Animal Husbandry

ಅಲೆಮಾರಿ ಅರೆಅಲೆಮಾರಿ ಕುರಿ ಸಾಕಾಣಿಕೆ ಮಾಡುವ ಕುರಿಗಾರರಿಗೆ ಟೆಂಟ್, ಪರಿಕರಗಳ ವಿತರಣೆಗೆ ಅರ್ಜಿ ಆಹ್ವಾನ

06 July, 2021 9:44 PM IST By:

2021-22ನೇ ಸಾಲಿನ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ಬೆಳಗಾವಿ ಜಿಲ್ಲೆಯ ಅಲೆಮಾರಿ ಅರೆಅಲೆಮಾರಿ ಕುರಿ ಸಾಕಾಣಿಕೆ ಮಾಡುವ ಕುರಿಗಾರರಿಗೆ ಟೆಂಟ್ ಹಾಗೂ ಇನ್ನಿತರ ಪರಿಕರ ಕಿಟ್ ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲಾ ಆಯ್ಕೆ ಸಮಿತಿ ಮೂಲಕ ನಿಗಮದಲ್ಲಿ ನೊಂದಾಯಿತ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘದ ಸದಸ್ಯತ್ವವನ್ನು ಹೊಂದಿರುವ ಒಟ್ಟು 14 ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ಉಪ ನಿರ್ದೇಶಕರು ತಿಳಿಸಿದ್ದಾರೆ.

ಅರ್ಜಿಗಳನ್ನು ತಮ್ಮ ತಾಲೂಕಿನ ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆಯಿಂದ ಕುರಿ ಅಥವಾ ಮೇಕೆಗಳು ಹೊಂದಿರುವ ಬಗ್ಗೆ ದೃಡಿಕರಣದೊಂದಿಗೆ ಸ್ಥಳೀಯ ಪಶುವೈದ್ಯಾಧಿಕಾರಿ ಸಹಿಯೊಂದಿಗೆ ಜುಲೈ 22ರ ಒಳಗಾಗಿ ಅವಶ್ಯಕ ದಾಖಲೆಗಳು ಜಾತಿ, ಸಂಘದ ಸದಸ್ಯತ್ವ ಪ್ರಮಾಣ ಪತ್ರ ಸೇರಿದಂತೆ ಆಧಾರ್ ಕಾರ್ಡ್, ರೇಶನ್ ಕಾರ್ಡ್, ಮತದಾರರ ಗುರುತಿನ ಚೀಟಿ ಕುರಿಗಾರರೆಂಬ ಪ್ರಮಾಣ ಪತ್ರ ದೃಡಿಕರಿಸಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಯನ್ನು ಆಯಾ ತಾಲೂಕು ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಅಥವಾ ಅಥಣಿ ತಾಲೂಕಿನ ಕುರಿಗಾರರು 9449054685, 008289-251007 ಗೆ ಸಂಪರ್ಕಿಸಬಹುದು.
ಬೈಲಹೊಗಲ ತಾಲೂಕಿನ ಕುರಿಗಾರರು 9448346935, 08288-233229ಗೆ, ಬೆಳಗಾವಿಯ ಕುರಿಗಾರರು 8277307636, 0831-2427438 ದೂ. ಸಂಖ್ಯೆಗೆ,  ಚಿಕ್ಕೋಡಿಯ ಕುರಿಗಾರರು ದೂ. 9448859656, 08338-272203 ಗೆ. ಗೋಕಾಕ ತಾಲೂಕಿನ ಕುರಿಗಾರರು 9480688289, 08332-265083 ಗೆ ಸಂಪರ್ಕಿಸಲು ಕೋರಲಾಗಿದೆ.

ಕುರಿ, ಮೇಕೆ ಘಟಕ ಸ್ಥಾಪಿಸಲು ಅರ್ಜಿ ಆಹ್ವಾನ

ಕರ್ನಾಟಕ ಉಣ್ಣೆ ಅಭಿವೃದ್ಧಿ ನಿಗಮದಿಂದ ಕುರಿಗಾರರಿಗೆ ಕಿಟ್ ಪರಿಕರಗಳ ವಿತರಣೆಗೆ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಲ್ಲಿ ನೋಂದಾಯಿತ ಫಲಾನುಭವಿಗಳಿಂದ ಹಾಗೂ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆ ಅಡಿಯಲ್ಲಿ  ಕುರಿ ಮತ್ತು ಮೇಕೆ ಘಟಕ ಸ್ಥಾಪಿಸಲು ನಿಗಮದಲ್ಲಿ ನೋಂದಾಯಿತ  ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಸದಸ್ಯರಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು ನಿಗದಿತ ಅರ್ಜಿ ನಮೂನೆಯನ್ನು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃಧಿ ನಿಗಮ ನಿಯಮತಿ ಹಾವೇರಿ ಕಚೇರಿ ಹಾಗೂ ಸಂಬಂಧಪಟ್ಟ ತಾಲೂಕಿನ ಸಹಾಯಕ ನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಕಚೇರಿಯಿಂದ ಪಡೆದುಕೊಂಡು ಅಗತ್ಯ ದಾಖಲೆಯೊಂದಿಗೆ ಭರ್ತಿ  ಮಾಡಿದ ಅರ್ಜಿಯನ್ನು ಸಂಬಂಧಪಟ್ಟ ತಾಲೂಕಿನ ಸಹಾಯಕ ನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಕಚೇರಿಗೆ ಜುಲೈ 20ರೊಳಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ಹಾವೇರಿ ಕಚೇರಿ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.