Agripedia

ಕಡಲೆ ಬೆಳೆಯಲ್ಲಿ ಬರುವಂತಹ ಬೇರು ಕೊಳೆ ರೋಗ ನಿರ್ವಹಣೆ

27 December, 2020 12:15 PM IST By:

ಕಡಲೆ ಬೆಳೆಯು ಉತ್ತರ ಕರ್ನಾಟಕದ ಒಂದು ಪ್ರಮುಖ ಬೆಳೆಯಾಗಿದ್ದು, ಈ ಬಾರಿ ಅಧಿಕ ಮಳೆಯಾದ ಕಾರಣ ನಾವು ಉಳ್ಳಾಗಡ್ಡಿ ಯಲ್ಲಿ ಬೇರು ಕೊಳೆ ರೋಗ ವನ್ನು ಹೆಚ್ಚಾಗಿ ಕಂಡಿದ್ದೆವು, ಹಾಗಾಗಿ ಕಡಲೆಯಲ್ಲಿಯು ಈ ರೋಗದ ಬಗ್ಗೆ ನಾವು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವುದು ಸೂಕ್ತ.

ರೋಗದ ಲಕ್ಷಣಗಳು :
- ರೋಗವು ಮಣ್ಣು ಜನ್ಯ ಶಿಲೀಂದ್ರದಿಂದ ಕಂಡುಬರುತ್ತದೆ.
-ರೋಗದಿಂದ ಒಣಗಿದ ಗಿಡಗಳು ಕಿತ್ತಾಗ ನೆಲದಿಂದ ಸರಳವಾಗಿ ಬರುತ್ತದೆ.
- ತಂತು ಬೇರುಗಳು ಕೊಳೆತು ಭೂಮಿಯಲ್ಲಿ ಉಳಿದು ತಾಯಿಬೇರು ಮಾತ್ರ ಗಿಡದ ಜೊತೆಗೆ ಬರುತ್ತದೆ.
ಹತೋಟಿ ಕ್ರಮಗಳು :
 -ಇಂಗ್ಲಿಷ್ ನಲ್ಲಿ ಒಂದು ಗಾದೆ ಮಾತಿದೆ" prevention is better than cure" ಹಾಗಾಗಿ ನಾವು ಬೀಜೋಪಚಾರ ವನ್ನು ಮಾಡುವ ಮೂಲಕ ರೋಗಗಳು ಬರುವುದನ್ನು ತಡೆಯಬಹುದು.ಪ್ರತಿ ಕೆಜಿ ಬೀಜಕ್ಕೆ 2ಗ್ರಾಂ captan 80wp ಅಥವಾ thiaram 75wp ಅಥವಾ 4ಗ್ರಾಂ ಜೈವಿಕ ಶಿಲಿಂಧ್ರನಾಶಕವಾದ trichoderma ದಿಂದ ಬೀಜೋಪಚಾರ ಮಾಡಬೇಕು. 
-ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಬೇಕು. 
-ಕೊಯ್ಲು ಮಾಡುವವರೆಗೂ ರೋಗಕ್ಕೆ ತುತ್ತಾದ ಗಿಡಗಳನ್ನು ಆಗಾಗ ಕಿತ್ತು ಒಗೆಯಬೇಕು  

ಸೂಚನೆ - ನಾವು ಹೇಳಿದೆ ಮಾಹಿತಿಯನ್ನು ಬಳಸುವ ಮುನ್ನ ರೈತರು ತಮ್ಮ ಸಮೀಪದ ಕೃಷಿ ಅಧಿಕಾರಿಗಳನ್ನು ಭೇಟಿ ಮಾಡಿ ಸಂಪೂರ್ಣ ಮಾಹಿತಿ ಪಡೆದ ನಂತರ ಬಳಸಬೇಕು.