Animal Husbandry

ರೈತರಿಗೆ ಸಂತಸದ ಸುದ್ದಿ, 5 ಲಕ್ಷ ವೆಚ್ಚದ ಉಚಿತ ನಂದಿನಿ ಮಳಿಗೆ-ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯಿರಿ

27 January, 2021 12:08 AM IST By: KJ Staff

ಹೈನುಗಾರಿಕೆ ಮಾಡುತ್ತಿರುವ ರೈತರಿಗೆ ಸಂತಸದ ಸುದ್ದಿ. ನಂದಿನಿ ಉತ್ಪನ್ನಗಳ ಮಳಿಗೆ ಹಾಕಿ ಮಾರಾಟ ಮಾಡಲು ಬಯಸುವರಿಗೆ ಮಳಿಗೆಯನ್ನು ಮಾಡಲು 5 ಲಕ್ಷ ರೂಪಾಯಿಯಿಗೆ ಉಚಿತವಾಗಿ ನೀಡಲಾಗುವುದು, ಹೌದು, ನಂದಿನಿ ಉತ್ಪನ್ನಗಳ ಮಳಿಗೆ ಹಾಕುವವರಿಗೆ ಕಲಬುರ್ಗಿ–ಬೀದರ್ ಹಾಗೂ ಯಾದಗಿರಿ ಜಿಲ್ಲಾ ಹಾಲು ಒಕ್ಕೂಟವು  5 ಲಕ್ಷದ ಮಳಿಗೆಯನ್ನು ಉಚಿತವಾಗಿ ನಿರ್ಮಿಸಿಕೊಡಲಿದೆ.

ಕಲಬುರಗಿ, ಬೀದರ್ ಯಾದಗಿರಿ ಜಿಲ್ಲೆಯ ರೈತರು ಮಹಾನಗರ ಪಾಲಿಕೆಯಿಂದ ಮಳಿಗೆ ಹಾಕಲು ಜಾಗ ಮಂಜೂರು ಮಾಡಿಸಿಕೊಂಡು ಬಂದರೆ ಅವರಿಗೆ   5 ಲಕ್ಷ ಮಳಿಗೆ ವೆಚ್ಚವನ್ನು ಒಕ್ಕೂಟ ಭರಿಸಲಿದೆ. ಇದರ ಪ್ರಯೋಜನವನ್ನು ಆಸಕ್ತರು ಪಡೆಯಬಹುದು. ಖಾಸಗಿ ಜಾಗದಲ್ಲಿ ಮಳಿಗೆ ಸ್ಥಾಪಿಸಲು ಅನುಮತಿ ಕೊಡಲಾಗುತ್ತದೆ. ಆದರೆ,  5 ಲಕ್ಷ ಹಣ ಕೊಡುವುದಿಲ್ಲ. ಈ ಯೋಜನೆಯ ಪ್ರಯೋಜನ ಪಡೆಯ ಬೇಕೆಂದರೆ ಸರ್ಕಾರಿ ಜಾಗದಲ್ಲಿ ಮಳಿಗೆ ಆರಂಭಿಸಬೇಕು ಎಂದು  ಕಲಬುರ್ಗಿ–ಬೀದರ್ ಹಾಗೂ ಯಾದಗಿರಿ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಆರ್‌.ಕೆ. ಪಾಟೀಲ ತಿಳಿಸಿದ್ದಾರೆ.

‘ಒಕ್ಕೂಟದ ವ್ಯಾಪ್ತಿಯ 3 ಜಿಲ್ಲೆಗಳಲ್ಲಿ ಹೊಸದಾಗಿ 60 ಮಳಿಗೆಗಳನ್ನು ಮಂಜೂರು ಮಾಡಲಾಗಿದೆ. ಮಳಿಗೆಗಳ ಮಂಜೂರಾತಿ ಸಂದರ್ಭದಲ್ಲಿ ಒಕ್ಕೂಟದ ಅಧಿಕಾರಿಗಳು ಹಣದ ಬೇಡಿಕೆ ಇಟ್ಟರೆ ಅಂಥವರ ಬಗ್ಗೆ ದೂರು ನೀಡಿದ್ದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಅಂತಹ ದೂರು ಬಂದ ಪ್ರಯುಕ್ತ ಇಬ್ಬರನ್ನು ಅಮಾನತು ಮಾಡಲಾಗಿದೆ’ ಎಂದು ಹೇಳಿದರು.

‘ನಂದಿನಿ ಉತ್ಸವದ ಸಂದರ್ಭದಲ್ಲಿ ರಿಯಾಯಿತಿ ಯನ್ನು ಮಳಿಗೆಯವರು ಗ್ರಾಹಕರಿಗೆ ತಲುಪಿಸದಿದ್ದಲ್ಲಿ ಕೆಎಂಎಫ್‌ನ ಟೋಲ್ ಫ್ರೀಂ ಸಂಖ್ಯೆ 080 6666 0000ಗೆ ದೂರು ನೀಡಬಹುದು’ ಎಂದು ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ ಕುಮಾರ್ ತಿಳಿಸಿದ್ದಾರೆ.