ಕುರಿ, ಮೇಕೆ ಸಾಕಾಣಿಕೆ ಮಾಡುವ ರೈತರಿಗೆ ಸಂತಸದ ಸುದ್ದಿ. ಕುರಿ, ಮೇಕೆ ಘಟಕ ಸ್ಥಾಪನೆ ಮಾಡಿ ನೀಮ್ಮ ಜಾನುವಾರುಗಳನ್ನು ರಕ್ಷಣೆ ಮಾಡಲು ಸರ್ಕಾರವು ಕುರಿ ಮತ್ತು ಮೇಕೆ ಘಟಕ ಸ್ಥಾಪನೆಗೆ ಶೇ. 90 ರಷ್ಟು ಸಹಾಯಧನ ನೀಡಲು ಮುಂದಾಗಿದೆ.
ಹೌದು ಚಿತ್ರದುರ್ಗ ಜಿಲ್ಲೆಯ ರೈತರಿಗೆ ಕುರಿ, ಮೇಕೆ ಘಟಕ ಸ್ಥಾಪನೆಗೆ ಪರಿಶಿಷ್ಟ ಪಂಗಡದ ರೈತರಿಂದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸಲು ಇದೇ ತಿಂಗಳು ಫೆ.18 ಕೊನೆಯ ದಿನವಾಗಿದೆ. ಇಲಾಖೆ ಶೇ 90ರಷ್ಟು ಸಹಾಯಧನ ಮತ್ತು ಫಲಾನುಭವಿ ಶೇ 10 ರಷ್ಟು ಹಣ ಭರಿಸಬೇಕಾಗಿದೆ. ಸಂಬಂಧಿಸಿದ ತಾಲ್ಲೂಕುಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಅರ್ಜಿಗಳನ್ನು ಪಡೆಯಬಹುದು.
ಇದನ್ನೂ ಓದಿ : ಕುರಿ, ಆಡು,ಕೋಳಿ ಸಾಕಾಣಿಕೆ ಹಾಗೂ ಹೈನುಗಾರಿಕೆಗೆ ಉಚಿತ ತರಬೇತಿ ನೀಡಲು ಅರ್ಜಿ ಆಹ್ವಾನ
ಇನ್ನೇಕೆ ತಡ ಫೆಬ್ರವರಿ 18 ರೊಳಗೆ ಅರ್ಜಿ ಸಲ್ಲಿಸಿ ಸರ್ಕಾರದಿಂದ ಸೌಲಭ್ಯ ಪಡೆಯಿರಿ. ವಿಳಂಬವಾಗಿ ಅರ್ಜಿ ಸಲ್ಲಿಸಿದರೆ ಸೌಲಭ್ಯ ಸಿಗುವುದಿಲ್ಲ. ಅರ್ಜಿ ಹಾಗೂ ಇತರ ಮಾಹಿತಿಗಳಿಗೆ ನಿಮ್ಮ ತಾಲೂಕಿನ ಸಹಾಯಕ ನಿರ್ದೇಶಕರ ಕಚೇರಿಗೆ ಸಂಪರ್ಕಿಸಿಸಿ.
ಇದನ್ನೂ ಓದಿ: ಪಶುಪಾಲಕರಿಗೆ ಸಂತಸದ ಸುದ್ದಿ: ಕುರಿ ಸಾಕಾಣಿಕೆ, ಹೈನುಗಾರಿಕೆ ಮಾಡಬೇಕೇ ಈ ಉಚಿತ ಸಹಾಯವಾಣಿಗೆ ಕರೆ ಮಾಡಿ