾಲಿಕನಿಗೆ 50 ಸಾವಿರ ದ್ವಿತೀಯ ಸ್ಥಾನ ಪಡೆದ ಟಗರು ಮಾಲಿಕನಿಗೆ 25 ಸಾವಿರ ನಗದು ಬಹುಮಾನವಿದೆ. ಭಾರ ಎಳೆಯುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಎತ್ತುಗಳ ಮಾಲಿಕನಿಗೆ 50 ಸಾವಿರ ರೂಪಾಯಿ ಬಹುಮಾನವಿದೆ. ತಿಂಥಣಿಯ ಕಾಗಿನೆಲೆ ಮಹಾ ಸಂಸ್ಥಾನ ಕನಕಗುರುಪೀಠದ ಸಿದ್ಧರಾಮಾನಂದ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ox competitation

ಟಗರು ಕಾಳಗ

ಜನವರಿ 12 ರಂದು  ಮಧ್ಯಾಹ್ನ 2-30ಕ್ಕೆ ಟಗರು ಕಾಳಗ ಆಯೋಜಿಸಲಾಗಿದ್ದು, ಟಗರು ಕಾಳಗದಲ್ಲಿ ಗೆದ್ದವರಿಗೆ ಮೊದಲ ಬಹುಮಾನವಾಗಿ 50 ಸಾವಿರ, ಎರಡನೇ ಬಹುಮಾನವಾಗಿ 25 ಸಾವಿರ ರೂ.ನಗದು ನೀಡಲಾಗುವದು.

ಅದೇ ರೀತಿ 13 ರಂದು ಮಧ್ಯಾಹ್ನ 2-30ಕ್ಕೆ ಎತ್ತುಗಳ ಭಾರ ಎಳೆಯುವ ಸ್ಪರ್ಧೆ ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ 50 ಸಾವಿರ ದ್ವಿತೀಯ ಸ್ಥಾನ ಪಡೆದವರಿಗೆ 25 ಸಾವಿರ ರೂಪಾಯಿ ಬಹುಮಾನವಾಗಿ ನಗದು ನೀಡಲಾಗುವುದು.
ಇದನ್ನೂ ಓದಿ: ಆಡು ಸಾಕಾಣಿಕೆ ಮಾಡಿದರೆ ಕೈಯಲ್ಲಿ ಡೆಬಿಟ್ ಕಾರ್ಡ್ ಇದ್ದಂತೆ

13 ರಂದು ಬೆಳಿಗ್ಗೆ 11 ಗಂಟೆಗೆ ಸುಡಗಾಡ ಸಿದ್ದರು-ಟಗರು ಜೋಗಿಗಳು, ಹೆಳವರ ಸಮಾವೇಶ ನಡೆಯಲಿದೆ. ಅದೇ ರಕ್ತದಾನ ಶಿಬಿರ, ಉಚಿತ ನೇತ್ರ ತಪಾಸಣೆ ನಡೆಯಲಿದೆ.
ಹೆಸರು ನೋಂದಾಯಿಸಲು ಮೊ.ನಂ.9449615600, 9945570505, 7338440687, 9448568330 ಗೆ ಸಂಪರ್ಕಿಸಲು ಕೋರಲಾಗಿದೆ.