Agripedia

ಕೃಷಿ ಭೂಮಿಯನ್ನು ವಿನ್ಯಾಸಗೊಳಿಸುವುದು ಏಕೆ ಮುಖ್ಯ? ಇಲ್ಲಿದೆ ಮಹತ್ವದ ಉತ್ತರ...

06 April, 2023 4:51 PM IST By: Kalmesh T
Importance of designing agricultural land

ಕೃಷಿ ಜಮೀನು ಹೊಸದಾಗಿ ಖರೀದಿಸಿರುವ ಮತ್ತು  ಕೃಷಿ ಭೂಮಿ ಹೊಂದಿರುವ ಕೃಷಿಕರಿಗೆ ಇಲ್ಲಿದೆ ಕೃಷಿ ಭೂಮಿಯನ್ನು ವಿನ್ಯಾಸ ಗೊಳಿಸುವುದರಿಂದಾಗುವ ಲಾಭಗಳ ಕುರಿತು ಮಾಹಿತಿ

ಕೃಷಿ ಭೂಮಿಯನ್ನು ಯೋಜನಾ ಬದ್ಧವಾಗಿ ವಿನ್ಯಾಸ ಮಾಡುವ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

ಕೃಷಿ ಜಮೀನು ಹೊಸದಾಗಿ ಖರೀದಿಸಿರುವ ಮತ್ತು  ಕೃಷಿ ಭೂಮಿ ಹೊಂದಿರುವ ಕೃಷಿಕರಿಗೆ ತಮ್ಮ ಜಮೀನುಗಳನ್ನು ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಕೃಷಿ ಭೂಮಿಯನ್ನು ಅನಂದ, ಆರೋಗ್ಯ, ಆರ್ಥಿಕತೆ ದೃಷ್ಟಿಯಲ್ಲಿ ವಿನ್ಯಾಸ ಮಾಡಿಕೊಳ್ಳುವುದು ಇಂದಿನ ಮತ್ತು ಮುಂದಿನ ದಿನಗಳಿಗೆ ಅತ್ಯವಶ್ಯಕವಾಗಿರುತ್ತದೆ.

ಫಾರ್ಮ್ ವಿನ್ಯಾಸದ ಉದ್ದೇಶವೇನು

ಕೃಷಿ ಭೂಮಿ ವಿನ್ಯಾಸದ  ಅಂತಿಮ ಉದ್ದೇಶವು ಕೃಷಿಕರ ಜೀವನ ಮಟ್ಟವನ್ನು ಸುಧಾರಿಸುವುದು ಹಾಗೂ ನಿರ್ವಹಣೆ ಸುಲಭವಾಗಿಸುವುದು. ಗರಿಷ್ಠ ಬಳಕೆಯ ಉದ್ದೇಶಗಳಿಗೆ ಕೃಷಿ ಭೂಮಿಯನ್ನು ತೆರೆದಿಡುವುದು,ನಿರ್ವಹಣಾ ವೆಚ್ಚ ಮತ್ತು ಸಂಪನ್ಮೂಲಗಳನ್ನು ಸಮರ್ಥವಾಗಿ ಕ್ರೂಢೀಕರಿಸಿಕೊಳ್ಳಲು ಇರುವ ಅವಕಾಶಗಳನ್ನು ಬಳಸಿಕೊಳ್ಳುವುದು.

ಕಬ್ಬಿನ ತ್ಯಾಜ್ಯ ಸುಡದೇ ಮುಚ್ಚಿಗೆ ಹಾಕುವುದರಿಂದ ಹೊಲಕ್ಕೆ ದೊರೆಯಲಿದೆ ಪೋಷಕಾಂಶ

ಫಾರ್ಮ್ ಲೇಔಟ್ ವಿನ್ಯಾಸ ಎಂದರೇನು?

ಜಮೀನಿನಲ್ಲಿ ವಿವಿಧ ಉದ್ದೇಶಗಳಿಗೆ, ಅನುಕೂಲತೆ ಮತ್ತು ಆರ್ಥಿಕತೆಗೆ ಅನುಗುಣವಾಗಿ ಎಲ್ಲಿ ಸ್ಥಳ ನಿಗಧಿಪಡಿಸಬೇಕು ಎಂಬುದರ ಕುರಿತು ಕೃಷಿಕರಿಗೆ ಸ್ಪಷ್ಟ ನೋಟವನ್ನು ನೀಡುತ್ತದೆ.

ಉದಾಹರಣೆಗೆ:ಬೆಳೆ ಆಯೋಜನೆ ನಕ್ಷೆ,ಫಾರ್ಮ ಹೌಸ್,ನೀರಿನ ಪೈಪ್‌ಗಳು, ರಸ್ತೆಗಳು,ವಿದ್ಯುತ್ ಕಂಬಗಳು, ಕುರಿ/ಮೇಕೆ/ಕೋಳಿ ಶೆಡ್,ಬೋರ್‌ವೆಲ್ ಮತ್ತು ನೀರಿನ ಪಂಪ್, ಕಟ್ಟಡಗಳು ಇತ್ಯಾದಿ.

ಬೆಳೆ ಆಯೋಜನೆ ಮುನ್ನ ಜಮೀನಿನ ವಿನ್ಯಾಸ (Layout Plan) ಕಡ್ಡಾಯವಾಗಿ ಮಾಡಿಕೊಳ್ಳಿ,ವಿನ್ಯಾಸ ಮಾಡದೇ ತೋಟ ಕಟ್ಟುವ ಉತ್ಸಹದಲ್ಲಿ ರಸ್ತೆ,ಟ್ರೆಂಚ್/ಇಂಗುಗುಂಡಿ ಮಾಡದೇ ಬೆಳೆ ಆಯೋಜನೆ,ನೀರಾವರಿ ಪೈಪ್ ಲೈನ್ ಎಲ್ಲಾ ಮಾಡಿದ ನಂತರ ಪುನಃ ಬದಲಾವಣೆ ಮಾಡುವುದರಿಂದ ಅಪಾರವಾದ ಆರ್ಥಿಕ ಮತ್ತು ಸಮಯ ನಷ್ಟವಾಗುತ್ತದೆ.

ಪಿಎಂ ಕಿಸಾನ್‌ ಪಟ್ಟಿಯಿಂದ ಈ ರೈತರನ್ನು ಕೈಬಿಟ್ಟ ಸರ್ಕಾರ! ಯಾರನ್ನು ಗೊತ್ತೆ?

ಜಮೀನಿನ ವಿನ್ಯಾಸ ಮಾಡಿದ ನಂತರ ನೀರಾವರಿಗೆ ಪೈಪ್ ಅಳವಡಿಸುವುದು ಮತ್ತು ಗಿಡಗಳ ಆಯೋಜನೆ ಮಾಡಬೇಕು. ವಿನ್ಯಾಸ ಮಾಡುವುದರಿಂದ ಸಾಕಷ್ಟು ಅನುಕೂಲ,ವಿವಿಧ ಉದ್ದೇಶಗಳಿಗೆ ಬಳಕೆ ಮಾಡುವ ಅವಕಾಶ,ಜಮೀನಿನ ಮೌಲ್ಯ ಎಲ್ಲಾ ರೀತಿಯಿಂದಲೂ ವೃದ್ಧಿಯಾಗುತ್ತದೆ.

ಪ್ರತ್ಯೇಕ ಪ್ಲಟ್ ನಿರ್ಮಾಣ ಮಾಡುವುದರಿಂದ ಭೂಮಿಯನ್ನು ಬಾಡಿಗೆ ನೀಡಲು,ಮಾರಾಟ ಮತ್ತು ವಿಭಾಗ ಮಾಡಲು ಅನುಕೂಲ. 

ಫಾರ್ಮ್ ವಿನ್ಯಾಸದಿಂದ ಆರ್ಥಿಕ ಮತ್ತು ಸುಸ್ಥಿರ ಸದೃಢತೆ ಸಾಧಿಸುವುದು ಹೇಗೆ?

ಸಣ್ಣ ಅಥವಾ ದೊಡ್ಡ ಕೃಷಿ ಭೂಮಿ ಹೊಂದಿರುವ ಕೃಷಿಕರಿಗೆ ಜಮೀನಿನ ನಿರ್ವಹಣೆ,ಕಾರ್ಮಿಕರ ಅಭಾವ,ಕೃಷಿಕರ ಜೀವನ ನಿರ್ವಹಣೆ,ಕಾರ್ಮಿಕರ ವೇತನ ನೀಡಲು ನಿರೀಕ್ಷಿತ ಆದಾಯವಿಲ್ಲದೇ ಇರುವುದರಿಂದ ಆರ್ಥಿಕವಾಗಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ.

ಆರ್ಥಿಕವಾಗಿ ಬಲಗೊಳ್ಳಲು ಮತ್ತು ಕಾರ್ಮಿಕರಿಗೆ ಉತ್ತಮ ಸೌಲಭ್ಯ ಮತ್ತು ವೇತನ ನೀಡಲು ಕೃಷಿ ಬೆಳೆ ಬೆಳೆಯುವುದರ ಜೊತೆಗೆ ಕೃಷಿಗೆ ಪೂರಕವಾದ ಮತ್ತು ಕೃಷಿ ಭೂಮಿ ಬಳಸಿಕೊಂಡು ಸ್ಥಳೀಯವಾಗಿ ಮಾಡಬಹುದಾದ ವೃತ್ತಿ/ಉದ್ಯಮ ನೆಡೆಸುವುದು ಅನಿವಾರ್ಯ.

ಉದಾಹರಣೆಗೆ:ನರ್ಸರಿ, ಬೀಜ ಉತ್ಪಾದನಾ ಕೇಂದ್ರ, ಕೃಷಿ ತರಬೇತಿ ಕೇಂದ್ರ,ಕೃಷಿ ಪ್ರವಾಸೋದ್ಯಮ,ಫಾರ್ಮ್ ಸ್ಟೇ,ಫಾರ್ಮ್ ಕಾಟೇಜ್, ಗುಡಿ ಕೈಗಾರಿಕೆ,ಧ್ಯಾನ ಕೇಂದ್ರ, ನೈಸರ್ಗಿಕ ಚಿಕೆತ್ಸೆ ಕೇಂದ್ರ, ವಿಶ್ರಾಂತಿ ತಾಣ, ಕುಟುಂಬ ಆಹಾರ ವನ, ಇತ್ಯಾದಿಗಳನ್ನು ಸ್ವಂತ ಅಥವಾ ಬಾಡಿಗೆ ಆಧಾರದಲ್ಲಿ ನಿರ್ವಹಿಸಿ ಪರಸ್ಪರ ಅನುಕೊಲ ಪಡೆಯುವುದು.

ಪ್ರತಿ ಕುಟುಂಬದವರು ತಮ್ಮ ಹತ್ತಿರವಿರುವ ಕೃಷಿ ಭೂಮಿಯನ್ನು ಸ್ವಂತ ಅಥವಾ ಬಾಡಿಗೆಗೆ ಹೊಂದುವುದು ಮತ್ತು ತಮ್ಮ ಕುಟುಂಬಕ್ಕೆ ಬೇಕಾದ ಆಹಾರ ಬೆಳೆದುಕೊಳ್ಳುವುದು,ವಾರಂತ್ಯದಲ್ಲಿ ಕುಟುಂಬ ಸದಸ್ಯರೊಂದಿಗೆ ಕೃಷಿ ಭೂಮಿಯಲ್ಲಿ ಕೃಷಿ ಕೆಲಸ ನಿರ್ವಹಿಸುವುದು ಮತ್ತು ಕೃಷಿ ಭೂಮಿಯಲ್ಲಿ ವಿಶ್ರಾಂತಿ ಪಡೆಯುವುದು.

ನಗರದ ವಾಹನ ದಟ್ಟಣೆ ತಪ್ಪಿಸಲು ಕೃಷಿ ಭೂಮಿಯಿಂದ ವರ್ಕ್ ಫ್ರಮ್ ಹೋಮ್ ರೀತಿ ವರ್ಕ್ ಫ್ರಮ್ ಫಾರ್ಮ್ ಬದಲಾವಣೆ, ಹೊಸ ಸ್ಟಾರ್ಟ್ ಅಪ್ ಸ್ಥಾಪನೆ ಇತ್ಯಾದಿ ಯೋಜನೆ ರೂಪಿಸುವುದರಿಂದ ಹಳ್ಳಿಯಿಂದ ನಗರಕ್ಕೆ ವಲಸೆ ತಪ್ಪಿಸುವುದರಿಂದ ಹಳ್ಳಿಯಲ್ಲಿ ಉದ್ಯೋಗ ಸೃಷ್ಟಿ,ಭೂ ರಹಿತ ಮತ್ತು ವೃತ್ತಿ ರಹಿತ ಯುವಕರಿಗೆ ಉದ್ಯೋಗವಾಕಾಶವಾಗುತ್ತದೆ.

ನಿಮ್ಮ ಕೃಷಿ ಭೂಮಿಯನ್ನು ವಿನ್ಯಾಸಗೊಳಿಸಲು ಸಲಹೆ ಅಗತ್ಯವಿದೆಯೇ?

ನಮ್ಮ 30 ವರ್ಷಗಳ ಪರಿಣತಿಯೊಂದಿಗೆ ನಿಮ್ಮ ಅನುಭವವನ್ನು ಸಂಯೋಜಿಸಿ, ನಿಮ್ಮ ಭೂಮಿ ಮತ್ತು ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ವಿನ್ಯಾಸ ಸಿದ್ದಪಡಿಸಿಕೊಡಲಾಗುವುದು.

ಭೂಮಿ ಮತ್ತು ನೀರಾವರಿ ವಿನ್ಯಾಸ,ಮಣ್ಣಿನ ಸಿದ್ಧತೆ,ಬೆಳೆ ಆಯೋಜನೆ ಮತ್ತು ನಿರ್ವಹಣೆ, ಕೃಷಿ ಮತ್ತು ಕೃಷಿಯೇತರ ಆದಾಯ ಜೋಡಣೆಯ ಅವಕಾಶಗಳು,ಇನ್ನಿತರೇ ಕೃಷಿ ಸಂಬಂಧಿತ ವಿಚಾರಗಳ ಬಗ್ಗೆ ಸಮಾಲೋಚನೆಗಾಗಿ ಸಂಪರ್ಕಿಸಿ.

ಲೇಖಕರು : ಪ್ರಶಾಂತ್ ಜಯರಾಮ್

Agriculturist & Agri Consultant.

Mob: 93424 34530