Agripedia

ಕಾರ್ಮಿಕ ಕಾರ್ಡ್ ಗಳಿಂದ  ಆಗುವ ಲಾಭಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನ

04 June, 2022 2:03 PM IST By:
labour card

ಕಾರ್ಮಿಕರಿಗೆ ಅಥವಾ ಲೇಬರ್ ಕಾರ್ಡ್ ಹೊಂದಬೇಕು ಅನ್ನುವವರಿಗೆ….ಇದೀಗ ಬಂದ ಖುಷಿ ಸುದ್ದಿ ಏನಪ್ಪಾ ಅಂದರೆ ಕಾರ್ಮಿಕ ಕಾರ್ಡನ್ನು ಅಥವಾ ಲೇಬರ್ ಕಾರ್ಡ್ ಅಪ್ಲೈ ಮಾಡಲು ಅವಕಾಶವನ್ನು ಈಗ ಕರ್ನಾಟಕ ಸರ್ಕಾರ ಕಲ್ಪಿಸಿದೆ ಕೆಲವು ಕಾರಣಗಳಿಂದ ಸ್ಥಗಿತಗೊಂಡಿದ್ದ ಲೇಬರ್ ಕಾರ್ಡ್ ಅಥವಾ ಕಾರ್ಮಿಕ ಕಾರ್ಡನ್ನು ಅಪ್ಲೈ ಮಾಡುವ ಪ್ರಕ್ರಿಯೆ ಈಗ ಮತ್ತೆ ಅರ್ಜಿಯನ್ನು ಸ್ವೀಕರಿಸುತ್ತದೆ.

ಈ ಕೆಳಗಿನ ಇರುವ link ಅನ್ನು ಪ್ರೆಸ್ ಮಾಡಿ ಮತ್ತು  ಕರ್ನಾಟಕ ಸರ್ಕಾರ ಸೇವಾ ಸಿಂಧು ಪೋರ್ಟ್  ವೆಬ್ ಸೈಟಿನ ಅಫಿಶಿಯಲ್ ಪೇಜಿಗೆ ಪ್ರವೇಶಿಸಿ ಅರ್ಜಿಯನ್ನು ನೀವು ಹಾಕಬಹುದು..

ಗುಡ್ ನ್ಯೂಸ್: ಕೃಷಿ ವಲಯದ ಕೈಗಾರಿಕೆಗಳನ್ನು ಪ್ರಾರಂಭಿಸಲು ಶೇಕಡಾ.50ರಷ್ಟು ಸಹಾಯಧನ!

ರೈತರಿಗೆ ಸಿಹಿ ಸುದ್ದಿ: ಮಾರುಕಟ್ಟೆಯಲ್ಲಿ ಗೋಧಿಗೆ ಬಂಪರ್ ಬೆಲೆ: ರೈತರ ಮುಖದಲ್ಲಿ ನಗೆ!

ಕಾರ್ಮಿಕ ಕಾರ್ಡ್ ಪಡೆಯಲು ಬೇಕಾಗಿರುವ ದಾಖಲೆಗಳು ಮತ್ತು ಪ್ರಕ್ರಿಯೆ

ಕಾರ್ಮಿಕ ಕಾರ್ಡ್ ಪಡೆಯಲು ಮೇಲಿನ ಸೇವಾ ಸಿಂಧು ಪೋರ್ಟ್ ಅಲ್ಲಿಗೆ ಪ್ರವೇಶ ಮಾಡಬೇಕು ನಂತರ

1) ನೊಂದಾಯಿತ ಬಳಕೆದಾರರು ಎಂಬ ಆಯ್ಕೆಯನ್ನು ಒತ್ತಿ.

2) New User Register Here ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿ ನಂತರ ರಿಜಿಸ್ಟ್ರೇಷನ್ ಅನ್ನು ಮಾಡಬೇಕು

3) ಇಮೇಲ್ ಐಡಿ ಮತ್ತು ಪಾಸ್ವರ್ಡ್ ಅನ್ನು ಹಾಕಿ ನೀವು ಲಾಗಿನ್ ಆಗಬೇಕು

4) ಲಾಗಿನ್ ಆದಮೇಲೆ apply for service ಎಂಬ ಆಯ್ಕೆಯನ್ನು ನೀವು ಸೆಲೆಕ್ಟ್ ಮಾಡಿಕೊಳ್ಳಿ ಇದರ ಕೆಳಗಡೆ view all available services ಇದರ ಮೇಲೆ ಕ್ಲಿಕ್ ಮಾಡಿ

5) ನಂತರ ಒಂದು ವೆಬ್ ಪೇಜ್ ತೆರೆಯುತ್ತದೆ ಅದರಲ್ಲಿ search option ಅಲ್ಲಿ ನೀವು Building ಎಂದು ಟೈಪ್ ಮಾಡಿದರೆ

6)6ನೇ ಸಮ ಸಂಖ್ಯೆಯಲ್ಲಿ ನಿಮಗೆ application for registration with Karnataka building and other construction workers welfare board ಎಂಬ

ಕಪ್ಪು ಗೋಧಿಯ ಬಗ್ಗೆ ನಿಮಗೆ ಗೊತ್ತೆ? ಇಲ್ಲಿದೆ ರೈತರಿಗೆ ಲಾಭದಾಯಕ ಕೃಷಿಯ ಐಡಿಯಾ!

ಮೇ ತಿಂಗಳಲ್ಲಿ ಬಿತ್ತನೆ ಮಾಡಬೇಕಾದ ಬೆಳೆಗಳು! ಇದರಿಂದ ರೈತರಿಗಾಗಲಿದೆ ಹೆಚ್ಚಿನ ಲಾಭ

ಆಪ್ಷನ್ ಅನ್ನು ಸೆಲೆಕ್ಟ್ ಮಾಡಿ.

ನೀವು ಕಾರ್ಮಿಕ ಕಾರ್ಡನ್ನು ಅಪ್ಲೈ ಮಾಡಲು ಬೇಕಾದ ದಾಖಲೆಗಳು ಕೆಳಗಿನಂತಿವೆ

1) ಆಧಾರ್ ಕಾರ್ಡ್.

2) ಎಂಪ್ಲಾಯ್ಮೆಂಟ್ ಕಾರ್ಡ್ (EMPLOYMENT CARD)

3) ನೀವು ಕೆಲಸ ಮಾಡುತ್ತಿರುವ ಮಾಲೀಕರ ಹೆಸರು ಮತ್ತು ವಿಳಾಸ

4) ನೀವು ನಾಮಿನಿ ಮಾಡಬೇಕಾದವರ ವಿದ್ಯಾರ್ಹತೆ, ವಿಳಾಸ, ನಿಮಗೂ ಅವರಿಗೆ ಇರುವ ಸಂಬಂಧದ ಮಾಹಿತಿ ಮತ್ತು ಕುಟುಂಬದಲ್ಲಿ ಇರುವವರ ಸಂಖ್ಯೆ.

5) ಒಂದು ಬ್ಯಾಂಕ್ ಖಾತೆಯನ್ನು ಹೊಂದಿರಬೇಕು ಅದು ರಾಷ್ಟ್ರೀಕೃತ ಅಥವಾ RBI ಇಂದ ಮಾನ್ಯತೆಯನ್ನು ಹೊಂದಿರುವ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿರಬೇಕು.

6) ರೇಷನ್ ಕಾರ್ಡ್ನ ಒಂದು ಪ್ರತಿ ಇಟ್ಟುಕೊಂಡಿರಬೇಕು

7) ಹಾಗೂ ವೋಟರ್ ಐಡಿ ಕಾರ್ಡನ್ನು ಮತ್ತೊಮ್ಮೆ ಮೇಲಿರುವ ಎಲ್ಲಾ ದಾಖಲೆಗಳು ಪಿಡಿಎಫ್(PDF) ರೂಪದಲ್ಲಿರಬೇಕು

8) ಅಕಸ್ಮಾತ್ ಮೊದಲು ನೀವು ಒಂದು ಸಲಿ ಅಪ್ಲೈ ಮಾಡಿದ್ದು ರಿಜೆಕ್ಟ್ ಆಗಿದ್ದರೆ ಅದರ ಒಂದು ಪ್ರತಿಯನ್ನು ಅಪ್ಲೋಡ್ ಮಾಡಬೇಕು.

ಕೃಷಿ ವಿಜ್ಞಾನ ಕೇಂದ್ರದಲ್ಲಿ ನೇಮಕಾತಿ: ₹1,77,500ರವರೆಗೆ ಸಂಬಳ!

Recruitment: ಹೆಡ್ ಕಾನ್ಸ್ಟೆಬಲ್, ಎಎಸ್ಐ ಹುದ್ದೆಗಳ ನೇಮಕಾತಿ…₹92,300 ವರೆಗೆ ಸಂಬಳ!

9) ಇವನ್ನೆಲ್ಲ ಅಪ್ಲೋಡ್ ಮಾಡಿದ ನಂತರ ನೆಕ್ಸ್ಟ್ ಅನ್ನು ಒತ್ತಬೇಕು ತದನಂತರ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಗೆ ಒಂದು OTP ಬರುತ್ತದೆ.

10) ನಂತರ ನೀವು ಕಾರ್ಮಿಕ ಕಾರ್ಡ್ ನೋಂದಾವಣಿಗೆ ಶುಲ್ಕ ಇರುತ್ತದೆ ಅದನ್ನು ಪಾವತಿ ಮಾಡಿದರೆ ಒಂದು Acknowledgement ಬರುತ್ತದೆ ಅದನ್ನು ನೀವು ಒಂದು ಪ್ರಿಂಟ್ ಔಟ್ ತೆಗೆದುಕೊಳ್ಳಿ.

11)Acknowledgement ನಲ್ಲಿ reference number ಇರುತ್ತದೆ ಇದನ್ನು ಬಳಸಿ ನಿಮ್ಮ ಕಾರ್ಡ್ ಯಾವ ಹಂತದಲ್ಲಿದೆ ಎಂದು ತಿಳಿಯಬಹುದು.

ಕಾರ್ಮಿಕ ಕಾರ್ಡ್ ಹೊಂದುವುದರಿಂದ ಲಾಭಗಳು ಏನಂದರೆ

ಸರ್ಕಾರದಿಂದಆಶ್ರಯ ಮನೆಗಳನ್ನು ಹಂಚುವಾಗ ಕಾರ್ಮಿಕ ಕಾರ್ಡ್ ಸಹ ಒಂದು ಮಾನದಂಡವಾಗಿ ಇರುತ್ತದೆ

SBI ಅಲರ್ಟ್‌:  ಈ ಸಂಖ್ಯೆಗಳಿಂದ ಕರೆ ಬಂದರೆ, ಯಾವುದೇ ಕಾರಣಕ್ಕೆ ಪ್ರತಿಕ್ರಿಯಿಸ ಬೇಡಿ ಎಂದ SBI

Petrol ಬೆಲೆಯಿಂದ ಕಂಗಾಲಾಗಿದ್ದ ಜನರಿಗೆ ಸಿಹಿಸುದ್ದಿ; 2025 ಕ್ಕೆ ಬರಲಿದೆ ಪರಿಸರ ಸ್ನೇಹಿ ಪೆಟ್ರೋಲ್!

BMTC ಬಸ್ಸುಗಳಲ್ಲಿಉಚಿತ ಪಾಸ್ ದೊರೆಯುತ್ತದೆ.

ಸಂಕಷ್ಟದ ಸಮಯಗಳಲ್ಲಿ ಕಾರ್ಮಿಕ ಕಾರ್ಡ್ ಹೊಂದಿದವರಿಗೆDBT( ನೇರ ಅಕೌಂಟಿಗೆ ಬ್ಯಾಂಕಿನ ಮೂಲಕ)ಸರ್ಕಾರದಿಂದ ಸಹಾಯಧನವು ಸಿಗುತ್ತದೆ

ಕಾರ್ಮಿಕ ಕಾರ್ಡ್ ಹೊಂದುವುದರಿಂದ ಕಾರ್ಮಿಕ

ಇಲಾಖೆಯಿಂದ ಬಡ್ಡಿದರದಲ್ಲಿ LOAN ಸಿಗುತ್ತದೆ.

ಕಾರ್ಮಿಕ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ₹400 ಇಂದ ₹6000 ಹೊರಗೆ ಆಸ್ಪತ್ರೆಗೆ ಸೇರಿದಾಗ ನೀಡಲಾಗುತ್ತದೆ

ಬಂದವರು ಮರಣ ಹೋದರೆ ಅವರ ನಾಮಿನಿಗೆ₹2,00,000 ಪರಿಹಾರ ಸಿಗುತ್ತದೆ

ಲೇಬರ್ ಕಾರ್ಡ್ಯಾ ಹೊಂದಿರುವ ಫಲಾನುಭವಿಯಮಕ್ಕಳ ವಿದ್ಯಾಭ್ಯಾಸದಲ್ಲಿ ಕೂಡ ಸಹಾಯವು ದೊರೆಯುತ್ತದೆ ( 2 ಮಕ್ಕಳಿಗೆ).

ಹೀಗೆ  ಹಲವಾರು ಲಾಭಗಳು ಮತ್ತು ಪ್ರೋತ್ಸಾಹಗಳು ಸರ್ಕಾರದಿಂದ ಕಾರ್ಮಿಕ ಕಾರ್ಡ್ ಹೊಂದಿದವರಿಗೆ ದೊರೆಯುತ್ತದೆ