Agripedia

Weather Report: ರಾಜ್ಯದಲ್ಲಿ ಸೆಪ್ಟೆಂಬರ್‌ 11 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ

08 September, 2022 2:21 PM IST By: Maltesh
Weather Report Karnataka : Heavy rain is likely in the state till September 11

ಸೆಪ್ಟೆಂಬರ್ ತಿಂಗಳಿನಲ್ಲಿಯೂ ಹವಾಮಾನದ ವೈಪರೀತ್ಯಗಳು ಮುಂದುವರೆಯುತ್ತಲೆ ಇವೆ. ಕೆಲವೆಡೆ ಬಿಸಿಲಿನ ಝಳಕ್ಕೆ ಜನ ಕಂಗಾಲಾಗಿದ್ದರೆ, ಕೆಲವೆಡೆ ಮಳೆಯ ಅಬ್ಬರ ಮುಂದುವರಿದಿದೆ. ಅರ್ಧ ನಗರವೇ ಮುಳುಗಡೆಯಾಗಿರುವ ಬೆಂಗಳೂರಿನಿಂದಲೂ ಇದೇ ರೀತಿಯ ಸನ್ನಿವೇಶಗಳು ಕಂಡು ಬರುತ್ತಿವೆ. ಮಲೆನಾಡಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳು ಕೂಡ ಹಾಳಾಗಿವೆ.

ಮಹಿಳೆಯರಿಗೆ ಸಿಹಿ ಸುದ್ದಿ: ಸರ್ಕಾರದಿಂದ ಉಚಿತ ಬಟ್ಟೆ ಹೊಲಿಗೆ ಯಂತ್ರ..ಎಲ್ಲರಿಗೂ ಸಿಗುತ್ತಿದೆ

ಸೆಪ್ಟೆಂಬರ್‌ 11 ರವರೆಗೆ ಬೆಂಗಳೂರಿನಲ್ಲಿ ಭಾರೀ ಮಳೆ

ಬೆಂಗಳೂರಿನಲ್ಲಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹವಾಮಾನ ಇಲಾಖೆಯ ಪ್ರಕಾರ, ಸೆಪ್ಟೆಂಬರ್ 11 ರವರೆಗೆ, ಬೆಂಗಳೂರು ಮತ್ತು ಕರ್ನಾಟಕದ ಉಳಿದ ಭಾಗಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಯನ್ನು ವ್ಯಕ್ತಪಡಿಸಲಾಗಿದೆ.

ಅದೇನೆಂದರೆ, ಇದರೊಂದಿಗೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮತ್ತೊಂದೆಡೆ ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ, ಯಾದಗಿರಿ, ಬಳ್ಳಾರಿ ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ. ಇದರೊಂದಿಗೆ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುರುವಾರವೂ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ಕಡಿಮೆ ಖರ್ಚಿನನಲ್ಲಿ ಬಂಪರ್‌ ಇಳುವರಿ..ಈ ರೀತಿ ಮೆಣಸಿನಕಾಯಿ ಬೆಳೆದು ನೋಡಿ

ರಾಜಸ್ಥಾನದಲ್ಲಿ ಹವಾಮಾನವು ಕೊಂಚ ವ್ಯತ್ಯಾಸವಾಗಿದೆ . ತಡರಾತ್ರಿ ಸುರಿದ ಅಲ್ಪಸ್ವಲ್ಪ ಮಳೆಯಿಂದ ರಾಜ್ಯದ ಜನತೆಗೆ ನೆಮ್ಮದಿ ಸಿಕ್ಕಿದ್ದು, ಹವಾಮಾನ ಇಲಾಖೆ ಪ್ರಕಾರ ಇಂದು ಕೂಡ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಇದರೊಂದಿಗೆ ಸೆ.12ರವರೆಗೆ ಇಡೀ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ದೆಹಲಿಯಲ್ಲಿ ಬೇಸಿಗೆ ಕಾಲ

ರಾಜಧಾನಿಯ ಹವಾಮಾನವು ಆಗಸ್ಟ್‌ನಂತೆ ಸೆಪ್ಟೆಂಬರ್‌ನಲ್ಲಿ ಕಂಡುಬರುತ್ತದೆ. ಶಾಖ ಮತ್ತು ತೇವಾಂಶದಿಂದ ಜನರು ತೊಂದರೆ ಎದುರಿಸುತ್ತಿದ್ದಾರೆ. ಹವಾಮಾನ ಇಲಾಖೆಯ ಪ್ರಕಾರ, ದೆಹಲಿಯ ಜನರು ಇನ್ನು 4-5 ದಿನಗಳ ಕಾಲ ಬಿಸಿಲಿನ ತಾಪವನ್ನು ಎದುರಿಸಬೇಕಾಗುತ್ತದೆ.

ಉತ್ತರಾಖಂಡ ಮತ್ತು ಹಿಮಾಚಲದ ಗುಡ್ಡಗಾಡು ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಭೂಕುಸಿತದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಹಲವೆಡೆ ರಸ್ತೆಗಳು ಬಂದ್‌ ಆಗಿವೆ. ಎರಡೂ ರಾಜ್ಯಗಳ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹಳದಿ ಎಚ್ಚರಿಕೆ ನೀಡಿದೆ.